ರಿಷಭ್ ಪಂತ್ ವಿಶ್ವಕಪ್​​ನಲ್ಲಿ ಆಡಬೇಕು: ನೆಹ್ರಾ ಕೊಟ್ಟ 5 ಕಾರಣಗಳು ಏನು ಗೊತ್ತಾ?

ಪಂತ್​ರನ್ನು ಯಾವುದೇ ಸ್ಥಾನದಲ್ಲಿ ಬೇಕಾದರು ಕಣಕ್ಕಿಳಿಸಬಹುದು. 1 ರಿಂದ 7 ಕ್ರಮಾಂಕದಲ್ಲಿ ಪಂತ್​ರನ್ನು ಪರಿಸ್ಥಿತಿಗೆ ತಕ್ಕಂತೆ ಎಲ್ಲಿ ಬೇಕಾದಲ್ಲಿ ಆಡಿಸಿದರೆ, ಬ್ಯಾಟ್ ಬೀಸುವ ಸಾಮರ್ಥ್ಯ ಅವರು ಹೊಂದಿದ್ದಾರೆ- ಆಶಿಶ್ ನೆಹ್ರಾ

Vinay Bhat | news18
Updated:May 2, 2019, 3:22 PM IST
ರಿಷಭ್ ಪಂತ್ ವಿಶ್ವಕಪ್​​ನಲ್ಲಿ ಆಡಬೇಕು: ನೆಹ್ರಾ ಕೊಟ್ಟ 5 ಕಾರಣಗಳು ಏನು ಗೊತ್ತಾ?
ಆಶಿಶ್ ನೆಹ್ರಾ ಹಾಗೂ ರಿಷಭ್ ಪಂತ್
Vinay Bhat | news18
Updated: May 2, 2019, 3:22 PM IST
2019 ವಿಶ್ವಕಪ್​ನಲ್ಲಿ ಡೆಲ್ಲಿ ಡ್ಯಾಶರ್ ರಿಷಭ್ ಪಂತ್​​ಗೆ ಸ್ಥಾನವಿದೆಯೆ ಎಂಬ ಕುತೂಹಲ ಎಲ್ಲರಲ್ಲು ಮನೆಮಾಡಿದೆ. ಈಗಾಗಲೇ ಪಂತ್ ಭಾರತದ ವಿಶ್ವಕಪ್ ತಂಡದಲ್ಲಿ ಇರಬೇಕು ಎಂದು ಅನೇಕ ಕ್ರಿಕೆಟ್ ದಿಗ್ಗಜರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಸಾಲಿಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಕೂಡ ಸೇರಿಕೊಂಡಿದ್ದು, ಪಂತ್ ವಿಶ್ವಕಪ್​ನಲ್ಲಿ ಆಡಬೇಕು ಎಂದಿದ್ದಾರೆ. ಜೊತಗೆ ಯಾಕೆ ಎಂಬುದಕ್ಕೆ ಕಾರಣವನ್ನೂ ನೀಡಿದ್ದಾರೆ.

ಟೀಂ ಇಂಡಿಯಾದ ಬ್ಯಾಟಿಂಗ್ ಲೈನ್​ಅಪ್​ ನೋಡುವುದಾದರೆ ಓಪನರ್ ಶಿಖರ್ ಧವನ್​ರನ್ನು ಹೊರತು ಪಡಿಸಿ ಮೊದಲ 7ನೇ ಕ್ರಮಾಂಕದ ವರೆಗೆ ಯಾವೊಬ್ಬ ಎಡಗೈ ಬ್ಯಾಟ್ಸ್​ಮನ್​​ ತಂಡದಿಲ್ಲಿಲ್ಲ. ಹೀಗಾಗಿ ಭಾರತಕ್ಕೆ ಮತ್ತೊಬ್ಬ ವಿಶೇಷವಾಗಿರುವ ಲೆಫ್ಟ್​​ಹ್ಯಾಂಡ್​ ಬ್ಯಾಟ್ಸ್​ಮನ್​​​ ಬೇಕಾಗಿದೆ. ಇದಕ್ಕೆ ರಿಷಭ್ ಪಂತ್​ ಸಂಪೂರ್ಣವಾಗಿ ಫಿಟ್ ಆಗುತ್ತಾರೆ ಎಂದಿದ್ದಾರೆ.

ಎರಡನೆಯದಾಗಿ ಪಂತ್​ರನ್ನು ಯಾವುದೇ ಸ್ಥಾನದಲ್ಲಿ ಬೇಕಾದರು ಕಣಕ್ಕಿಳಿಸಬಹುದು. 1 ರಿಂದ 7 ಕ್ರಮಾಂಕದಲ್ಲಿ ಪಂತ್​ರನ್ನು ಪರಿಸ್ಥಿತಿಗೆ ತಕ್ಕಂತೆ ಎಲ್ಲಿ ಬೇಕಾದಲ್ಲಿ ಆಡಿಸಿದರೆ, ಬ್ಯಾಟ್ ಬೀಸುವ ಸಾಮರ್ಥ್ಯ ಅವರು ಹೊಂದಿದ್ದಾರೆ.

ಇದನ್ನೂ ಓದಿ: ಆಸೀಸ್ ಸರಣಿಗೆ ಕೊಹ್ಲಿ ಬಳಗ: ವಿಶ್ವಕಪ್​​ಗೂ ಮುನ್ನ ಬಿಸಿಸಿಐಯಿಂದ ಕೊನೆಯ ಪ್ರಯೋಗ

ಮೈದಾನದಲ್ಲಿ ಚೆಂಡನ್ನು ಸುಲಭವಾಗಿ ಸಿಕ್ಸ್​ಗೆ ಅಟ್ಟುವ ಸಾಮರ್ಥ್ಯ ಹೊಂದಿರುವ ಎರಡನೇ ಆಟಗಾರ ರಿಷಭ್ ಪಂತ್. ಮೊದಲ ಸ್ಥಾನ ರೋಹಿತ್ ಶರ್ಮಾ ಅಲಂಕರಿಸಿದ್ದರೆ, ಪಂತ್ ಲೀಲಾಜಾಲವಾಗಿ ಸಿಕ್ಸ್​ ಸಿಡಿಸುತ್ತಾರೆ ಎಂದಿದ್ದಾರೆ.

ರಿಷಭ್ ಪಂತ್ ಒಬ್ಬ ಮ್ಯಾಚ್ ವಿನ್ನಿಂಗ್ ಆಟಗಾರ. ಸದ್ಯ ಭಾರತದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್​ಪ್ರೀತ್ ಬುಮ್ರಾ ಪಂದ್ಯದ ಗತಿಯನ್ನೆ ಬದಲಿಸುವ ಮೂವರು ಆಟಗಾರರಿದ್ದಾರೆ. ಆದರೆ, ಇಲ್ಲಿ 4ನೇ ಸ್ಥಾನದಲ್ಲಿ ರಿಷಭ್ ಪಂತ್ ಇದ್ದಾರೆ ಎಂದು ನೆಹ್ರಾ ಹೇಳಿದ್ದಾರೆ.
Loading...

ಇದನ್ನೂ ಓದಿ: ಮೌನ ಮುರಿದ ಕಾರ್ತಿಕ್; ಸಿಂಗಲ್ ರನ್ ನಿರಾಕರಿಸಿದ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ

ಅಂಬಟಿ ರಾಯುಡು, ದಿನೇಶ್ ಕಾರ್ತಿಕ್ ಹಾಗೂ ಕೇದರ್ ಜಾಧವ್ ಅದ್ಭುತ ಆಟಗಾರರು. ಆದರೆ, ಈ ಮೂವರು ಆಟಗಾರರದ್ದು ಒಂದೆ ಹೋಲಿಕೆ, ಭಿನ್ನತೆಯಿಲ್ಲ. ಇದಕ್ಕಾಗಿಯೆ ಆ ಕ್ರಮಾಂಕದಲ್ಲಿ ವಿಶಿಷ್ಠ ಶೈಲಿಯಲ್ಲಿ ಬ್ಯಾಟ್ ಬೀಸುವ ಆಟಗಾರನ ಅವಶ್ಯಕತೆಯಿದೆ. ಅದು ರಿಷಭ್ ಪಂತ್​​ಗೆ ಸರಿಯಾಗಿ ಹೊಮ್ಮುತ್ತದೆ ಎಂದಿದ್ದಾರೆ.

First published:February 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626