ಪಂದ್ಯ ಸೋತರು ದಾಖಲೆ ಮೇಲೆ ದಾಖಲೆ ಬರೆದ 'ಕೊಹ್ಲಿ'

news18
Updated:September 3, 2018, 2:54 PM IST
ಪಂದ್ಯ ಸೋತರು ದಾಖಲೆ ಮೇಲೆ ದಾಖಲೆ ಬರೆದ 'ಕೊಹ್ಲಿ'
news18
Updated: September 3, 2018, 2:54 PM IST
ನ್ಯೂಸ್ 18 ಕನ್ನಡ

ನಿನ್ನೆಯಷ್ಟೆ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ನಡುವಣ 4ನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಕಂಡಿದ್ದು, ಇಂಗ್ಲೆಂಡ್ ತಂಡ 60 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ರೂಟ್ ಪಡೆ ಸರಣಿ ಕೈವಶ ಮಾಡಿಕೊಂಡಿದೆ. ಆದರೆ ಪಂದ್ಯ ಸೋತರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆ ಬರೆದಿದ್ದಾರೆ.

4ನೇ ಟೆಸ್ಟ್​​ನ 2ನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿ 58 ರನ್ ಬಾರಿಸಿದ್ದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​​ನಲ್ಲಿ ನಾಯಕನಾಗಿ ಅತಿ ವೇಗದ 4 ಸಾವಿರ ರನ್ ಪೂರೈಸಿದ ದಾಖಲೆಯನ್ನು ಕೊಹ್ಲಿ ಮಾಡಿದ್ದಾರೆ. ನಾಯಕನಾಗಿ 39 ಪಂದ್ಯಗಳ 65 ಇನ್ನಿಂಗ್ಸ್​ನಲ್ಲಿ ವಿರಾಟ್ ಈ ಸಾಧನೆ ಮಾಡಿದ್ದಾರೆ.ಅಲ್ಲದೆ ಒಟ್ಟಾರೆಯಾಗಿ ಕ್ಯಾಪ್ಟನ್ ಆದ ಬಳಿಕ 4 ಸಾವಿರ ರನ್ ಗಡಿಮುಟ್ಟಿದ ಆಟಗಾರರ ಪೈಕಿ ಕೊಹ್ಲಿ 10ನೇ ಸ್ಥಾನದಲ್ಲಿದ್ದರೆ, ಭಾರತ ಕ್ರಿಕೆಟ್ ತಂಡದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.ಇಷ್ಟೇ ಅಲ್ಲದೆ ನಾಯಕನಾಗಿ ಅತಿ ಕಡಿಮೆ ವಯಸ್ಸಿನಲ್ಲಿ 4 ಸಾವಿರ ರನ್ ಪೂರೈಸಿದ ಕೀರ್ತಿಯೂ ಕೊಹ್ಲಿ ಪಾಲಾಗಿದೆ.
Loading...ಇನ್ನು ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಸಾಲಿನಲ್ಲಿ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ. ಸದ್ಯ 4 ಪಂದ್ಯವನ್ನಾಡಿರುವ ಕೊಹ್ಲಿ 544 ರನ್ ಕಲೆಹಾಕಿದ್ದಾರೆ.

First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ