Asad Rauf Dies: ಹೃದಯಾಘಾತದಿಂದ ಮಾಜಿ ಅಂಪೈರ್ ನಿಧನ, ಕಂಬನಿ ಮಿಡಿದ ಕ್ರಿಕೆಟ್ ಲೋಕ

Asad Rauf: ಐಸಿಸಿಯ (ICC) ಎಲೈಟ್ ಪ್ಯಾನೆಲ್‌ನ ಭಾಗವಾಗಿದ್ದ ಪಾಕಿಸ್ತಾನದ ಅಂಪೈರ್ ಅಸದ್ ರೌಫ್  (66) ಬುಧವಾರ ಹೃದಯಾಘಾತದಿಂದ ಲಾಹೋರ್‌ನಲ್ಲಿ ನಿಧನರಾದರು. 

ಅಸದ್ ರೌಫ್ ನಿಧನ

ಅಸದ್ ರೌಫ್ ನಿಧನ

  • Share this:
ಐಸಿಸಿಯ (ICC) ಎಲೈಟ್ ಪ್ಯಾನೆಲ್‌ನ ಭಾಗವಾಗಿದ್ದ ಪಾಕಿಸ್ತಾನದ ಅಂಪೈರ್ ಅಸದ್ ರೌಫ್  (66) ಬುಧವಾರ ಹೃದಯಾಘಾತದಿಂದ ಲಾಹೋರ್‌ನಲ್ಲಿ ನಿಧನರಾದರು. ಈ ಸುದ್ದಿಯನ್ನು ಅವರ ಸಹೋದರ ತಾಹಿರ್ ಖಚಿತಪಡಿಸಿದ್ದಾರೆ. ಸಾವಿಗೂ ಮುನ್ನ ಅಂಗಡಿ ಮುಚ್ಚಿ ಮನೆಗೆ ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದ್ದು, ಬದುಕಲು ಸಾಧ್ಯವಾಗಲಿಲ್ಲ ಎಂದು ಮಾಜಿ ಅಂಪೈರ್ ಸಹೋದರ ಹೇಳಿದ್ದಾರೆ. ಅಸದ್ ರೌಫ್ (Asad Rauf) 2006 ರಿಂದ 2013ರ ವರೆಗೆ ಐಸಿಸಿಯ ಎಲೈಟ್ ಅಂಪೈರ್ (Umpire)  ಪ್ಯಾನೆಲ್‌ನ ಸದಸ್ಯರಾಗಿದ್ದರು. ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವೂ ಅವರ ಮೇಲಿತ್ತು. 

ಐಸಿಸಿ ಅಂಪೈರ್​ ಆಗಿದ್ದ ರೌಫ್:

ಅಸಾದ್ ರೌಫ್ ಇದುವರೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ನ ಒಟ್ಟು 231 ಪಂದ್ಯಗಳಲ್ಲಿ ಅಸದ್ ರೌಫ್ ಅಂಪೈರ್ ಮಾಡಿದ್ದಾರೆ. ಇದರಲ್ಲಿ 64 ಟೆಸ್ಟ್, 28 ಟಿ20 ಮತ್ತು 139 ಏಕದಿನ ಪಂದ್ಯಗಳು ಸೇರಿವೆ. ಪಾಕಿಸ್ತಾನದ ಅಂಪೈರ್ 2013 ರಲ್ಲಿ ಎಲ್ಲಾ ರೀತಿಯ ಅಂಪೈರಿಂಗ್‌ನಿಂದ ನಿವೃತ್ತರಾಗಿದ್ದರು. ಅಲ್ಲದೇ ಇವರು  15 ಟೆಸ್ಟ್ ಪಂದ್ಯಗಳಲ್ಲಿ ಟಿವಿ ಅಂಪೈರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಐಸಿಸಿಯ ಎಲೈಟ್ ಅಂಪೈರಿಂಗ್ ಪ್ಯಾನೆಲ್‌ನ ಸದಸ್ಯರೂ ಆಗಿದ್ದರು.





ಇನ್ನು, ಅಸಾದ್ ರೌಫ್ ಅವರ ಹಠಾತ್ ನಿಧನಕ್ಕೆ ಕ್ರಿಕೆಟ್​ ಲೋಕವೇ ಕಂಬನಿ ಮಿಡಿದಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಗಣ್ಯರು ರೌಫ್​ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಇನ್ನು, ಅಸದ್ ರೌಫ್ ಅವರ ವೃತ್ತಿಜೀವನದಲ್ಲಿ ಲಾಹೋರ್, ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನ್, ಪಾಕಿಸ್ತಾನ್ ರೈಲ್ವೇಸ್ ಮತ್ತು ಪಾಕಿಸ್ತಾನ್ ವಿಶ್ವವಿದ್ಯಾಲಯಗಳಲ್ಲಿ ಆಡಿದ್ದರು.

ಇದನ್ನೂ ಓದಿ: Robin Uthappa: ಕ್ರಿಕೆಟ್​ಗೆ ವಿದಾಯ ಹೇಳಿದ ಕನ್ನಡಿಗ ರಾಬಿನ್ ಉತ್ತಪ್ಪ

ಬೆಟ್ಟಿಂಗ್​ ಹಗರಣದಲ್ಲಿ ಸಿಲುಕಿದ್ದ ಅಂಪೈರ್​:

ಫೆಬ್ರವರಿ 2016 ರಲ್ಲಿ, ಬಿಸಿಸಿಐನಿಂದ ರೌಫ್ ಅವರನ್ನು ಭ್ರಷ್ಟಾಚಾರದ ತಪ್ಪಿತಸ್ಥರೆಂದು ಗುರುತಿಸಲಾಯಿತು. ಇದರಿಂದಾಗಿ ಅವರನ್ನು ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಿಸಲಾಗಿತ್ತು. 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಪಾಕಿಸ್ತಾನದ ಅಂಪೈರ್ ಅವರನ್ನು ಮುಂಬೈ ಪೊಲೀಸರು ಔಪಚಾರಿಕವಾಗಿ ಆರೋಪಿ ಎಂದು ಗುರುತಿಸಿದ್ದರು.

ಶೂ-ಬಟ್ಟೆ ವ್ಯಾಪರ ಮಾಡುತ್ತಿದ್ದ ರೌಫ್​:

ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಿಸಿದ ನಂತರ ರೌಫ್​ ಅಷ್ಟಾಗಿ ಕ್ರಿಕೆಟ್​ ಲೋಕದಲ್ಲಿ ಕಾಣಿಸಿಕೊಳ್ಳಲಿಲ್ಲ. ನಂತರ ಅವರು ಸೆಕೆಂಡ್ ಹ್ಯಾಂಡ್ ಬಟ್ಟೆ, ಬೂಟುಗಳು ಮತ್ತು ಹೊಟ್ಟೆಗಾಗಿ ಇತರ ವಸ್ತುಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಟಿವಿ ವಾಹಿನಿಯೊಂದಕ್ಕೆ ಅವರು ಸಂದರ್ಶನ ನೀಡಿದಾಗ, ಸ್ವಂತ ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದ ಅವರು, ಕಾರ್ಮಿಕರಿಗೆ ಸಂಬಳ ಕೊಡಲು ಇಷ್ಟೆಲ್ಲ ಮಾಡುತ್ತಿದ್ದಾರೆ. ಅಲ್ಲದೆ ತನ್ನ ಜೀವನದಲ್ಲಿ ಸಾಕಷ್ಟು ಹಣವನ್ನು ನೋಡಿದ್ದೇನೆ ಎಂದು ಹೇಳಿದ್ದರು.

ಇದನ್ನೂ ಓದಿ: T20 Worldcup 2022: ಟೀಂ ಇಂಡಿಯಾದ ಈ ಕ್ರಿಕೆಟಿಗರಿಗೆ ಇದು ಕೊನೆಯ T20 ವಿಶ್ವಕಪ್ ಅಂತೆ, ಲಿಸ್ಟ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ

ಲಾಹೋರ್​ನ ಲಾಂಡಾ ಬಜಾರ್​ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ಅಸಾದ್  ಅವರನ್ನು ಸ್ಥಳೀಯ ಮಾಧ್ಯಮಗಳು ಸಂಪರ್ಕಿಸಿದಾಗ, ತಮ್ಮ ಜೀವನದಲ್ಲಿ ಯಾವುದರ ಬಗ್ಗೆಯೂ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದರು. ನಾನು ಮಾಡುತ್ತಿರುವ ಕೆಲಸ ನನಗೆ ತೃಪ್ತಿ ತಂದಿದೆ. ತನಗೆ ದುರಾಸೆ ಇಲ್ಲ, ಎಷ್ಟು ಸಾಧ್ಯವೋ ಅಲ್ಲಿಯವರೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.
Published by:shrikrishna bhat
First published: