ಇಂಗ್ಲೆಂಡ್​ನ ಮಹಿಳಾ ಕ್ರಿಕೆಟರ್​ ಜೊತೆ ಕಾಣಿಸಿಕೊಂಡ ತೆಂಡೂಲ್ಕರ್ ಮಗ

news18
Updated:August 8, 2018, 2:57 PM IST
ಇಂಗ್ಲೆಂಡ್​ನ ಮಹಿಳಾ ಕ್ರಿಕೆಟರ್​ ಜೊತೆ ಕಾಣಿಸಿಕೊಂಡ ತೆಂಡೂಲ್ಕರ್ ಮಗ
news18
Updated: August 8, 2018, 2:57 PM IST
ನ್ಯೂಸ್ 18 ಕನ್ನಡ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಸದ್ಯ ರಜೆಯ ಮಜಾದಲ್ಲಿದ್ದು ಇಂಗ್ಲೆಂಡ್​ನಲ್ಲಿ ಫುಲ್ ಜಾಲಿಮೂಡ್​​ನಲ್ಲಿದ್ದಾರೆ. ಈ ಮಧ್ಯೆ ಅರ್ಜುನ್ ಅವರು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯ ಜೊತೆ ಕಾಣಿಸಿಕೊಂಡಿದ್ದು, ಈ ಫೋಟೋ ಎಲ್ಲಡೆ ವೈರಲ್ ಆಗುತ್ತಿದೆ.

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ಆಟಗಾರ್ತಿ ಡೇನಿಯಲ್ ವ್ಯಾಟ್ ಹಾಗೂ ಅರ್ಜುನ್ ಅವರು ಒಳ್ಳೆಯ ಸ್ನೇಹಿತರಾಗಿದ್ದು, ಹೋಟೆಲ್ ಒಂದರಲ್ಲಿ ಭೇಟಿಯಾಗಿದ್ದಾರೆ. ಹೋಟೆಲ್​ನಲ್ಲಿ ಊಟ ಮಾಡುತ್ತಿರುವ ಫೋಟೋವನ್ನು ಅರ್ಜುನ್ ಅವರು ತಮ್ಮ ಇನ್​ಸ್ಟ​ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

 
Loading...

With #DanielleWyatt #EnglandWomenCricket #ArjunTendulkar


A post shared by Arjun Tendulkar (@arjuntendulkar.official) on


ಶ್ರೀಲಂಕಾ ವಿರುದ್ದದ ಅಂಡರ್-19 ಟೆಸ್ಟ್​ ಕ್ರಿಕೆಟ್ ಪಂದ್ಯದ ಮೂಲಕ ಅರ್ಜುನ್ ಅವರು ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇನ್ನು ಡೇನಿಯಲ್ ವ್ಯಾಟ್ ಅವರು ಈ ಹಿಂದೆ 2014ರಲ್ಲಿ ಟ್ವಿಟರ್​ನಲ್ಲಿ ವಿರಾಟ್ ಕೊಹ್ಲಿ ಅವರಿಗೆ 'ವಿಲ್​​​ ಯೂ ಮ್ಯಾರಿ ಮೀ' ಎಂದು ಟ್ವೀಟ್ ಮಾಡಿ ಸುದ್ದಿಯಾಗಿದ್ದರು.

First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...