Inspire Story: ಕೃತಕ ಕಾಲಿನಿಂದಲೇ Everest ಹತ್ತಿದ ಗಟ್ಟಿಗಿತ್ತಿ! ಈ ಸಾಧಕಿಗೊಂದು ಸಲಾಂ

ನಾಲ್ಕು ತಿಂಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಆಕೆ ಗೆದ್ದಳು. ನಂತರ ಅರುಣಿಮಾ ಸಿನ್ಹಾ ಅವರ ಜಜ್ಜಿಹೋಗಿದ್ದ ಎಡಗಾಲನ್ನು ಕತ್ತರಿಸಿ ಕೃತಕ ಕಾಲನ್ನು ಜೋಡಿಸಿದರು.

ಸಾಧನೆಗೆ ಮಿತಿಯಿಲ್ಲ!

ಸಾಧನೆಗೆ ಮಿತಿಯಿಲ್ಲ!

  • Share this:
ಅಂಗವಿಕಲತೆಯ ನಡುವೆಯೂ ಜೀವನೋತ್ಸಾಹ ಕಳೆದುಕೊಳ್ಳದೇ ಕೃತಕ ಕಾಲಿನ ಮೂಲಕವೇ ಎವರೆಸ್ಟ್ ಶಿಖರ ಏರಿದ ದಿಟ್ಟ ಯುವತಿ ಅರುಣಿಮಾ ಸಿನ್ಹಾ (Arunima Sinha). ಹೌದು, ತನ್ನ ನ್ಯೂನತೆಗಳಿಗೆ ಸವಾಲೊಡ್ಡಿ ಛಲ ಬಿಡದ ಗಟ್ಟಿಗಿತ್ತಿ ಅರುಣಿಮಾ ಸಿನ್ಹಾ ಮೌಂಟ್ ಎವರೆಸ್ಟ್ (Mount Everest) ಏರಿದ ಮೊದಲ ಭಾರತೀಯ ಅಂಗವಿಕಲ ಮಹಿಳೆ ( Woman Amputee) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಭಾರತದ ಪರ್ವತಾರೋಹಿ ಅರುಣಿಮಾ ಸಿನ್ಹಾ ಅವರೇ ಜೀವಂತ ಸಾಕ್ಷಿ. ತಮ್ಮ ಪರ್ವತಾರೋಹಿ ಬದುಕಿಗೆ ಅರುಣಿಮಾ ಒಂದೊಂದೇ ಸಾಧನೆಯ ಗರಿ ಸೇರಿಸಿದ್ದಾರೆ. ಕೃತಕ ಕಾಲು ಹೊಂದಿರುವ ಅರುಣಿಮಾ ಸಾಹಸ ಆಕೆ ಕಾಲು ಕಳೆದುಕೊಂಡಲ್ಲಿಂದ ಆರಂಭವಾಗುತ್ತದೆ.

1988ರಲ್ಲಿ ಉತ್ತರಪ್ರದೇಶದ ಸುಲ್ತಾನ್‌ಪುರದಲ್ಲಿ ಜನಿಸಿದ ಈಕೆ, ರಾಷ್ಟ್ರಮಟ್ಟದ ವಾಲಿಬಾಲ್‌ ಮತ್ತು ಫುಟ್ಬಾಲ್‌ ಆಟಗಾರ್ತಿ. 2011ರಲ್ಲಿ, ದಿಲ್ಲಿಗೆ ಹೋಗುವುದಕ್ಕೆ ಲಖನೌದಿಂದ ಪದ್ಮಾವತಿ ಎಕ್ಸ್‌ಪ್ರೆಸ್‌ ರೈಲು ಏರಿದಳು.

ಸರಗಳ್ಳರಿಂದ ರೈಲು ಹಳಿಗೆ ಬಿದ್ದ ಅರುಣಿಮಾ
ಬರೇಲಿಯ ಬಳಿ, ಇಬ್ಬರು ಸರಗಳ್ಳರು ಸರ ಕಿತ್ತುಕೊಳ್ಳಲು ಆಕೆಯ ಕುತ್ತಿಗೆಗೆ ಕೈ ಹಾಕಿದರು. ಅರುಣಿಮಾ ಇದಕ್ಕೆ ಪ್ರತಿಭಟಿಸಿದರು. ಈ ಹಿನ್ನೆಲೆ ಕಳ್ಳರು ಆಕೆಯನ್ನು ರೈಲಿನಿಂದ ಕೆಳಗೆ ದೂಡಿದರು. ಇದರ ಪರಿಣಾಮ ಅರುಣಿಮಾ ಪಕ್ಕದ ಹಳಿಗೆ ಬಿದ್ದಿದ್ದರು.

ಸಾವು ಬದುಕಿನ ಹೋರಾಟವದು!
ಪಕ್ಕದ ಹಳಿಯಲ್ಲಿ ರಭಸದಿಂದ ಚಲಿಸುತ್ತಿದ್ದ ಇನ್ನೊಂದು ರೈಲು ಆಕೆಯ ಕಾಲಿನ ಮೇಲೆ ಹಾದುಹೋಯಿತು. ಪ್ರಜ್ಞೆ ತಪ್ಪಿದ ಅರುಣಿಮಾ ಎಚ್ಚೆತ್ತಾಗ ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿದ್ದರು. ಸುಮಾರು ನಾಲ್ಕು ತಿಂಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಆಕೆ ಗೆದ್ದಳು. ನಂತರ ಅರುಣಿಮಾ ಸಿನ್ಹಾ ಅವರ ಜಜ್ಜಿಹೋಗಿದ್ದ ಎಡಗಾಲನ್ನು ಕತ್ತರಿಸಿ ಕೃತಕ ಕಾಲನ್ನು ಜೋಡಿಸಿದರು.

ಅರುಣಿಮಾ ಅವರನ್ನು ಆಸ್ಪತ್ರೆಯಲ್ಲಿ ನೋಡಲು ಬಂದವರು ಅವಳ ಬಗ್ಗೆ ಕೇವಲ ಅನುಕಂಪದ ಮಾತುಗಳನ್ನಾಡುತ್ತಾ, ಇನ್ನೂ ಏನು ಮಾಡಲು ಸಾದ್ಯವಿಲ್ಲ ಎನ್ನುತ್ತಿದ್ದರು. ಆದರೆ ಆಕೆಗೆ ಒಂದು ಕ್ಷಣವೂ ತಾನಿನ್ನು ನಿರುಪಯುಕ್ತ ಎಂಬ ಭಾವನೆ ಬರಲು ಬಿಟ್ಟೇ ಇಲ್ಲ.

ಮುಂದೇನು ಮಾಡೋದು?
ಈ ಹಿಂದಿನಂತೆ ಫುಟ್ಬಾಲ್ ಆಟಗಾರ್ತಿಯಾಗಿ ಉಳಿಯುವುದು ಸಾಧ್ಯವಿಲ್ಲ ಎಂಬುದು ಆಕೆಗೆ ಸ್ಪಷ್ಟವಾಗಿತ್ತು. ಆಕೆ ಬೇರೇನಾದರೂ ಮಾಡಲು ನಿರ್ಧರಿಸಿದಳು. ನಂತರ ''ಮೌಂಟ್ ಎವರೆಸ್ಟ್‌'' ಏರಲು ನಿರ್ಧರಿಸಿ ತನ್ನ ಸಾಹಸ ಮುಂದುವರಿಸಿದಳು.

ನೆಹ್ರೂ ಇನ್ಸ್ಟಿಟ್ಯೂಟ್ ಆಫ್ ಮೌಂಟೆನೀಯರಿಂಗ್‌ನಲ್ಲಿ ಬೆಟ್ಟ ಏರುವ ತರಬೇತಿ ಪಡೆದರು. ದೈಹಿಕ ದೃಢತೆ, ಶಿಲಾರೋಹಣ, ಆಕ್ಸಿಜನ್ ಸಿಲಿಂಡರ್‌ಗಳ ಬಳಕೆ, ಪರ್ವತ ಹವಾಮಾನಕ್ಕೆ ಒಗ್ಗಿಕೊಳ್ಳುವಿಕೆ ಎಲ್ಲದರಲ್ಲಿ ಪಳಗಿದಳು.

52 ದಿನಗಳ ನಡಿಗೆಯದು!
ಎವರೆಸ್ಟ್‌ಗೆ ಮುನ್ನ ಲಡಾಖ್‌ನ ಮೌಂಟ್ ಚಂಸೇರ್ ಕಾಂಗ್ರಿ ಮತ್ತು ನೇಪಾಳದ ಐಲ್ಯಾಂಡ್ ಪೀಕ್‌ಗಳನ್ನು ಏರಿ ಇಳಿದಳು. 2013 ಮೇ 21ರಂದು, 52 ದಿನಗಳ ನಡಿಗೆಯ ಬಳಿಕ ಜಗತ್ತಿನ ಅತ್ಯಂತ ಎತ್ತರದ ಪರ್ವತ ಎವರೆಸ್ಟ್ ಶಿಖರ ಏರುವ ಮೂಲಕ ಶಿಖರ ಏರಿದ ಮೊದಲ ಅಂಗವಿಕಲ ಭಾರತೀಯ ಮಹಿಳೆ ಎಂಬ ಹೆಸರು ದಾಖಲಿಸಿದ್ದಾರೆ.

ಇದನ್ನೂ ಓದಿ: Explained: ಪುರುಷರ ಒಳ ಉಡುಪಿಗೂ ದೇಶದ ಆರ್ಥಿಕತೆಗೂ ಇದೆ ಸಂಬಂಧ!

ಬಳಿಕ, ಅವರು ಇಲ್ಲಿಯವರೆಗೆ ಏಷ್ಯಾದ ಮೌಂಟ್ ಎವರೆಸ್ಟ್, ಯೂರೋಪಿನ ಮೌಂಟ್ ಎಬ್ರಸ್, ಆಫ್ರಿಕಾದ ಮೌಂಟ್ ಕಿಲಿಮಂಜಾರೋ, ಆಸ್ಪ್ರೇಲಿಯಾದ ಮೌಂಟ್ ಕೋಸಿಸ್ಕೋದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ರೈಲು ಅಪಘಾತಕ್ಕೂ ಮುನ್ನ ಅವರು ಹಲವಾರು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ರಾಜ್ಯದ ವಾಲಿಬಾಲ್ ಮತ್ತು ಫುಟ್ಬಾಲ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಗೌರವಗಳು / ಪ್ರಶಸ್ತಿಗಳು
-ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಈ ಅಂಗವಿಕಲ ಮಹಿಳೆಗೆ ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಭಾರತ್ ಭಾರತಿ ಸೊಸೈಟಿ ಸುಲ್ತಾನ್‌ಪುರ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.

ಇದನ್ನೂ ಓದಿ:Explained: ಹೆಂಡತಿ ಅತಿಥಿಗಳ ಜೊತೆ ಮಲಗಬೇಕು! Himba ಸಂಸ್ಕೃತಿಯಲ್ಲಿ ಈ ಆಚರಣೆ ಇರೋದೇಕೆ?

-2016 ರಲ್ಲಿ, ಅರುಣಿಮಾ ಸಿನ್ಹಾ ಅವರಿಗೆ ಅಂಬೇಡ್ಕರ್ ನಗರ ಉತ್ಸವ ಸಮಿತಿಯಿಂದ ಅಂಬೇಡ್ಕರ್ ನಗರ ರತ್ನ ಪ್ರಶಸ್ತಿಯನ್ನು ನೀಡಲಾಯಿತು.
Published by:guruganesh bhat
First published: