ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ 194 ರನ್​ಗಳ ಟಾರ್ಗೆಟ್

news18
Updated:August 3, 2018, 8:22 PM IST
ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ 194 ರನ್​ಗಳ ಟಾರ್ಗೆಟ್
England's Sam Curran bats during the first day of the first test cricket match between England and India at Edgbaston in Birmingham, England, Wednesday, Aug. 1, 2018. (AP Photo/Rui Vieira)
news18
Updated: August 3, 2018, 8:22 PM IST
ನ್ಯೂಸ್ 18 ಕನ್ನಡ

ಬರ್ಮಿಂಗ್​​ಹ್ಯಾಮ್​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಕ್ರಿಕೆಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್​​ ಆಡಿದ ಇಂಗ್ಲೆಂಡ್ 180 ರನ್​ಗೆ ಆಲೌಟ್ ಆಗಿದೆ. ಈ ಮೂಲಕ ಇಂಗ್ಲೆಂಡ್ 193 ರನ್​​ಗಳ ಮುನ್ನಡೆ ಪಡೆದುಕೊಂಡಿದ್ದು, ಭಾರತಕ್ಕೆ ಗೆಲ್ಲಲು 194 ರನ್​​ ಟಾರ್ಗೆಟ್ ನೀಡಿದೆ.

ಎರಡನೇ ದಿನದಾಟದ ಅಂತ್ಯಕ್ಕೆ 9 ರನ್​ಗಳಿಸಿ 1 ವಿಕೆಟ್ ಕಳೆದುಕೊಂದ್ದ ಇಂಗ್ಲೆಂಡ್ ಮೂರನೇ ದಿನವಾದ ಇಂದು ಬ್ಯಾಟಿಂಗ್ ಮುಂದುವರೆಸಿತು. ಆದರೆ ಆಂಗ್ಲರಿಗೆ ಆರ್. ಅಶ್ವಿನ್ ಹಾಗೂ ಇಶಾಂತ್ ಶರ್ಮಾ ಶಾಕ್ ಮೇಲೆ ಶಾಕ್ ನೀಡಿದರು. ಆಟ ಪ್ರಾರಂಭಿಸಿದ ಜೆನ್ನಿಂಗ್ಸ್​ ಹಾಗೂ ನಾಯಕ ಜೋ ರೂಟ್ ಅಶ್ವಿನ್ ಸ್ಪಿನ್ ಮೋಡೊಗೆ ವಿಕೆಟ್ ಒಪ್ಪಿಸಿದ್ದಾರೆ. 8 ರನ್​ ಗಳಿಸಿ ಜೆನ್ನಿಂಗ್ಸ್ ಅವರು​ ಅಶ್ವಿನ್ ಎಸೆತದಲ್ಲಿ ರಾಹುಲ್​ಗೆ ಕ್ಯಾಚ್ ಕೊಟ್ಟು ಔಟ್ ಆದರೆ, ಮೊದಲ ಇನ್ನಿಂಗ್ಸ್​ನಲ್ಲಿ ಮಿಂಚಿದ್ದ ರೂಟ್ ಕೇವಲ 14 ರನ್​​ಗೆ ಪೆವಿಲಿಯನ್ ಸೇರಿಕೊಂಡರು. ಅಂತೆಯೆ ಡೇವಿಡ್ ಮಲನ್(20), ಜಾನಿ ಬೈರ್ಸ್ಟೊ(28), ಬೆನ್ ಸ್ಟೋಕ್ಸ್​ (6) ಒಬ್ಬರಹಿಂದೆ ಒಬ್ಬರಂತೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಔಟ್ ಆದರು. ಬಳಿಕ ಬಂದ ಜಾಸ್ ಬಟ್ಲರ್ ಕೇವಲ 1 ರನ್​ಗೆ ನಿರ್ಗಮಿಸಿದರೆ, ಆದಿಲ್ ರಶೀದ್ 16, ಸ್ಟುವರ್ಟ್​ ಬ್ರಾಡ್ 11 ರನ್​​ಗೆ ಇನ್ನಿಂಗ್ಸ್​ ಮುಗಿಸಿದರು. ಕೊನೆ ಹಂತದಲ್ಲಿ ವಿಕೆಟ್ ಉರುಳುತ್ತಿದ್ದರೆ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಯಾಮ್ ಕುರ್ರನ್ 65 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್​​ನೊಂದಿಗೆ 63 ರನ್​ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿ ಉಮೇಶ್ ಯಾದವ್​ಗೆ ವಿಕೆಟ್ ಒಪ್ಪಿಸಿದರು.

ಅಂತಿಮವಾಗಿ ಇಂಗ್ಲೆಂಡ್ 193 ರನ್​​ಗಳ ಮುನ್ನಡೆ ಸಾಧಿಸಿ, ಟೀಂ ಇಂಡಿಯಾಕ್ಕೆ ಗೆಲ್ಲಲು 194 ರನ್​ಗಳ ಗುರಿ ನೀಡಿದೆ. ಭಾರತ ಪರ ಇಶಾಂತ್ ಶರ್ಮಾಗೆ 5 ವಿಕೆಟ್ ಕಿತ್ತು ಮಿಂಚಿದರೆ, ಆರ್​. ಅಶ್ವಿನ್​ 3 ಹಾಗೂ ಉಮೇಶ್​ ಯಾದವ್​​​ಗೆ 2 ವಿಕೆಟ್​​ ಪಡೆದರು.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...