• Home
  • »
  • News
  • »
  • sports
  • »
  • Virat Kohli: ಜಾಹೀರಾತಿಗೆ ದುಬಾರಿ ಹಣ ಕೇಳಿದ್ರಾ ಕೊಹ್ಲಿ? ವಿರಾಟ್​ಗೆ ಕೊಡುವ ಅರ್ಧ ಹಣಕ್ಕೆ ಆ್ಯಕ್ಟ್ ಮಾಡಿದ್ರಾ 11 ಕ್ರಿಕೆಟರ್ಸ್?

Virat Kohli: ಜಾಹೀರಾತಿಗೆ ದುಬಾರಿ ಹಣ ಕೇಳಿದ್ರಾ ಕೊಹ್ಲಿ? ವಿರಾಟ್​ಗೆ ಕೊಡುವ ಅರ್ಧ ಹಣಕ್ಕೆ ಆ್ಯಕ್ಟ್ ಮಾಡಿದ್ರಾ 11 ಕ್ರಿಕೆಟರ್ಸ್?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Virat Kohli: ಶಾರ್ಕ್ ಟ್ಯಾಂಕ್ ಇಂಡಿಯಾದ ಎರಡನೇ ಸೀಸನ್ ನಿಂದ ಹೊರಗುಳಿದಿರುವ ಅಶ್ನೀರ್ ಗ್ರೋವರ್, ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಜಾಹೀರಾತಿಗಾಗಿ ಹಿಂದೊಮ್ಮೆ ತಿರಸ್ಕರಿಸಿದ್ದನ್ನು ಈಗ ನೆನಪಿಸಿಕೊಂಡಿದ್ದಾರೆ. 

  • Share this:

ಸಾಮಾನ್ಯವಾಗಿ ನಮ್ಮಲ್ಲಿ ಈ ಕ್ರಿಕೆಟ್ (Cricket) ಆಟಗಾರರು ಮತ್ತು ಬಾಲಿವುಡ್ (Bollywood) ನಟ ಮತ್ತು ನಟಿಯರಿಗೆ ಜಾಹೀರಾತಿನಲ್ಲಿ ನಟಿಸಲು ಎಷ್ಟು ಬೇಕಾದರೂ ಅಷ್ಟು ಹಣವನ್ನು ನೀಡಿ ಸೇರಿಸಿಕೊಳ್ಳುವುದನ್ನು ನಾವೆಲ್ಲಾ ನೋಡಿದ್ದೇವೆ. ಅದರಲ್ಲೂ ಬೇಡಿಕೆಯಲ್ಲಿರುವ ಜನಪ್ರಿಯ ಕ್ರಿಕೆಟ್ ಆಟಗಾರರಿಗಂತೂ ತುಂಬಾನೇ ಡಿಮ್ಯಾಂಡ್ ಮತ್ತು ಬೇಡಿಕೆ ಇರುತ್ತದೆ. ಆದರೆ ಇಲ್ಲೊಬ್ಬ ಸ್ಟಾರ್ ಕ್ರಿಕೆಟ್ ಆಟಗಾರನಿಗೆ ಜಾಹೀರಾತಿನಲ್ಲಿ ನೀವು ಬೇಡ ಅಂತ ಹೇಳಿದ್ದರಂತೆ ನೋಡಿ. ಯಾರಪ್ಪಾ ಆ ಕ್ರಿಕೆಟಿಗ ಅಂತ ನೀವು ತಿಳಿದುಕೊಳ್ಳಲು ತುಂಬಾನೇ ಕಾತುರರಾಗಿರಬೇಕಲ್ಲವೇ? ಅವರು ಮತ್ಯಾರೂ ಅಲ್ಲ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅಂತೆ.


ವಿರಾಟ್ ಜಾಹಿರಾತಿನ ಬಗ್ಗೆ ನೆನಪಿಸಿಕೊಂಡ ಅಶ್ನೀರ್:


ಶಾರ್ಕ್ ಟ್ಯಾಂಕ್ ಇಂಡಿಯಾದ ಎರಡನೇ ಸೀಸನ್ ನಿಂದ ಹೊರಗುಳಿದಿರುವ ಅಶ್ನೀರ್ ಗ್ರೋವರ್, ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಜಾಹೀರಾತಿಗಾಗಿ ಹಿಂದೊಮ್ಮೆ ತಿರಸ್ಕರಿಸಿದ್ದನ್ನು ಈಗ ನೆನಪಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಮಾಜಿ ಭಾರತ್ ಪೇ ಸಹ-ಸಂಸ್ಥಾಪಕರಾದ ಅಶ್ನೀರ್ ಅವರು, ‘ವಿರಾಟ್ ಅವರೊಂದಿಗೆ ಜಾಹೀರಾತಿಗಾಗಿ ಹಿಂದೊಮ್ಮೆ ಚಿತ್ರೀಕರಣ ಮಾಡಬೇಕಾಗಿತ್ತು. ಆದರೆ ಅವರನ್ನು ಆ ಜಾಹೀರಾತಿನಲ್ಲಿ ಸೇರಿಸಿಕೊಳ್ಳಲು ನಿರಾಕರಿಸಿದರು ಮತ್ತು ಬದಲಿಗೆ ಇತರ 11 ಆಟಗಾರರನ್ನು, ವಿರಾಟ್ ಗೆ ಪಾವತಿಸಬೇಕಾದ ಅರ್ಧದಷ್ಟು ಹಣವನ್ನು ನೀಡಿ ಅವರನ್ನೆಲ್ಲಾ ಆ ಜಾಹೀರಾತಿನಲ್ಲಿ ಸೇರಿಸಿಕೊಂಡರು‘ ಎಂದು ಬಹಿರಂಗಪಡಿಸಿದರು.


ಅಶ್ನೀರ್ ಅವರು ವಗೇರಾ ವಗೇರಾ ಪಾಡ್ಕಾಸ್ಟ್ ನಲ್ಲಿ ಮಾತನಾಡುವಾಗ ಈ ವಿಚಾರವನ್ನು ಹಂಚಿಕೊಂಡರು. ನಂತರ ಅವರು ಈ ಬಗ್ಗೆ ಒಂದು ಪಾರ್ಟಿಯಲ್ಲಿ ವಿರಾಟ್ ಗೆ ಹೇಳಿದರಂತೆ, ಅದಕ್ಕೆ ವಿರಾಟ್ ಅವರು ಉತ್ತಮ ವ್ಯವಹಾರ ನಿರ್ಧಾರವನ್ನು ಮಾಡಿದ್ದೀರಿ ಅಂತ ಅಶ್ನೀರ್ ಅವರನ್ನು ಶ್ಲಾಘಿಸಿದರು ಎಂದು ಖುದ್ದು ಅಶ್ನೀರ್ ಅವರೇ ಬಹಿರಂಗಪಡಿಸಿದರು.


ಇದನ್ನೂ ಓದಿ: RCB 2023: ಹೊಸ ಜೋಶ್, ಹೊಸ ಲೋಗೋ ಜೊತೆ ಐಪಿಎಲ್‌ಗೆ ಬರಲಿದೆ RCB! ಈ ಸಲನಾದ್ರೂ ಕಪ್ ನಮ್ಮದಾಗಲಿ ಅಂತಿದ್ದಾರೆ ಫ್ಯಾನ್ಸ್!


ಈ ಮಾಜಿ 'ಶಾರ್ಕ್' ಅಶ್ನೀರ್ ಅವರು, ಕೊಹ್ಲಿಯನ್ನು ಜಾಹೀರಾತಿನಲ್ಲಿ ಸೇರಿಸಿಕೊಳ್ಳೋಣ ಅಂತ ನಿರ್ಧರಿಸಿದಾಗ, ಅವರು ನನಗೆ ಅವರು ಪಡೆಯುವ ಸಂಭಾವನೆಯನ್ನು ಹೇಳಿದರು. ನಾನು ಈಗ ಆ ಮೊತ್ತದ ಬಗ್ಗೆ ಮಾತನಾಡುವುದಿಲ್ಲ, ಏಕೆಂದರೆ ವಿರಾಟ್ ಅದರ ಬಗ್ಗೆ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ನಂತರ ಅವರು ಅನುಷ್ಕಾ ಅವರನ್ನು ಸಹ ಈ ಜಾಹೀರಾತಿನಲ್ಲಿ ಸೇರಿಸಿಕೊಳ್ಳಬೇಕೆಂದು ಕೇಳಿದ್ದಾಗಿ ಅಶ್ನೀರ್ ಹೇಳಿದರು. ಆಗ ನಾನು ಅವರು ನೀಡಿದಂತಹ ಡೀಲ್ ಅನ್ನು ನಿರಾಕರಿಸಿದೆ, 'ನಾನು ಇಲ್ಲಿ ಲೆಹೆಂಗಾ ಅಥವಾ ಶೆರ್ವಾನಿ ಮಾರುತ್ತಿದ್ದೇನೆಯೇ' ಎಂದೆ. ಅದನ್ನು ಈಗಾಗಲೇ ಮಾನ್ಯವರ್ ಅವರು ತಮ್ಮ ಜಾಹೀರಾತಿನಲ್ಲಿ ಮಾಡಿದ್ದಾರೆ ಎಂದು ಅಶ್ನೀರ್ ಹೇಳಿದರು.


ಹೆಚ್ಚಿನ ಹಣ ಕೇಳಿದ್ರಾ ವಿರಾಟ್?:


ಅವರು ಅದೇ ಒಪ್ಪಂದವನ್ನು ತಿರುಚಿದರು ಮತ್ತು ಇತರ 11 ಆಟಗಾರರನ್ನು ವಿರಾಟ್ ಕೇಳಿದ ಹಣದ ಅರ್ಧದಷ್ಟು ಮೊತ್ತದಲ್ಲಿ ಪಡೆದಿದ್ದಾಗಿ ಹೇಳಿದರು. ಈ ಸಂದರ್ಭದಲ್ಲಿ ಅಶ್ನೀರ್ ಅವರು ಬೇರೆ ಆಟಗಾರರನ್ನು ತೆಗೆದುಕೊಳ್ಳುವ ಬಗ್ಗೆ ಮಾತನಾಡಿದರು, ಆದರೆ ಅವರಿಗೆ ವಿರಾಟ್ ಗಿಂತ ಬೇರೆ ಯಾರೂ ಸೂಕ್ತವಲ್ಲ ಎನ್ನಲಾಯಿತು. ಅದಾಗ್ಯೂ, ಅವರು ವಿರಾಟ್ ಅವರಿಗೆ ನೀಡಬೇಕಾಗಿದ್ದ ಸಂಭಾವನೆಯ ಅರ್ಧದಷ್ಟು ಮೊತ್ತದಲ್ಲಿ ಇತರೆ 11 ಆಟಗಾರರನ್ನು ಕರೆತಂದಿದ್ದಾಗೆ ಅಶ್ನೀರ್ ತಮ್ಮ ಸಂದರ್ಶನದಲ್ಲಿ ಹೇಳಿದರು.


ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 1:


ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 1 ರ ಕಾರಣದಿಂದಾಗಿ ಭಾರಿ ಜನಪ್ರಿಯತೆ ಪಡೆದ ಅಶ್ನೀರ್ ಪ್ರಸ್ತುತ ತಮ್ಮ ಆತ್ಮಚರಿತ್ರೆಯನ್ನು 'ದೋಗ್ಲಾಪನ್' ಎಂದು ಹೆಸರಿಸಿ ಅದರ ಪ್ರಚಾರ ಮಾಡುತ್ತಿದ್ದಾರೆ. ಅವರ ಸ್ಥಾನವನ್ನು ಈಗ ಇತ್ತೀಚಿನ ಸೀಸನ್ ನಲ್ಲಿ ಕಾರ್ ದೆಕೋ ಸಿಇಒ ಮತ್ತು ಸಹ-ಸಂಸ್ಥಾಪಕ ಅಮಿತ್ ಜೈನ್ ತುಂಬಿದ್ದಾರೆ.

Published by:shrikrishna bhat
First published: