Andrew Symonds Dogs: ಆ್ಯಕ್ಸಿಡೆಂಟ್​ಲ್ಲಿ ಬದುಕಿದ ಆಂಡ್ರ್ಯೂ ಸೈಮಂಡ್ಸ್ ಸಾಕಿದ ನಾಯಿಗಳು! ಮಾಲೀಕನ ಮೃತದೇಹ ಬಿಟ್ಟು ಬರಲೇ ಇಲ್ಲ!

ಆಂಡ್ರ್ಯೂ ಸೈಮಂಡ್ಸ್ ಅವರು ಸಾಕಿದ ಶ್ವಾನಕ್ಕೆ ತನ್ನ ಒಡೆಯನ ಮೃತದೇಹ ಬಿಟ್ಟು ಬರಲೂ ಸಾಧ್ಯವಾಗಿರಲಿಲ್ಲ ಎಂದು ಕ್ರಿಕೆಟಿಗನ ಕುಟುಂಬದ ಮೂಲಗಳು ಭಾವುಕ ಕ್ಷಣಗಳನ್ನು ಹಂಚಿಕೊಂಡಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕ್ರಿಕೆಟ್ ಲೋಕದ ದಿಗ್ಗಜ ಆಟಗಾರನಾಗಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ (Andrew Symonds Death) ಅವರ ಹಠಾತ್ ನಿಧನ ಇಡೀ ಕ್ರಿಕೆಟ್ ಜಗತ್ತನ್ನೇ ಆಘಾತಕ್ಕೀಡು ಮಾಡಿದೆ. ಆದರೆ ಈ ಭೀಕರ ಅಪಘಾತದಲ್ಲಿ (Andrew Symonds Accident) ಆಂಡ್ರ್ಯೂ ಸೈಮಂಡ್ಸ್ ಅವರ ಪ್ರೀತಿಯ ನಾಯಿಗಳು ಆಶ್ಚರ್ಯಕರವಾಗಿ ಬದುಕುಳಿದಿವೆ. ಅವುಗಳಲ್ಲಿ ಒಂದು ನಾಯಿಯಂತೂ ಮಾಜಿ ಕ್ರಿಕೆಟಿಗ, ತನ್ನ ಪ್ರೀತಿಯ ಆಂಡ್ರ್ಯೂ ಸೈಮಂಡ್ಸ್ ಅವರ ಮೃತ ದೇಹ ಬಿಟ್ಟು ಈಚೆ ಬರಲು ಸಿದ್ಧವೇ ಇರಲಿಲ್ಲ ಎಂದು ವರದಿಯಾಗಿದೆ. ಆಂಡ್ರ್ಯೂ ಸೈಮಂಡ್ಸ್ ಅವರು ಸಾಕಿದ ಶ್ವಾನಕ್ಕೆ (Andrew Symonds Dogs) ತನ್ನ ಒಡೆಯನ ಮೃತದೇಹ ಬಿಟ್ಟು ಬರಲೂ ಸಾಧ್ಯವಾಗಿರಲಿಲ್ಲ ಎಂದು ಕ್ರಿಕೆಟಿಗನ ಕುಟುಂಬದ ಮೂಲಗಳು (Andrew Symonds Family) ಭಾವುಕ ಕ್ಷಣಗಳನ್ನು ಹಂಚಿಕೊಂಡಿವೆ.

    ಅಪಘಾತದ ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇನ್ನು, ಕಳೆದ ಕೆಲ ತಿಂಗಳುಗಳ ಹಿಂದೆಯಷ್ಟೇ ಆಸ್ಟ್ರೇಲಿಯಾ ಕ್ರಿಕೆಟ್ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಕ್ರಿಕೆಟ್ ಜಗತ್ತು ಇದೀಗ ಇಬ್ಬರು ಲಜೇಂಡ್ ಕ್ರಿಕೆಟಿಗರನ್ನು ಕಳೆದುಕೊಂಡಂತಾಗಿದೆ.

    ಅಪಘಾತ ಆಗಿದ್ದು ಹೇಗೆ?
    ಸ್ಥಳೀಯ ಪೊಲೀಸ್ ಹೇಳಿಕೆಯ ಪ್ರಕಾರ, ‘ಪ್ರಾಥಮಿಕ ಮಾಹಿತಿಯು ರಾತ್ರಿ 11 ಗಂಟೆಯ ನಂತರ ಎಲ್ಲಿಸ್ ರಿವರ್ ಬ್ರಿಡ್ಜ್ ಬಳಿಯ ಹರ್ವೆ ರೇಂಜ್ ರಸ್ತೆಯಲ್ಲಿ ಕಾರು ಚಲಿಸುತ್ತಿರುವುದಾಗಿ ವರದಿಯಾಗಿದ್ದು, ನಂತರದಲ್ಲಿ ಆಂಡ್ರ್ಯೂ ಸೈಮಂಡ್ಸ್ ಅವರ ಕಾರು ಅಸಮತೋಲನಗೊಂಡು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಫೋರೆನ್ಸಿಕ್ ಕ್ರ್ಯಾಶ್ ಯುನಿಟ್ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ. ಅಲ್ಲದೇ ತುರ್ತು ಸೇವೆ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ.

    ಸೈಮಂಡ್ಸ್ ವೃತ್ತಿ ಜೀವನ
    ಸೈಮಂಡ್ಸ್ 1998 ರಿಂದ 2009 ರವರೆಗೆ ಆಸ್ಟ್ರೇಲಿಯನ್ ತಂಡದ ಭಾಗವಾಗಿದ್ದರು. ಈ ಸಮಯದಲ್ಲಿ, ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ನೇತೃತ್ವದ ಕಾಂಗರೂ ತಂಡವನ್ನು ಅಜೇಯವೆಂದು ಪರಿಗಣಿಸಲಾತ್ತು. ಸೈಮಂಡ್ಸ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 26 ಟೆಸ್ಟ್, 198 ODI ಮತ್ತು 14 T20Iಗಳನ್ನು ಆಡಿದ್ದಾರೆ.

    ಇದನ್ನೂ ಓದಿ: Ambati Rayudu: ಐಪಿಎಲ್​ನಿಂದ ನಿವೃತ್ತಿ ಘೋಷಿಸಿದ ರಾಯಡು, ಕೆಲವೇ ನಿಮಿಷದಲ್ಲಿ ಟ್ವೀಟ್ ಡಿಲೀಟ್

    ಟೆಸ್ಟ್‌ನಲ್ಲಿ 1462 ರನ್, ಏಕದಿನದಲ್ಲಿ 5088 ರನ್ ಮತ್ತು ಟಿ20ಯಲ್ಲಿ 337 ರನ್ ಗಳಿಸಿದ್ದಾರೆ. ಅವರು ತಮ್ಮ ಆಕ್ರಮಣಕಾರಿ ಶೈಲಿ ಮತ್ತು ಮೈದಾನದಲ್ಲಿ ಅತ್ಯುತ್ತಮ ಫೀಲ್ಡಿಂಗ್‌ಗೆ ಹೆಸರುವಾಸಿಯಾಗಿದ್ದರು.


    4 ವರ್ಷಗಳಲ್ಲಿ 3 ICC ಪ್ರಶಸ್ತಿ
    ಇನ್ನು ಆಂಡ್ರ್ಯೂ ಸೈಮಂಡ್ಸ್ ಆಸ್ಟ್ರೇಲಿಯಾದ ODI ತಂಡದ ಖಾಯಂ ಸದಸ್ಯರಾಗಿದ್ದರು. ಇವರು ಇದ್ದ ತಂಡವು ನಾಲ್ಕು ವರ್ಷಗಳಲ್ಲಿ ಮೂರು ICC ಪ್ರಶಸ್ತಿಗಳನ್ನು ಗೆದ್ದಿದೆ. ಅವರು 2003 ರಲ್ಲಿ ODI ವಿಶ್ವಕಪ್, 2006 ರಲ್ಲಿ ICC ಚಾಂಪಿಯನ್ಸ್ ಟ್ರೋಫಿ ಮತ್ತು 2007 ರಲ್ಲಿ ODI ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. 

    ಐಪಿಎಲ್ ಪ್ರಶಸ್ತಿಯನ್ನು ಗೆದ್ದ
    ಆಂಡ್ರ್ಯೂ ಸೈಮಂಡ್ಸ್ 2008 ರಲ್ಲಿ ಐಪಿಎಲ್‌ನ ಆರಂಭಿಕ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್‌ ತಂಡದ ಭಾಗವಾಗಿದ್ದರು. 2009 ರಲ್ಲಿ ಆಡಮ್ ಗಿಲ್‌ಕ್ರಿಸ್ಟ್ ನಾಯಕತ್ವದಲ್ಲಿಡೆಕ್ಕನ್ ಚಾರ್ಜರ್ಸ್‌ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತು. 2009 ರ ಫೈನಲ್‌ನಲ್ಲಿ ಅವರು 21 ಎಸೆತಗಳಲ್ಲಿ 33 ರನ್ ಗಳಿಸಿದರು. ಇದಲ್ಲದೇ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.

    ಇದನ್ನೂ ಓದಿ: IPL 2022: ಅಯ್ಯೋ! ನೋವಾಯ್ತಾ? ಆರ್​ಸಿಬಿ ಆಟಗಾರ ಸಿಡಿಸಿದ ಸಿಕ್ಸರ್ ಅಭಿಮಾನಿಯ ತಲೆಗೇ ಬಡೀತು!

    ಅಲ್ಲದೇ ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಅವಕಾಶ ಪಡೆದ ಈ ಆಟಗಾರ 6ನೇ ಕ್ರಮಾಂಕದಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 143 ರನ್ ಗಳಿಸಿ ದಅಖಲೆ ನಿರ್ಮಿಸಿದ್ದರು. ಈ ಇನ್ನಿಂಗ್ಸ್ ನಂತರ, ಅವರು ಮುಂದಿನ ಆರು ವರ್ಷಗಳ ಕಾಲ ತಂಡದ ಅತ್ಯಂತ ವಿಶ್ವಾಸಾರ್ಹ ಆಲ್ ರೌಂಡರ್ ಆಟಗಾರರಾಗಿ ಉಳಿದರು.
    Published by:guruganesh bhat
    First published: