ಅಬ್ಬಾ..! ಧೋನಿ ಮಿಂಚಿನ ಸ್ಟಂಪಿಂಗ್: ದಾಖಲೆ ಬರೆದ ಎಂಎಸ್​​ಡಿ

news18
Updated:September 29, 2018, 2:55 PM IST
ಅಬ್ಬಾ..! ಧೋನಿ ಮಿಂಚಿನ ಸ್ಟಂಪಿಂಗ್: ದಾಖಲೆ ಬರೆದ ಎಂಎಸ್​​ಡಿ
  • Advertorial
  • Last Updated: September 29, 2018, 2:55 PM IST
  • Share this:
ನ್ಯೂಸ್ 18 ಕನ್ನಡ

ಬಾಂಗ್ಲಾದೇಶ ವಿರುದ್ಧದ ಏಷ್ಯಾ ಕಪ್​​ನ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್​​ಗಳ ಭರ್ಜರಿ ಜಯದೊಂದಿಗೆ 7ನೇ ಬಾರಿ ಏಷ್ಯಾದ ಚಾಂಪಿಯನ್ ಪಟ್ಟ ತೊಟ್ಟಿದೆ. ಈ ಮಧ್ಯೆ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಮಾಡಿರುವ 2 ಸ್ಟಂಪ್ ಬಾಂಗ್ಲಾರನ್ನು 222 ರನ್​ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಧೋನಿ ಮಾಡಿದ ಆ ಎರಡು ಮಿಂಚಿನ ಸ್ಟಂಪಿಂಗ್​​ಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಸ್ಟಂಪಿಂಗ್​​ನಲ್ಲಿ ಧೋನಿ ನೂತನ ದಾಖಲೆ ಬರೆದಿದ್ದಾರೆ.

ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಲಿಟನ್ ದಾಸ್ ಅವರನ್ನು ಮಿಂಚಿನ ವೇಗದಲ್ಲಿ ಧೋನಿ ಸ್ಟಂಪ್ ಮಾಡಿ ಪೆವಿಲಿಯನ್​​ಗೆ ಅಟ್ಟಿದರು. ಇನ್ನು ಬಾಂಗ್ಲಾದೇಶದ ನಾಯಕ ಮುಶ್ರಫೆ ಮೊರ್ತಜಾ ಅವರನ್ನು ಕ್ಷಣಾರ್ಧಸಲ್ಲೇ ಧೋನಿ ಸ್ಂಪ್ ಔಟ್ ಮಾಡಿ ಹೊಸ ಸಾಧನೆ ಮಾಡಿದ್ದಾರೆ.ಧೋನಿ ಒಟ್ಟು 800 ವಿಕೆಟ್ ಕಬಳಿಸುವ ಮೂಲಕ ವಿಶ್ವದ ಮೂರನೇ ಹಾಗೂ ಭಾರತ ಮತ್ತು ಏಷ್ಯಾದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ಆಡಿರುವ 90 ಪಂದ್ಯಗಳಲ್ಲಿ ಧೋನಿ ಒಟ್ಟು 294 ವಿಕೆಟ್ ಉರುಳಿಸಿದ್ದರೆ, ಏಕದಿನದ 327 ಪಂದ್ಯದಲ್ಲಿ 419 ಹಾಗೂ ಟಿ-20ಯ 93 ಪಂದ್ಯದಲ್ಲಿ 87 ವಿಕೆಟ್ ಕಬಳಿಸುವ ಮೂಲಕ ಒಟ್ಟು 800 ವಿಕೆಟ್ ಕಿತ್ತು ಹೊಸ ದಾಖಲೆ ಬರೆದಿದ್ದಾರೆ.

  

First published:September 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ