ಕೊಹ್ಲಿ ನಾಯಕತ್ವದಡಿಯಲ್ಲಿ ಅಶ್ವಿನ್ ಹೊಸ ದಾಖಲೆ

news18
Updated:August 3, 2018, 10:28 PM IST
ಕೊಹ್ಲಿ ನಾಯಕತ್ವದಡಿಯಲ್ಲಿ ಅಶ್ವಿನ್ ಹೊಸ ದಾಖಲೆ
news18
Updated: August 3, 2018, 10:28 PM IST
ನ್ಯೂಸ್ 18 ಕನ್ನಡ

ಟೀಮ್ ಇಂಡಿಯಾ ಆಫ್​ ಸ್ಪಿನ್ನರ್ ಆರ್​. ಅಶ್ವಿನ್ ಅವರು ವಿರಾಟ್​ ಕೊಹ್ಲಿ ನಾಯಕತ್ವದಡಿಯಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಕ್ರಿಕೆಟ್​​ನಲ್ಲಿ ಅಶ್ವಿನ್ ಈ ಸಾಧನೆಯನ್ನು ಮಾಡಿದ್ದಾರೆ.

ಹೀಗೆ ನಾಯಕನ ಅಡಿಯಲ್ಲಿ ವೇಗವಾಗಿ 200 ವಿಕೆಟ್ ಸಂಪಾದಿಸಿದ ಬೌಲರ್​​ಗಳಲ್ಲಿ ಅಶ್ವಿನ್​​ 2ನೇ ಸ್ಥಾನದಲ್ಲಿದ್ದು 34 ಪಂದ್ಯಗಳಲ್ಲಿ 200 ವಿಕೆಟ್ ಕಬಳಿಸಿದ್ದಾರೆ. ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್​,  ಸನತ್ ಜಯಸೂರ್ಯ ನಾಯಕತ್ವದಡಿಯಲ್ಲಿ ಕೇವಲ 30 ಪಂದ್ಯಗಳಲ್ಲಿ 200 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.



ಅಂತೆಯೆ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಅಶ್ವಿನ್ 34 ಪಂದ್ಯದಲ್ಲಿ 200 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ, ರವೀಂದ್ರ ಜಡೇಜಾ 22 ಪಂದ್ಯದಲ್ಲಿ 116 ವಿಕೆಟ್ ಕಿತ್ತು 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಮೊಹಮ್ಮದ್ ಶಮಿ 21 ಪಂದ್ಯದಲ್ಲಿ 75 ವಿಕೆಟ್ ಪಡೆದಿದ್ದರೆ, 4ನೇ ಹಾಗೂ 5ನೇ ಸ್ಥಾನದಲ್ಲಿ ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ಇದ್ದಾರೆ.
First published:August 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ