ಟೆನಿಸ್: ಟಾಪ್-200 ರ‍್ಯಾಂಕಿಂಗ್ ಪಡೆದ 3ನೇ ಭಾರತೀಯೆ ಅಂಕಿತಾ ರೈನಾ


Updated:April 10, 2018, 11:56 AM IST
ಟೆನಿಸ್: ಟಾಪ್-200 ರ‍್ಯಾಂಕಿಂಗ್ ಪಡೆದ 3ನೇ ಭಾರತೀಯೆ ಅಂಕಿತಾ ರೈನಾ
ಅಂಕಿತಾ ರೈನಾ
  • Share this:
- ನ್ಯೂಸ್18 ಕನ್ನಡ

ನವದೆಹಲಿ(ಏ. 10): ಭಾರತದ ಮಹಿಳಾ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ವಿಶ್ವ ಟಾಪ್-200 ರ‍್ಯಾಂಕಿಂಗ್‌ ತಲುಪಿದ್ದಾರೆ. ನಿನ್ನೆ ಬಿಡುಗಡೆಯಾದ ನೂತನ ಪಟ್ಟಿಯಲ್ಲಿ 15 ಕ್ರಮಾಂಕ ಮೇಲೇರಿದ ಅಂಕಿತಾ ರೈನಾ ಇದೀಗ ವಿಶ್ವದ 197ನೇ ರ‍್ಯಾಂಕಿಂಗ್‌ ಹೊಂದಿದ್ದಾರೆ. ಈ ಮೂಲಕ 25 ವರ್ಷದ ಅಂಕಿತಾ ರೈನಾ ಟಾಪ್-200 ರ‍್ಯಾಂಕಿಂಗ್‌ ಮಟ್ಟ ತಲುಪಿದ ಮೂರನೇ ಭಾರತೀಯ ಮಹಿಳೆ ಎನಿಸಿದ್ದಾರೆ. ಸಾನಿಯಾ ಮಿರ್ಜಾ ಮತ್ತು ನಿರುಪಮಾ ವೈದ್ಯನಾಥನ್ ಅವರು ಈ ಹಿಂದೆ ಈ ಸಾಧನೆ ಮಾಡಿದ ಭಾರತೀಯರಾಗಿದ್ಧಾರೆ. ಸಾನಿಯಾ ಮಿರ್ಜಾ 2007ರಲ್ಲಿ 27ನೇ ರ‍್ಯಾಂಕಿಂಗ್‌ ಮಟ್ಟ ತಲುಪಿದ್ದರು. ನಿರುಪಮಾ ಅವರು 1997ರಲ್ಲಿ 134ನೇ ಶ್ರೇಯಾಂಕಕ್ಕೇರಿದ್ದರು.

ಅಂಕಿತಾ ರೈನಾ ಅವರು ಸಾನಿಯಾ ಮಿರ್ಜಾ ಅವರ ದಾಖಲೆ ಮುರಿಯುವುದು ತೀರಾ ಕಷ್ಟಕರವಾಗಬಹುದು. ಆದರೆ, ಟಾಪ್-100 ರ‍್ಯಾಂಕಿಂಗ್‌ ಮಟ್ಟಕ್ಕೇರುವ ಛಲ ಅವರಲ್ಲಿದೆ. ಈ ವರ್ಷವೇ ಅವರು ಆ ಮಟ್ಟ ತಲುಪುವ ಗುರಿ ಇಟ್ಟುಕೊಂಡಿದ್ದಾರೆ.

ಅಂಕಿತಾ ರೈನಾ ಹುಟ್ಟಾಹೋರಾಟಗಾರರು. ಇದೇ ಮನೋಭಾವವು ಈಕೆಯನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬುದು ಆಕೆಯ ಕೋಚ್ ವಿಶ್ವಾಸ.

ಇನ್ನು ಇತರ ಭಾರತೀಯ ಟೆನಿಸ್ ಆಟಗಾರರ ಟೆನಿಸ್ ರ‍್ಯಾಂಕಿಂಗ್‌ ನೋಡಿದರೆ, ಯುಕಿ ಭಾಂಬ್ರಿ 105ನೇ ಶ್ರೇಯಾಂಕದೊಂದಿಗೆ ಟಾಪ್ ಇಂಡಿಯನ್ ಪ್ಲೇಯರ್ ಎನಿಸಿದ್ದಾರೆ. ರಾಮಕುಮಾರ್ ರಾಮನಾಥನ್ (133), ಸುಮಿತ್ ನಗಾಲ್ (213), ಪ್ರಜ್ನೇಶ್ ಗುನ್ನೇಶ್ವರನ್ (264) ಮತ್ತು ಅರ್ಜುನ್ ಕಾಧೆ (396) ಅವರು ಟಾಪ್-5 ಭಾರತೀಯರಾಗಿದ್ದಾರೆ. ಡಬಲ್ಸ್ ರ‍್ಯಾಂಕಿಂಗ್​ನಲ್ಲಿ ರೋಹನ್ ಬೋಪಣ್ಣ ನಂ.19ನೇ ಶ್ರೇಯಾಂಕ ಹೊಂದಿದ್ದಾರೆ. ದಿವಿಜ್ ಶರಣ್ (42) ಮತ್ತು ಲಿಯಾಂಡರ್ ಪೇಸ್ (45) ನಂತರದ ಕ್ರಮಾಂಕದಲ್ಲಿದ್ದಾರೆ.
First published:April 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ