ವಿರಾಟ್​-ಅನುಷ್ಕಾ ಕಾಡಿನಲ್ಲಿರುವಾಗ ಫೋಟೋ ಕ್ಲಿಕ್​ ಮಾಡಿದ್ದು ಅನಿಲ್​ ಕುಂಬ್ಳೆ!

ಈಗ ಕೊಹ್ಲಿ-ಅನುಷ್ಕಾ ಫೋಟೋ ಟ್ರೋಲ್​ ಆಗಲು ಕುಂಬ್ಳೆ ಛಾಯಾಗ್ರಹಣದ ಬಗ್ಗೆ ಹೊಂದಿರುವ ಆಸಕ್ತಿಯೇ ಕಾರಣ. ಯಾವಾಗ ಕೊಹ್ಲಿ ಕಾಡು ಹೊಕ್ಕಿದರೋ,  ಅನೇಕರು ಫೋಟೋ ಜೋಡಿಸಿ ಟ್ರೋಲ್​ ಮಾಡುತ್ತಿದ್ದಾರೆ.

Rajesh Duggumane | news18
Updated:February 7, 2019, 3:50 PM IST
ವಿರಾಟ್​-ಅನುಷ್ಕಾ ಕಾಡಿನಲ್ಲಿರುವಾಗ ಫೋಟೋ ಕ್ಲಿಕ್​ ಮಾಡಿದ್ದು ಅನಿಲ್​ ಕುಂಬ್ಳೆ!
ವಿರಾಟ್​-ಅನುಷ್ಕಾ ಜೋಡಿ ಹಾಗೂ ಕುಂಬ್ಳೆ
Rajesh Duggumane | news18
Updated: February 7, 2019, 3:50 PM IST
ನ್ಯೂಜಿಲೆಂಡ್ ಸರಣಿಯಿಂದ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಭಾರತಕ್ಕೆ ಹಿಂತಿರುಗಿದ್ದು, ಪತ್ನಿ ಅನುಷ್ಕಾ ಶರ್ಮಾ ಜೊತೆ ಕಾಡಿನಲ್ಲಿ ಓಡಾಟ ನಡೆಸುತ್ತಿದ್ದಾರೆ. ಟ್ರೆಕ್ಕಿಂಗ್​ನಲ್ಲೂ ಅವರು ಪಾಲ್ಗೊಳ್ಳುತ್ತಿದ್ದಾರೆ. ಈ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆ ಜಾಗ ಯಾವುದು? ಆ ಕಾಡಿನ ಹೆಸರೇನು? ಎಂಬುದನ್ನು ಈ ಜೋಡಿ ಬಹಿರಂಗ ಮಾಡಿಲ್ಲ.

ಈ ಮಧ್ಯೆ ಕಾಡಿದ ಮತ್ತೊಂದು ಪ್ರಶ್ನೆ ಎಂದರೆ, ಅನುಷ್ಕಾ-ವಿರಾಟ್​ ಫೋಟೋ ಕ್ಲಿಕ್​ ಮಾಡಿದ್ದು ಯಾರು? ಕಾಡಿನಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಬಂದ ವ್ಯಕ್ತಿಗಳು ಈ ಫೋಟೋ ಕ್ಲಿಕ್​ ಮಾಡಿದ್ದಿರಬಹುದು ಎಂದು ಅನೇಕರು ಊಹಿಸಿದ್ದರು. ಆದರೆ, ಈಗ ಅಸಲಿಯತ್ತು ಬಯಲಾಗಿದೆ. ಅದೇನೆಂದರೆ ವಿರುಷ್ಕಾ ಜೋಡಿ ಕಾಡಿನಲ್ಲಿ ಸುತ್ತಾಟ ನಡೆಸುತ್ತಿರುವಾಗ ಫೋಟೋ ಕ್ಲಿಕ್​ ಮಾಡಿದ್ದು ಬೇರಾರೂ ಅಲ್ಲ ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಅನಿಲ್​ ಕುಂಬ್ಳೆ!

ಅರೆ, ಈ ಜೋಡಿ ಸುತ್ತಾಡುವಾಗ ಅನಿಲ್​ ಕುಂಬ್ಳೆ ಅವರ ಹಿಂದೆ ಕ್ಯಾಮಾರಾ ಹಿಡಿದುಕೊಂಡು ಓಡಾಡಿದ್ದೇಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದರ ಸತ್ಯಾಸತ್ಯತೆ ಬಗ್ಗೆಯೂ ನೀವು ಪ್ರಶ್ನೆ ಮಾಡಬಹುದು. ಆದರೆ, ಈ ಸುದ್ದಿ ನಿಜವಲ್ಲ! ಅವರು ಕಾಡಿನಲ್ಲಿ ಓಡಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಟ್ರೋಲ್​ ಆಗುತ್ತಿದೆ.

ಇದನ್ನೂ ಓದಿ: ನಿಸರ್ಗದ ಮಡಿಲಲ್ಲಿ ಕೊಹ್ಲಿ-ಅನುಷ್ಕಾ ರೊಮ್ಯಾನ್ಸ್​: ಫೋಟೋ ವೈರಲ್


Loading...ಕುಂಬ್ಳೆ ಫೋಟೋಗ್ರಫಿ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದಾರೆ. ಕ್ರಿಕೆಟ್​ನಿಂದ ಬಿಡುವು ತೆಗೆದುಕೊಂಡು ಕ್ಯಾಮರಾ ಹೊತ್ತು ವನ್ಯಜೀವಿ ಛಾಯಾಗ್ರಹಣ ಮಾಡಲು ಅವರು ಕಾಡು ಹೊಕ್ಕಿದ್ದೂ ಇದೆ. ಭಾರತ ಕ್ರಿಕೆಟ್​ ತಂಡದ ಕೋಚರ್​ ಆಗಿದ್ದಾಗ ಇವರು ಫೋಟೋಗ್ರಾಫರ್​ ಆಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಫೋಟೋಗ್ರಾಫಿ ಬಗೆಗಿನ ಅಪಾರ ಆಸಕ್ತಿ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಈಗ ಕೊಹ್ಲಿ-ಅನುಷ್ಕಾ ಫೋಟೋ ಟ್ರೋಲ್​ ಆಗಲು ಕುಂಬ್ಳೆ ಛಾಯಾಗ್ರಹಣದ ಬಗ್ಗೆ ಹೊಂದಿರುವ ಆಸಕ್ತಿಯೇ ಕಾರಣ. ಯಾವಾಗ ಕೊಹ್ಲಿ ಕಾಡು ಹೊಕ್ಕಿದರೋ, ಅನೇಕರು ಫೋಟೋ ಜೋಡಿಸಿ ಟ್ರೋಲ್​ ಮಾಡುತ್ತಿದ್ದಾರೆ. ಈ ಫೋಟೋ ಬಗ್ಗೆ ಸಾಕಷ್ಟು ಚರ್ಚೆಗಳೂ ಕೂಡ ನಡೆಯುತ್ತಿದೆ.

ಇದನ್ನೂ ಓದಿ: ಕಾಫಿ ವಿವಾದ: ಹಾರ್ದಿಕ್-ರಾಹುಲ್ ವಿರುದ್ಧ ದಾಖಲಾಯಿತು ಎಫ್​​ಐಆರ್​​​

2016ರಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆದ ಕ್ರಿಕೆಟ್​ ಪಂದ್ಯದ ವೇಳೆ ಬಿಡುವು ಮಾಡಿಕೊಂಡು ಭಾರತ ಕ್ರಿಕೆಟ್​ ತಂಡ ಸಮುದ್ರದಲ್ಲಿ ಬೋಟಿಂಗ್​ಗೆ ತೆರಳಿತ್ತು. ಈ ವೇಳೆ ಕೆ.ಎಲ್​. ರಾಹುಲ್​ ಸಮುದ್ರಕ್ಕೆ ಡೈವ್​ ಮಾಡಿರುವ ಫೋಟೋಗಳನ್ನು ಅನಿಲ್​ ಕುಂಬ್ಳೆ ಕ್ಲಿಕ್​ ಮಾಡಿದ್ದರು. ಅವರ ಫೋಟೋಗ್ರಫಿ ಕೌಶಲ್ಯಕ್ಕೆ ಎಲ್ಲರೂ ತಲೆ ಬಾಗಿದ್ದರು.First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...