Virat Kohli-Anushka Sharma: ಮುಂಬೈ ಬೀದಿಗಳಲ್ಲಿ ಸುತ್ತಾಡಿದ ವಿರಾಟ್​-ಅನುಷ್ಕಾ, ಸ್ಕೂಟರ್ ಸವಾರಿ ಮಾಡಿದ ಸ್ಟಾರ್​​ ಜೋಡಿ

ಇತ್ತೀಚೆಗೆ, ಜಾಹೀರಾತು ಚಿತ್ರೀಕರಣ ನಂತರ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ  ಮುಂಬೈ ರಸ್ತೆಗಳಲ್ಲಿ ಸ್ಕೂಟರ್​ ಮೇಳೆ ಹತ್ತಿ ಸವಾರಿ ಮಾಡಿದ್ದಾರೆ.

ಕೊಹ್ಲಿ-ಅನುಷ್ಕಾ

ಕೊಹ್ಲಿ-ಅನುಷ್ಕಾ

  • Share this:
ಟೀಂ ಇಂಡಿಯಾದ ಮಾಜಿ ನಾಯಕ, ವಿರಾಟ್ ಕೊಹ್ಲಿ (Virat Kohli) ಭಾರತೀಯ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಎಂದು ಹೆಸರುವಾಸಿಯಾಗಿದ್ದಾರೆ, ಭಾರತ ತಂಡಕ್ಕಾಗಿ ಹಲವು ಸರಣಿಗಳನ್ನು ಏಕಾಂಗಿಯಾಗಿ ಗೆಲ್ಲಿಸಿರುವ ಆಟಗಾರ.  ಆದರೆ ಸದ್ಯ ಕ್ರಿಕೆಟ್​ನಿಂದ (Cricket) ದೂರ ಉಳಿದಿದ್ದಾರೆ. ವಿರಾಟ್​ ಅನೇಕ ದಿನಗಳಿಂದ ಕಳಪೇ ಫಾರ್ಮ್​ನಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಬಿಸಿಸಿಐ (BCCI) ಕೆಲ ಸರಣಿಗಳಿಂದ ವಿಶ್ರಾಂತಿ ನೀಡಿತ್ತು. ಇದೇ ಕಾರಣಕ್ಕಾಗಿ ಕೊಹ್ಲಿ ಕಳೆದ ಇಂಗ್ಲೆಂಡ್​ ಸರಣಿಯ ನಂತರ ವೆಸ್ಟ್ ಇಂಡೀಸ್​, ಜಿಂಬಾಬ್ವೆ ಸರಣಿಗಳಿಂದ ಹೊರಗುಳಿದಿದ್ದರು. ಈ ವೇಳೆ ಅವರು ಅನುಷ್ಕಾ ಶರ್ಮಾ (Anushka Sharma)  ಜೊತೆ ಸಮಯ ಕಳೆಯುತ್ತಿದ್ದು, ಇದೀಗ ಮುಂಬೈನ ಬೀದಿಗಳಲ್ಲಿ ಈ ಜೋಡಿ ಸುತ್ತಿದ್ದಾರೆ.

ಮುಂಬೈ ಬೀದಿಗಳಲ್ಲಿ ಸ್ಟಾರ್​ ಜೋಡಿ ಸುತ್ತಾಟ:

ಹೌದು, ಇತ್ತೀಚೆಗೆ, ಜಾಹೀರಾತು ಚಿತ್ರೀಕರಣ ನಂತರ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ  ಮುಂಬೈ ರಸ್ತೆಗಳಲ್ಲಿ ಸ್ಕೂಟರ್​ ಮೇಳೆ ಹತ್ತಿ ಸವಾರಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಂಆಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿರಾಟ್ ಸ್ಕೂಟಿ ಓಡಿಸುತ್ತಿದ್ದರೆ, ಅನುಷ್ಕಾ ಶರ್ಮಾ ಅವರ ಹಿಂದೆ ಕುಳಿತಿದ್ದಾರೆ. ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆ ನೆಟ್ಟಗರು ಕೋಟಿ ಒಡೆಯ ಕೊಹ್ಲಿ ಸ್ಕೂಟರ್ ಓಡಿಸಿದ್ದು ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.


ಏಷ್ಯಾಕಪ್​ಗಾಗಿ ಕೊಹ್ಲಿ ಭರ್ಜರಿ ​ ತಯಾರಿ:


 ಹೌದು, ಈಗಾಗಲೇ ಕಳಪೆ ಫಾರ್ಮ್​ನಿಂದಾಗಿ ಕೆಲ ಟೂರ್ನಿಗಳಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಏಷ್ಯಾ ಕಪ್​ 2022 ಮೂಲಕ ಭರ್ಜರಿ ಆಗಿ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಈಗಾಗಲೇ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಕೊಹ್ಲಿ ಜಿಮ್​​​ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆವರು ಹರಿಸುತ್ತಿದ್ದು, ಈ ಕುರಿತ ವಿಡಿಯೋವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಟ್ವಿಟರ್​ ನಲ್ಲಿ ಹಂಚಿಕೊಂಡಿದ್ದು, ವೇಟ್‌ಲಿಫ್ಟಿಂಗ್ ಮಾಡುವ ಮೂಲಕ ಮತ್ತೆ ಹಳೆಯ ಲಯಕ್ಕೆ ಮರಳಲು ಕಷ್ಟಪಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
 ಪಾಕ್​ ವಿರುದ್ಧ ಶತಕ ಸಿಡಿಸಲಿರುವ ಕೊಹ್ಲಿ:


ಹೌದು, ಏಷ್ಯಾ ಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಕೊಹ್ಲಿ ಶತಕ ಸಿಡಿಸಲಿದ್ದಾರೆ. ಇದು ಹೇಗೆಂದು ಅಚ್ಚರಿಪಡಬೇಡಿ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಟೂರ್ನಿಯು ಆಗಸ್ಟ್ 27ರಿಂದ ಪ್ರಾರಂಭವಾಗುತ್ತಿದೆ. ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಕೊಹ್ಲಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಶತಕ ಸಿಡಿಸಲಿದ್ದಾರೆ. ಹೌದು, ಕೊಹ್ಲಿ ಪಾಕ್​ ವಿರುದ್ಧ ಮೈದಾನಕ್ಕೆ ಇಳಿಯುತ್ತಿದ್ದಂತೆ ತಮ್ಮ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ.

ಇದನ್ನೂ ಓದಿ: Virat Kohli: ಏಷ್ಯಾಕಪ್​ಗೆ ವಿರಾಟ್ ಭರ್ಜರಿ ತಯಾರಿ, ವರ್ಕೌಟ್ ವಿಡಿಯೋ ಹಂಚಿಕೊಂಡ ಕೊಹ್ಲಿ

ಏಷ್ಯಾ ಕಪ್​ಗೆ ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ),  ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.

Published by:shrikrishna bhat
First published: