ಆಂಗ್ಲರ ನಾಡಲ್ಲಿ ಭಾರತೀಯ ಸ್ಪಿನ್ನರ್​ಗಳು ಅದ್ಭುತ ಪ್ರದರ್ಶನ ತೋರಲಿದ್ದಾರೆ: ಅನಿಲ್ ಕುಂಬ್ಳೆ

news18
Updated:June 23, 2018, 6:13 PM IST
ಆಂಗ್ಲರ ನಾಡಲ್ಲಿ ಭಾರತೀಯ ಸ್ಪಿನ್ನರ್​ಗಳು ಅದ್ಭುತ ಪ್ರದರ್ಶನ ತೋರಲಿದ್ದಾರೆ: ಅನಿಲ್ ಕುಂಬ್ಳೆ
news18
Updated: June 23, 2018, 6:13 PM IST
ನ್ಯೂಸ್ 18 ಕನ್ನಡ

ನವ ದೆಹಲಿ (ಜೂ. 23): ಭಾರತ ಹಾಗೂ ಇಂಗ್ಲೆಂಡ್ ಸರಣಿಗೆ ದಿನಗಣನೆ ಆರಂಭವಾಗಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರು ಭಾರತ ತಂಡದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಂಗ್ಲರ ನಾಡಲ್ಲಿಉತ್ತಮ ಪ್ರದರ್ಶನ ತೋರಲಿದೆ. ಅದರಲ್ಲು ಸ್ಪಿನ್ ಬೌಲರ್​ಗಳಿಗೆ ಆಂಗ್ಲರ ಪಿಚ್ ತುಂಬಾನೆ ಸಹಕಾರಿ ಆಗಲಿದೆ ಎಂದು ಕುಂಬ್ಳೆ ಹೇಳಿದ್ದಾರೆ. ನಮ್ಮ ಆಟಗಾರರಿಗೆ 50ಕ್ಕೂ ಹೆಚ್ಚು ಟೆಸ್ಟ್​ ಪಂದ್ಯವನ್ನು ಆಡಿದ ಅನುಭವವಿದೆ. ಭಾರತ ತಂಡದ ಪ್ರಮುಖ ಸ್ಪಿನ್ನರ್​ಗಳಾದ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ತಂಡದ ದಾಖಲೆ ಕಡಿಮೆ ಇದೆ. ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಸ್ಪಿನ್ನರ್​ಗಳೇ ಆಕರ್ಷಣೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಭಾರತಕ್ಕೆ ಇದು 18ನೇ ಇಂಗ್ಲೆಂಡ್ ಪ್ರವಾಸವಾಗಿದ್ದು, ಬಲಿಷ್ಠ ಬ್ಯಾಟಿಂಗ್ ಲೈನ್​ಅಪ್ ಜೊತೆಗೆ ಆಲ್ರೌಂಡರ್ ಆಟಗಾರರು ಇರುವುದರಿಂದ ಇಂಗ್ಲೆಂಡ್ ಸರಣಿ ಭಾರತಕ್ಕೆ ಸಹಕಾರಿಯಾಗಲಿದೆ. ಆಂಗ್ಲರ ನಾಡಲ್ಲಿ ಭಾರತೀಯರು ಈ ಹಿಂದೆ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಹಾಗಾಗಿ ಇಂಗ್ಲೆಂಡ್​ ಪಿಚ್ ಬಗ್ಗೆ ಆಟಗಾರರು ಉತ್ತಮವಾಗಿಯೇ ಅರಿತಿದ್ದಾರೆ ಎಂದು ಹೇಳಿದ್ದಾರೆ.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ