ಆಂಗ್ಲರ ಮೇಲೆ ಪಾಂಡ್ಯ ಸವಾರಿ; 161 ರನ್​ಗೆ ಆಂಗ್ಲರನ್ನು ಸದೆಬಡಿದ ಕೊಹ್ಲಿ ಪಡೆ

news18
Updated:August 19, 2018, 9:05 PM IST
ಆಂಗ್ಲರ ಮೇಲೆ ಪಾಂಡ್ಯ ಸವಾರಿ; 161 ರನ್​ಗೆ ಆಂಗ್ಲರನ್ನು ಸದೆಬಡಿದ ಕೊಹ್ಲಿ ಪಡೆ
ICC Twitter
news18
Updated: August 19, 2018, 9:05 PM IST
ನ್ಯೂಸ್ 18 ಕನ್ನಡ

ನ್ಯಾಟಿಂಗ್​​ಹ್ಯಾಮ್ ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ಪಂದ್ಯದಲ್ಲಿ ಆಂಗ್ಲರು ಮೊದಲ ಇನ್ನಿಂಗ್ಸ್ನಲ್ಲಿ 161 ರನ್​ಗೆ ಸರ್ವಪತನ ಕಂಡಿದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆ ಮುಖ ಮಾಡಿದರು. ಈ ಮೂಲಕ ಟೀಂ ಇಂಡಿಯಾ 168 ರನ್​ಗಳ ಮುನ್ನಡೆ ಅನುಭವಿಸಿದೆ.

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 329 ರನ್ಗೆ ಆಲೌಟ್ ಆಗಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಂಗ್ಲರು ಭೋಜನ ವಿರಾಮದ ಹೊತ್ತಿಗೆ ವಿಕೆಟ್ ನಷ್ಟವಿಲ್ಲದೆ 46 ರನ್ ಕಲೆಹಾಕಿತ್ತು. ನಂತರ ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ಭಾರತೀಯರು ಇಂಗ್ಲೆಂಡ್ ಬ್ಯಾಟ್ಸ್ಮನ್​​ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ಗೆ ಅಟ್ಟಿದರು. ಇಶಾಂತ್ ಶರ್ಮ ಎಸೆತದಲ್ಲಿ ಕುಕ್ 29 ರನ್ಗೆ ಔಟ್ ಆದರೆ, ಜೆನ್ನಿಂಗ್ಸ್(20) ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಪೋಪ್ ಕೇವಲ 10 ರನ್ಗೆ ನಿರ್ಗಮಿಸಿದರೆ, ನಾಯಕ ಜೋ ರೂಟ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ 16 ರನ್ಗೆ ಇನ್ನಿಂಗ್ಸ್ ಕೊನೆ ಗೊಳಿಸಿದರು. ಬಳಿಕ ಬಂದ ಬೆನ್ ಸ್ಟೋಕ್ಸ್ 10, ಜಾನಿ ಬೈರ್ಸ್ಟೋ 15, ಕ್ರಿಸ್ ವೋಕ್ಸ್ 8, ಆದಿಲ್ ರಶೀದ್ 8, ಸ್ಟುವರ್ಟ್ ಬ್ರಾಡ್ ಶೂನ್ಯಕ್ಕೆ ಔಟ್ ಆದರು. ಕೊನೆ ಹಂತದಲ್ಲಿ ಜೋಸ್ ಬಟ್ಲರ್ ಆರ್ಭಟದ ಫಲವಾಗಿ ಇಂಗ್ಲೆಂಡ್ 150 ರನ್​ಗಳ ಗಡಿ ದಾಟಲು ನೆರವಾಯಿತು. ಅಂತಿಮವಾಗಿ ಬಟ್ಲರ್ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸ್​ಗಳಿಂದ 39 ರನ್​ಗೆ ಔಟ್ ಆಗುವ ಮೂಲಕ ಇಂಗ್ಲೆಂಡ್ 161 ರನ್​​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಜೇಮ್ಸ್ ಆಂಡರ್ಸನ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.

ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ 5 ವಿಕೆಟ್ ಕಿತ್ತು ಮಿಂಚಿದರೆ, ಇಶಾಂತ್ ಶರ್ಮಾ ಹಾಗೂ ಬುಮ್ರಾ ತಲಾ 2 ವಿಕೆಟ್ ಪಡೆದರು. ಅಂತೆಯೆ ಮೊಹಮ್ಮದ್ ಶಮಿ, 1 ವಿಕೆಟ್ ಪಡೆದಿದ್ದಾರೆ.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ