ಲಾರ್ಡ್ಸ್​ ಮೈದಾನದಲ್ಲಿ ಸೇಲ್ಸ್​ಮ್ಯಾನ್​ ಆದ ಅರ್ಜುನ್​ ತೆಂಡೂಲ್ಕರ್​

news18
Updated:August 12, 2018, 10:39 AM IST
ಲಾರ್ಡ್ಸ್​ ಮೈದಾನದಲ್ಲಿ ಸೇಲ್ಸ್​ಮ್ಯಾನ್​ ಆದ ಅರ್ಜುನ್​ ತೆಂಡೂಲ್ಕರ್​
  • News18
  • Last Updated: August 12, 2018, 10:39 AM IST
  • Share this:
ನ್ಯೂಸ್​ 18 

ಲಂಡನ್​ (ಆ.12): ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಮಗ ಈಗ ಅರ್ಜುನ್​ ತಂಡೂಲ್ಕರ್​ ಈಗ ಸೇಲ್ಸ್​ ಮ್ಯಾನ್​ ಆಗಿದ್ದಾರೆ. ಆಶ್ಚರ್ಯ ಆದರೂ ನಿಜ. ಇತ್ತೀಚೆಗಷ್ಟೇ ಅಂಡರ್​ 19 ಕ್ರಿಕೆಟ್​ ಪಂದ್ಯಕ್ಕೆ ಆಯ್ಕೆಯಾಗಿ ಸುದ್ದಿ ಮಾಡಿದ್ದ ಅವರು, ಈಗ ರೆಡಿಯೋ ಮಾರಾಟ ಮಾಡಲು ಬೀದಿಗೆ ಇಳಿದಿದ್ದಾರೆ.

ಲಂಡನ್​ನಲ್ಲಿ ಭಾರತ- ಇಂಗ್ಲೆಡ್​​ ನಡುವಿನ ಕ್ರಿಕೆಟ್​ ಪಂದ್ಯದ ವೇಳೆ ಅವರು ಲಾರ್ಡ್ಸ್​ ಮೈದಾನದ ಹೊರಗೆ ರೆಡಿಯೋ ಮಾರಾಟ ಮಾಡಿ ಗಮನ ಸೆಳೆದಿದ್ದಾರೆ. ಈ ವೇಳೆ ಹರ್ಭಜನ್​ ಸಿಂಗ್​ ಅವರು ಕಣ್ಣಿಗೆ ಅರ್ಜುನ್​ ಸಿಕ್ಕಿದ್ದು ಈ ಸಂಗತಿಯನ್ನು ಟ್ವೀಟರ್​ ನಲ್ಲಿ ಪೋಸ್ಟ್​ ಮಾಡಿದ್ದಾರೆ.

 


ಅಷ್ಟಕ್ಕೂ ಆಗಿದ್ದೇನು ?‘
ಮಳೆಯಿಂದಾಗಿ ಕ್ರಿಕೆಟ್​ ಮ್ಯಾಚ್​ ಸ್ಥಗಿತಗೊಂಡ ಹಿನ್ನಲೆ ಅರ್ಜುನ್​ ತೆಂಡೂಲ್ಕರ್​ ಮೈದಾನದಲ್ಲಿ ರೆಡಿಯೋ ಸೆಟ್​ ಮಾರುತ್ತಿದ್ದ ವ್ಯಕ್ತಿಯ ಬಳಿ ಬಂದಿದ್ದಾನೆ. ಈ ವೇಳೆ ಅರ್ಜುನ್​ ಕೊರಳಿಗೆ ಈ ರೇಡಿಯೋ ಸೆಟ್​ ಹಾಕಿ ಪೋಟೋ ತೆಗೆದಿದ್ದಾರೆ.

ಮೊನ್ನೆ ಮಳೆಯಿಂದ ಪಂದ್ಯ ಸ್ಥಗಿತವಾದ ವೇಳೆ ವೈದಾನಕ್ಕೆ ಇಳಿದು ನೀರನ್ನು ಸ್ವಚ್ಚಗೊಳಿಸಿ ಸಿಬ್ಬಂದಿಗೆ ನೆರವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ.

ಸದ್ಯ ಇಂಗ್ಲೇಡ್​ನಲ್ಲಿಯೇ ಸಚ್ಚಿನ್​ ಕೂಡ ಇದ್ದು, ಅವರು  ಎಂಸಿಸಿ ಅಲ್ಲಿ ತರಬೇತಿ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಭಾರತ ತಂಡದ  ವಿರಾಟ್​ ಕೊಹ್ಲಿ, ಮುರಳಿ ವಿಜಯನ್​ ಅವರಿಗೆ ನೆಟ್​ ಪ್ರಾಕ್ಟಿಸ್​ ವೇಳೆ ಬೌಲಿಂಗ್​ ಮಾಡಿ ಸುದ್ದಿಯಾಗಿದ್ದರು.
First published: August 12, 2018, 10:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading