ಆಶಿಶ್ ನೆಹ್ರಾ ನೂತನ ಆರ್​ಸಿಬಿ ಕೋಚ್


Updated:September 5, 2018, 8:24 PM IST
ಆಶಿಶ್ ನೆಹ್ರಾ ನೂತನ ಆರ್​ಸಿಬಿ ಕೋಚ್
ಆಶೀಶ್ ನೆಹ್ರಾ

Updated: September 5, 2018, 8:24 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಸೆ. 05): ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಶೀಶ್ ನೆಹ್ರಾ ಅವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಕೋಚ್ ಆಗಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾದ ಲೆಜೆಂಡ್ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ಅವರಿರುವ ಆರ್​ಸಿಬಿ ಕೋಚಿಂಗ್ ಟೀಮ್​ನಲ್ಲಿ ನೆಹ್ರಾ ಸ್ಥಾನ ಪಡೆದಿದ್ದಾರೆ. ಕಳೆದ ಸೀಸನ್​ನಲ್ಲಿ ನೆಹ್ರಾ ಅವರು ಆರ್​ಸಿಬಿ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದೇ ವೇಳೆ, ಬೆಂಗಳೂರು ಕೋಚಿಂಗ್ ಲೀಡರ್​ಶಿಪ್ ಟೀಮ್​ನ ಮುಂಚೂಣಿ ಸ್ಥಾನ ಪಡೆದಿರುವುದಕ್ಕೆ ನೆಹ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

“ಕಳೆದ ಸೀಸನ್​ನಲ್ಲಿ ಆರ್​ಸಿಬಿ ಕೋಚಿಂಗ್ ಟೀಮ್ ಸೇರುವ ಸೌಭಾಗ್ಯ ನನ್ನದಾಗಿತ್ತು. ಈಗ ಕೋಚಿಂಗ್ ಟೀಮ್​ನ ನಾಯಕತ್ವ ಸ್ಥಾನದ ಅವಕಾಶ ಕೊಟ್ಟಿದ್ದಕ್ಕೆ ಮ್ಯಾನೇಜ್ಮೆಂಟ್​ಗೆ ಧನ್ಯವಾದ ಹೇಳುತ್ತೇನೆ” ಎಂದು ಆಶೀಶ್ ನೆಹ್ರಾ ತಿಳಿಸಿದ್ದಾರೆ.

ಕಳೆದ ತಿಂಗಳು ಆರ್​ಸಿಬಿ ತಂಡವು ನ್ಯೂಜಿಲೆಂಡ್ ಕ್ರಿಕೆಟಿಗ ಡೇನಿಯಲ್ ವೆಟ್ಟೋರಿ ಅವರನ್ನು ಕೋಚಿಂಗ್ ಸ್ಥಾನದಿಂದ ಕೆಳಗಿಳಿಸಿತು. ನಂತರ ಗ್ಯಾರಿ ಕರ್ಸ್ಟನ್ ಅವರನ್ನು ಕೋಚ್ ಆಗಿ ನೇಮಿಸಿತು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ