ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್ ಪಡೆದ ಸಚಿನ್ ಮಗ

news18
Updated:July 18, 2018, 1:53 PM IST
ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್ ಪಡೆದ ಸಚಿನ್ ಮಗ
  • News18
  • Last Updated: July 18, 2018, 1:53 PM IST
  • Share this:
ನ್ಯೂಸ್ 18 ಕನ್ನಡ

ಕೊಲಂಬೋ(ಜು. 18): ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್​ ಚೊಚ್ಚಲ ಅಂತರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಕೊಲಂಬೊದಲ್ಲಿ ನಡೆಯುತ್ತಿರುವ ಅಂಡರ್-19 ಯೂಥ್​ ಟೆಸ್ಟ್​​ನಲ್ಲಿ ಶ್ರೀಲಂಕಾ ವಿರುದ್ಧ ಅರ್ಜುನ್​ ಮೊದಲ ವಿಕೆಟ್​​ ಪಡೆದಿದ್ದಾರೆ. 18 ವರ್ಷ ಪ್ರಾಯದ ಎಡಗೈ ವೇಗದ ಬೌಲರ್ ಅರ್ಜುನ್ ತನ್ನ ಎರಡನೇ ಓವರ್​​ನ ಅಂತಿಮ ಎಸೆತದಲ್ಲಿ ಕಮಿಲ್ ಮಿಶ್ರಾ ಅವರನ್ನು ಔಟ್ ಮಾಡುವ ಮೂಲಕ ಅಂಡರ್-19 ತಂಡಕ್ಕೆ ತಮ್ಮ ಆಯ್ಕೆಯನ್ನು ಸಮರ್ಥಿಸಿದ್ದಾರೆ.

ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ನಿಪುಣ್ ಧನಂಜಯ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತ ತಂಡದ ನಾಯಕ ಅಜುಜ್ ರಾವತ್ ಅವರು ಆರಂಭಿಕ ಬೌಲರ್ ಆಗಿ ಅರ್ಜುನ್ ತೆಂಡೂಲ್ಕರ್ ಹಾಗೂ ಆಕಾಶ್ ಪಾಂಡೆ ಅವರನ್ನು ಕಣಕ್ಕಿಳಿಸಿದರು. ತನ್ನ 2ನೇ ಓವರ್​​ ಬೌಲಿಂಗ್ ಆರಂಭಿಸಿದ ಅರ್ಜುನ್ ಅವರ 5ನೇ ಎಸೆತದಲ್ಲಿ ಕಮಿಲ್ ಮಿಶ್ರಾ ಚೆಂಡನ್ನು ಬೌಂಡರಿಗೆ ಅಟ್ಟಿದರು. ಇದರ ಬೆನ್ನಲ್ಲೆ ಮಿಶ್ರಾ ಅವರನ್ನ ಕೊನೆಯ ಎಸೆತದಲ್ಲಿ ಅರ್ಜುನ್ ಅವರು ಎಲ್​ಬಿಗೆ ಬಲಿಯಾಗಿಸಿ ಪೆವಿಲಿಯನ್​ಗೆ ಅಟ್ಟಿದರು.

 


ವಿನೋದ್ ಕಾಂಬ್ಲಿ ಟ್ವೀಟ್:

ಇನ್ನು ಈ ಕುರಿತು ಟ್ವೀಟ್ ಮಾಡಿರುವ ಸಚಿನ್ ಬಾಲ್ಯ ಸ್ನೇಹಿತ ಹಾಗೂ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಲಿ ಅವರು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ. ಅರ್ಜುನ್ ಮೊದಲ ವಿಕೆಟ್ ಪಡೆದಾಗ ಖುಷಿಯಿಂದ ಕಣ್ಣೀರು ಬಂತು. ಆತನನ್ನು ನಾನು ಬಾಲ್ಯದಿಂದ ನೋಡುತ್ತಿದ್ದೇನೆ. ಕ್ರಿಕೆಟ್ ಆಡಲು ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದಾನೆ. ಇದು ನಿನ್ನ ಜೀವನದ ಆರಂಭ. ಇನ್ನು ಹಲವಾರು ಯಶಸ್ಸುಗಳನ್ನು ಪಡೆಯಬೇಕಿದೆ. ಸದ್ಯಕ್ಕೆ ಈ ಸಂಧರ್ಭವನ್ನು ಎಂಜಾಯ್ ಮಾಡು ಎಂದು ಕಾಂಬ್ಳಿ ಟ್ವೀಟ್ ಮಾಡಿದ್ದಾರೆ.

 

First published: July 18, 2018, 1:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading