ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೆ ಅವರ ಮಗ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರು ಪ್ರೀತಿ ಯಿಂದ ರುಚಿಯಾದ ಮೊಟ್ಟೆಗಳ ಉಪಹಾರ ಮಾಡಿ ತಿನ್ನಿಸಿದ್ದಾರೆ. ಸಚಿನ್ ಅದನ್ನು "ಪ್ರೀತಿಯಿಂದ ತುಂಬಿದ ಬ್ರೇಕ್ ಫಾಸ್ಟ್" ಎಂದು ಕರೆದಿದ್ದಾರೆ. ಜೂನ್ 19 ರಂದು (ಭಾನುವಾರ) ಭಾರತದಲ್ಲಿ ತಂದೆಯರ ದಿನವನ್ನು (Father's Day) ಆಚರಿಸಲಾಯಿತು. ಅಂದು ಎಲ್ಲಾ ಮಕ್ಕಳು ತಮ್ಮ ತಮ್ಮ ಪ್ರೀತಿಯ ತಂದೆಯರ ಜೊತೆ ಅವರದೇ ಆದ ವಿಶೇಷ ಶೈಲಿಯಲ್ಲಿ ತಂದೆಯರ ದಿನವನ್ನು ಆಚರಿಸಿದರು. ಕೆಲ ಮಕ್ಕಳು (Children) ತಮ್ಮ ಪ್ರೀತಿಯ ಅಪ್ಪಂದಿರ ಜೊತೆ ಊಟಕ್ಕೆ ಎಂದು ಹೊರಗಡೆ ಹೋದರೆ ಮತ್ತೆ ಕೆಲವು ಮಕ್ಕಳು ಮನೆಯಲ್ಲೇ ತಮ್ಮ ತಂದೆಗೆ ಪ್ರೀತಿಯಿಂದ ಅಡುಗೆ ಮಾಡಿ ತಿನ್ನಿಸಿದರು.
ವಿಶೇಷವಾದ ತಿಂಡಿಗಳನ್ನು ಮಾಡಿದ ಅರ್ಜುನ್
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ ಸಹ, ಸಾರಾ ತೆಂಡೂಲ್ಕರ್ ಹಾಗು ಅರ್ಜುನ್ ತೆಂಡೂಲ್ಕರ್ ಎಂಬ ಇಬ್ಬರು ಮಕ್ಕಳ ಪ್ರೀತಿಯ ತಂದೆಯಾಗಿದ್ದು ಅಪ್ಪಂದಿರ ದಿನವನ್ನು ತಮ್ಮದೆ ಆದ ರೀತಿಯಲ್ಲಿ ಆನಂದಿಸಿದ್ದಾರೆ. ಈ ದಿನದ ವಿಶೇಷವಾಗಿ ಅಂದು ಸಚಿನ್ ಅವರಿಗೆ ಅವರ ಮಗ ಅರ್ಜುನ್ ವಿಶೇಷವಾದ ತಿಂಡಿಗಳನ್ನು ಮಾಡಿ ತಿನಿಸಿದ್ದಾರೆ. ತಮ್ಮ ಮಗನಿಗೂ ಸಹ ಸಚಿನ್ ಆ ತಿಂಡಿಯನ್ನು ತಿನ್ನಿಸುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಆ ಚಿತ್ರದಲ್ಲಿ ಸಚಿನ್ ಪ್ಲೇಟಿನ ಮುಂದೆ ಕುಳಿತು ನಗುತ್ತಿದ್ದರೆ ಮಗ ಅರ್ಜುನ್ ತಂದೆಯ ಹಿಂದೆ ಕುಳಿತಿದ್ದಾರೆ.
ಇದನ್ನೂ ಓದಿ: Ravindra Jadeja: ಕ್ರಿಕೆಟ್ ಮಾತ್ರವಲ್ಲ, ಜಡೇಜಾಗೆ ಪ್ರಾಣಿಗಳನ್ನು ಸಾಕೋದು ಅಂದ್ರೆ ಶಾನೆ ಇಷ್ಟ!
ಅರ್ಜುನ್ ರವರು ಭಾನುವಾರ ತಂದೆಯರ ದಿನದ ಸಲುವಾಗಿ ತಮ್ಮ ಪ್ರೀತಿಯ ತಂದೆಗೆ ತಾವೇ ಸ್ವತಃ ರುಚಿಕರವಾದ ಬ್ರೇಕ್ ಫಾಸ್ಟ್ ಅನ್ನು ತಯಾರುಮಾಡಿ ಕೊಟ್ಟಿದ್ದು ಅದರ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಲೈಕ್ಸ್ ಗಳನ್ನು ಪಡೆದು ಕೊಳ್ಳುತ್ತಿದ್ದು ಈಗಾಗಲೇ ಇದರ ಸಂಖ್ಯೆ 50 ಸಾವಿರವನ್ನು ದಾಟಿದ್ದು ಈಗಲೂ ಏರುತ್ತಲೇ ಇದೆ.
ಮಗ ತಯಾರಿಸಿದ ತಿನಿಸಿಗೆ ಸಚಿನ್ ತೆಂಡೂಲ್ಕರ್ ಹೇಳಿದ್ದು ಹೀಗೆ
ಸಚಿನ್ ತೆಂಡೂಲ್ಕರ್ ಅವರು ಫಾದರ್ಸ್ ಡೇ ಹಾಶ್ ಟ್ಯಾಗ್ ಬಳಸಿ ಇನ್ಸ್ಟಾಗ್ರಾಮ್ ಅಲ್ಲಿ ತಮ್ಮ ಪ್ರೀತಿಯ ಮಗ ತಯಾರು ಮಾಡಿರುವ ಬ್ರೇಕ್ ಫಾಸ್ಟ್ನ ಕುರಿತು ಈ ರೀತಿ ಬರೆದು ಕೊಂಡಿದ್ದಾರೆ. "ಅರ್ಜುನ್ ಇಂದು ಪ್ರಪಂಚದ ಅತ್ಯಂತ ರುಚಿಕರವಾದ ಸ್ಕ್ರ್ಯಾಂಬಲ್ಡ್ ಎಗ್ ಅನ್ನು ತಯಾರಿಸಿದ್ದಾನೆ, ಅದು ನೋಡಲು, ತಿನ್ನಲು ಬಹಳ ಚೆನ್ನಾಗಿತ್ತು ಇದೊಂದು ಪ್ರೀತಿಯಿಂದ ತುಂಬಿದ ಬ್ರೇಕ್ ಫಾಸ್ಟ್, ಇದಕ್ಕಿಂತ ಬೇರೇನೂ ಬೇಡ".
View this post on Instagram
ಸಚಿನ್ ತಮ್ಮ ರುಚಿಕರವಾದ ಊಟ ಸವಿಯುವ ಬಗ್ಗೆ ಇನ್ಸ್ಟಾಗ್ರಾಮ್ ಅಲ್ಲಿ ಹಂಚಿ ಕೊಂಡಿರುವುದು ಇದು ಮೊದಲೇನಲ್ಲ. ಭಾರತ ಕಂಡ ಈ ಅದ್ಭುತ ಆಟಗಾರ ರುಚಿಯಾದ ಊಟಗಳನ್ನು ತಿನ್ನುವಾಗ ಹಾಗು ಅವುಗಳನ್ನು ತಯಾರಿಸುವಾಗ ಕಾಣಿಸಿ ಕೊಂಡಿರುವುದು ಹಲವು ಬಾರಿ. ಅವರು ಆಗಾಗ ತಾವು ಅಡುಗೆ ತಯಾರಿಸುತ್ತಿರುವಂತಹ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸ್ವಲ್ಪ ದಿನದ ಹಿಂದೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರುಚಿಕರವಾದ ನಾಪೊಲಿಟ್ಯಾನೊ-ಸ್ಟೈಲ್ ಪಿಜ್ಜಾ ಅನ್ನು ವುಡ್ ಫೈರ್ಡ್ ಓವೆನ್ ಅಲ್ಲಿ ತಯಾರಿಸಿರುವ ಫೋಟೋ ಒಂದನ್ನು ಹಂಚಿ ಕೊಂಡಿದ್ದರು.
ಇದನ್ನೂ ಓದಿ: Virat Kohli: ಸ್ಯಾಂಡಲ್ವುಡ್ಗೆ ಕಾಲಿಟ್ರಾ ಕಿಂಗ್ ಕೊಹ್ಲಿ? ಕನ್ನಡ ಸಿನಿಮಾದ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್
"ಹೇಗೆ ತಯಾರಿಸಿದ್ರು ಪರವಾಗಿಲ್ಲ ಸ್ನೇಹಿತರ ಜೊತೆ ಸೇರಿ ಪಿಜ್ಜಾ ತಿನ್ನುವುದೇ ಮಜಾ" ಹೀಗೆಂದು ಅವರು ಬರೆದು ಕೊಂಡಿದ್ದರು. ಏನೇ ಆಗಲಿ ನಮಗಂತು ಸಚಿನ್ ತೆಂಡೂಲ್ಕರ್ ಅವರ ರುಚಿಕರವಾದ ತಿಂಡಿಗಳನ್ನು ತಿನ್ನುವ ಆಸಕ್ತಿಯನ್ನು ನೋಡಲು ಬಹಳ ಖುಷಿಯಾಗುತ್ತದೆ. ಸಚಿನ್ ರವರು ತಮ್ಮ ಮಗ ಮಾಡಿದ ಬ್ರೇಕ್ ಫಾಸ್ಟ್ ತಿಂದು ಸಂತೋಷ ಪಟ್ಟ ಬಗ್ಗೆ ನಿಮಗೇನೆನಿಸುತ್ತದೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ