• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Neeraj Chopra: ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ರಾಜೀವ್ ಸೇಥಿ ಕೇಳಿದ ಪ್ರಶ್ನೆಗೆ ಟ್ವಿಟ್ಟರ್‌ನಲ್ಲಿ ಕಟು ಟೀಕೆ!

Neeraj Chopra: ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ರಾಜೀವ್ ಸೇಥಿ ಕೇಳಿದ ಪ್ರಶ್ನೆಗೆ ಟ್ವಿಟ್ಟರ್‌ನಲ್ಲಿ ಕಟು ಟೀಕೆ!

Neeraj Chopra- ನೀರಜ್ ಚೋಪ್ರಾ

Neeraj Chopra- ನೀರಜ್ ಚೋಪ್ರಾ

Neeraj Chopra: ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಸಂದರ್ಶನ ನಡೆಸಿದ ಹಲವಾರು ಮಾಧ್ಯಮಗಳು ಅವರ ವೈಯಕ್ತಿಕ ಜೀವನದ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಿದವು. ಕೆಲವು ಸಂದರ್ಶಕರು ಕೇಳಿದ ಪ್ರಶ್ನೆಗಳು ತುಂಬಾ ಖಾಸಗಿಯಾಗಿದ್ದವು.

  • Trending Desk
  • 2-MIN READ
  • Last Updated :
  • Share this:

ಹರಿಯಾಣದ ಪಾಣಿಪತ್ ಸಮೀಪದ ಖಂಡ್ರಾ ಹಳ್ಳಿಯ ರೈತನ ಪುತ್ರ 23ರ ಹರೆಯದ ನೀರಜ್ ಚೋಪ್ರಾ (Neeraj Chopra) ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ (Tokyo olympics 2020) ಚಿನ್ನದ ಪದಕ  (Gold Medal)ಗೆದ್ದ ಏಕೈಕ ಭಾರತೀಯ ಆಟಗಾರನಾಗಿ ಮಿಂಚಿ ದೇಶದ ಹೆಸರನ್ನು ವಿಶ್ವಮಟ್ಟದಲ್ಲಿ ಖ್ಯಾತಿಗೊಳಿಸಿದ್ದರು. ಫೈನಲ್‌ನಲ್ಲಿ 87.58ಮೀ ಜಾವೆಲಿನ್ (javelin throw) ಎಸೆತದಲ್ಲಿ ಅತ್ಯುನ್ನತ ಪ್ರದರ್ಶನ ನೀಡಿದ್ದ ನೀರಜ್ ಭಾರತದ ಪದಕದ ಕನಸನ್ನು ನಿಜಗೊಳಿಸಿದ ಸಾಮರ್ಥ್ಯಗಾರ. ಒಲಿಂಪಿಕ್ಸ್‌ನಲ್ಲಿ ನೀರಜ್ ಅವರ ಮೊದಲ ಪ್ರದರ್ಶನವಾಗಿದ್ದರೂ ಚಿನ್ನದ ಬೇಟೆಗೆ ನೀರಜ್ ಚೋಪ್ರಾ ನಡೆಸಿದ ಪ್ರಯತ್ನಗಳು ಸಣ್ಣದಾಗಿರಲಿಲ್ಲ. ಹಲವಾರು ಕಷ್ಟಗಳನ್ನು ಮುನ್ನುಗ್ಗಿ ಈ ಹಳ್ಳಿಯ ಹೈದ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಸಂಪೂರ್ಣ ದೇಶವನ್ನೇ ಗೌರವಕ್ಕೆ ಭಾಜನರಾಗಿಸಿದ್ದಾರೆ. ಭಾರತದ 100 ವರ್ಷಗಳ ನಿರೀಕ್ಷೆ ಪೂರ್ಣಗೊಳಿಸಿದ್ದಾರೆ.


ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಸಂದರ್ಶನ ನಡೆಸಿದ ಹಲವಾರು ಮಾಧ್ಯಮಗಳು ಅವರ ವೈಯಕ್ತಿಕ ಜೀವನದ ಕುರಿತು ಹಲವಾರು ಪ್ರಶ್ನೆಗಳನ್ನು ಕೇಳಿದವು. ಕೆಲವು ಸಂದರ್ಶಕರು ಕೇಳಿದ ಪ್ರಶ್ನೆಗಳು ತುಂಬಾ ಖಾಸಗಿಯಾಗಿದ್ದವು. ಅದರಲ್ಲಿ ಕಲಾ ಇತಿಹಾಸಕಾರ ರಾಜೀವ್ (Rajeev Sethi)ಸೇಥಿ ಕೇಳಿದ ಒಂದು ಪ್ರಶ್ನೆ ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿದ್ದು, ಟ್ವಿಟ್ಟರ್ ಬಳಕೆದಾರರ ಕಟುಟೀಕೆಗಳಿಗೆ ಒಳಗಾಗುತ್ತಿವೆ.


ರಾಜೀವ್ ಅವರ ಪ್ರಶ್ನೆಯು ದೇಶದ ಚಿನ್ನದ ಪದಕ ವಿಜೇತರಿಗೆ ಕೇಳುವಂತಹ ಪ್ರಶ್ನೆಯಲ್ಲ ಎಂಬುದಾಗಿ ಹಲವಾರು ಬಳಕೆದಾರರು ಸಂದರ್ಶಕರನ್ನು ಟೀಕಿಸಿದ್ದಾರೆ. ಇಷ್ಟಕ್ಕೂ ರಾಜೀವ್ ಕೇಳಿದ ಪ್ರಶ್ನೆ ಏನು ಎಂಬುದನ್ನು ನೋಡಿದಾಗ ಇದು ಕೊಂಚ ಇರಿಸು ಮುರಿಸನ್ನು ಉಂಟುಮಾಡುವುದು ಸಹಜವೇ ಆಗಿದೆ. ನಿಮ್ಮ ಲೈಂಗಿಕ ಜೀವನ ಹಾಗೂ ಕ್ರೀಡಾ ತರಬೇತಿಯ ನಡುವೆ ನೀವು ಸಮತೋಲನವನ್ನು ಹೇಗೆ ಕಾಯ್ದುಕೊಳ್ಳುತ್ತೀರಿ ಎಂಬ ತುಂಬಾ ವ್ಯಕ್ತಿಗತ ಪ್ರಶ್ನೆಯನ್ನು ರಾಜೀವ್ ನೀರಜ್ ಬಳಿ ಕೇಳಿದ್ದಾರೆ. ಅವರ ಪ್ರಕಾರ ಇದು ವಿಚಿತ್ರ ಪ್ರಶ್ನೆಯಾಗಿದ್ದರೂ ಅದರಲ್ಲಿ ಗಂಭೀರತೆ ಇದೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.


ಇದನ್ನು ಓದಿ- Maruti Suzuki: ಇಂದಿನಿಂದ ಮಾರುತಿ ಸುಜುಕಿ ಕಾರುಗಳ ದರ ಹೆಚ್ಚಳ; ಬೆಲೆ ಎಷ್ಟಿದೆ? ಪರಿಶೀಲಿಸಿ

ಸಂದರ್ಶನ ವಿಡಿಯೋದಲ್ಲಿ ರಾಜೀವ್ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿರುವ ನೀರಜ್ ಚೋಪ್ರಾ “ಕ್ಷಮಿಸಿ ಸರ್” ಎಂದು ತಿಳಿಸಿದ್ದಾರೆ. ಇದರಿಂದಲೇ ಕ್ರೀಡಾಪಟು ರಾಜೀವ್ ಪ್ರಶ್ನೆಗೆ ಉತ್ತರಿಸಲು ಅಷ್ಟು ಆರಾಮದಾಯಕವಾಗಿರಲಿಲ್ಲ ಎಂಬುದು ತಿಳಿದುಬರುತ್ತದೆ. ನಾನು ಈ ತರಹದ ಪ್ರಶ್ನೆ ಕೇಳಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ರಾಜೀವ್ ನೀರಜ್‌ರಲ್ಲಿ ಹೇಳಿದ್ದರೂ, ನಿಮ್ಮ ಪ್ರಶ್ನೆಯಿಂದ ನನ್ನ ಹೃದಯ ತುಂಬಿ ಬಂದಿದೆ ಎಂಬುದಾಗಿ ನೀರಜ್ ಪ್ರತ್ಯುತ್ತರ ನೀಡಿ ತಮ್ಮ ಬೇಸರ ಹೊರಹಾಕಿದ್ದಾರೆ.











ದೇಶದ ಗೌರವವನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಗೊಳಿಸಿದ ಒಬ್ಬ ಕ್ರೀಡಾಪಟುವಿನ ಬಳಿ ಇಂತಹ ಪ್ರಶ್ನೆ ಕೇಳುವುದು ಎಷ್ಟು ಸರಿ..? ಎಂಬುದಾಗಿ ಹಲವಾರು ಟ್ವಿಟ್ಟರ್ ಬಳಕೆದಾರರು ರಾಜೀವ್‌ಗೆ ಛೀಮಾರಿ ಹಾಕಿದ್ದಾರೆ. ಸ್ಫೂರ್ತಿದಾಯಕ ಕ್ರೀಡಾಪಟು ಹಾಗೂ ಸೇನಾ ಅಧಿಕಾರಿ ಮಾಡಿದ ಕಾರ್ಯಕ್ಕೆ ಅವರಿಗೆ ಗೌರವ ಸಲ್ಲಿಸುವ ಬದಲು ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ರಾಜೀವ್ ಸೇಥಿಯವರಿಗೆ ಎಷ್ಟು ಸಮಂಜಸವಾದುದು ಎಂದು ಟ್ವಿಟ್ಟರ್ ಬಳಕೆದಾರರು ಕೇಳಿದ್ದಾರೆ.


ಇದನ್ನು ಓದಿ- Diet Tips: ಇಷ್ಟು ಮಾಡಿದ್ರೆ ಸಾಕು, Weight Loss ಆಗೋದು ಗ್ಯಾರಂಟಿ!

ಒಬ್ಬ ಸಾಮಾನ್ಯ ಪ್ರಜೆ ನೀರಜ್ ಬಳಿ ಚಿನ್ನದ ಪದಕ ಗೆಲ್ಲಲು ಮಾಡಿದ ತಯಾರಿ ಹಾಗೂ ಪಟ್ಟ ಶ್ರಮಗಳ ಬಗ್ಗೆ ಕೇಳಿದರೆ ರಾಜೀವ್ ಸೇಥಿ ಸಾಮಾನ್ಯನಿಗಿಂತಲೂ ಕೀಳಾಗಿ ನಡೆದುಕೊಂಡಿದ್ದಾರೆ ಎಂದು ಹಲವಾರು ಬಳಕೆದಾರರು ಕಟುವಾಗಿ ಟೀಕಿಸಿದ್ದಾರೆ.


ಚೋಪ್ರಾರೊಂದಿಗೆ ನಡೆದ ಸಂದರ್ಶನಗಳಿಗೆ ಹೀಗೆ ಟೀಕಾ ಪ್ರಹಾರಗಳು ಉಂಟಾಗುತ್ತಿರುವುದು ಇದೇ ಮೊದಲಲ್ಲ ಎಂಬ ಅಂಶವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಆರ್‌ಜೆ ಮಲೀಷ್ಕಾ ಮೆಂಡೊನ್ಸಾ 45 ಸೆಕೆಂಡ್‌ಗಳ ವಿಡಿಯೋ ಕ್ಲಿಪ್ ಒಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ವಿಡಿಯೋದಲ್ಲಿ ನಯಾ ದೌರ್ ಎಂಬ ಚಿತ್ರದ ಹಾಡಿಗೆ ನೃತ್ಯ ಮಾಡುತ್ತಾ ಚೋಪ್ರಾರತ್ತ ಹೂವನ್ನು ತೋರಿಸುತ್ತಿರುವ ದೃಶ್ಯವನ್ನು ವಿಡಿಯೋ ಒಳಗೊಂಡಿದೆ.


ಜೂಮ್ ಕರೆಗೆ ತೆರಳುವ ಮುನ್ನ 4 ಸೆಕೆಂಡ್‌ಗಳ ಕಾಲ ನಾನು ಯಾರೊಂದಿಗೆ ನೃತ್ಯಮಾಡಿದ್ದೇನೆ ಎಂಬುದನ್ನು ನೋಡಿ ಎಂಬುದಾಗಿ ಶೀರ್ಷಿಕೆ ನೀಡಿ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕೂಡ ಟ್ವಿಟ್ಟರ್ ಬಳಕೆದಾರರ ಟೀಕೆಗೆ ಒಳಗಾಗಿತ್ತು. ಒಬ್ಬ ಕ್ರೀಡಾಪಟುವನ್ನು ಆರ್‌ಜೆಗಳು ಈ ರೀತಿ ನಡೆದುಕೊಳ್ಳಬಾರದು ಎಂಬುದಾಗಿ ಹಲವಾರು ಬಳಕೆದಾರರು ಮಲೀಷ್ಕಾ ನಡೆಯನ್ನು ವಿರೋಧಿಸಿದ್ದಾರೆ.

First published: