ಭಾರತ-ಇಂಗ್ಲೆಂಡ್: ಜಿದ್ದಾಜಿದ್ದಿಯ ಟೆಸ್ಟ್​​ಗೆ ಇನ್ನೊಂದೆ ದಿನ ಬಾಕಿ

news18
Updated:July 31, 2018, 9:59 PM IST
ಭಾರತ-ಇಂಗ್ಲೆಂಡ್: ಜಿದ್ದಾಜಿದ್ದಿಯ ಟೆಸ್ಟ್​​ಗೆ ಇನ್ನೊಂದೆ ದಿನ ಬಾಕಿ
news18
Updated: July 31, 2018, 9:59 PM IST
ನ್ಯೂಸ್ 18 ಕನ್ನಡ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಜಿದ್ದಾಜಿದ್ದಿಯ ಟೆಸ್ಟ್​ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. 5 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯ ನಾಳೆಯಿಂದ ಬರ್ಮಿಂಗ್​​ ಹ್ಯಾಮ್​​ನ ಎಜ್​​​ ಬಾಸ್ಟನ್​​​ನಲ್ಲಿ ನಡೆಯಲಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಪಿಚ್ ಯಾವ ರೀತಿ ನಾಳಿನ ಪಂದ್ಯಕ್ಕೆ ಪ್ರತಿಕ್ರೀಯಿಸಲಿದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ. ಈ ಮಧ್ಯೆ ಉಭಯ ತಂಡಗಳ ಆಟಗಾರರ ಬಲಾ-ಬಲಾದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ.

ವಿರಾಟ್ ಕೊಹ್ಲಿ vs ಜೇಮ್ಸ್​ ಆಂಡರ್ಸನ್ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯವನ್ನು ವಿರಾಟ್ vs ಆಂಡರ್ಸನ್ ನಡುವಣ ಪಂದ್ಯ ಎನ್ನಬಹುದು. ಐಸಿಸಿ ಟೆಸ್ಟ್​ ಬೌಲಿಂಗ್ ರ್ಯಾಂಕಿಂಗ್​ನಲ್ಲಿ ಆಂಡರ್ಸನ್ ಮೊದಲ ಸ್ಥಾನದಲ್ಲಿದ್ದರೆ, ನಾಯಕ ಕೊಹ್ಲಿ ಬ್ಯಾಟಿಂಗ್​ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2014ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಬೆಳೆಸಿದ್ದ ವೇಳೆ ಕೊಹ್ಲಿ ಅವರು ಆಂಡರ್ಸನ್ ಎಸೆತದಲ್ಲಿ ಒಟ್ಟು ನಾಲ್ಕು ಬಾರಿ ಔಟ್ ಆಗಿದ್ದರು. ಅಲ್ಲದೆ ಆಗಿನ ಪ್ರವಾಸಕ್ಕೆ ಹೋಲಿಸಿದರೆ ಕೊಹ್ಲಿ ಈಗ ಸಾಕಷ್ಟು ಬದಲಾಗಿ ಅನುಭವ ಹೊಂದಿದ್ದಾರೆ. ಇನ್ನು ಇಂಗ್ಲೆಂಡ್ ನೆಲದಲ್ಲಿ ಒಂದೇ ಒಂದು ಶತಕ ಸಿಡಿಸಿದ ಕೊಹ್ಲಿ, ಈ ಬಾರಿ ಮೂರಂಕಿ ಸಂಖ್ಯೆ ದಾಟಬೇಕೆಂದು ಕಾದುಕುಳಿತಿದ್ದಾರೆ.

ಮುರಳಿ ವಿಜಯ್ vs ಸ್ಟುವರ್ಟ್​ ಬ್ರಾಡ್


Loading...

ಈಗಾಗಲೇ ಗಾಯದ ಸಮಸ್ಯೆಯಿಂದ ಸಂಪೂರ್ಣ ಗುಣಮುಖವಾಗಿ ಇಂಗ್ಲೆಂಡ್ ತಂಡಕ್ಕೆ ಮರಳಿರುವ ಇನ್ನೊಬ್ಬ ಸ್ಟಾರ್ ಬೌಲರ್ ಸ್ಟುವರ್ಟ್​​ ಬ್ರಾಡ್ ಮೇಲೆ ತಂಡ ಹೆಚ್ಚಿನ ನಂಬಿಕೆ ಹೊಂದಿದೆ. ಅಂತೆಯೆ ಟೆಸ್ಟ್​ ಕ್ರಿಕೆಟ್​​ನಲ್ಲಿ ಅದರಲ್ಲು ಇಂಗ್ಲೆಂಡ್ ಪಿಚ್​​ ಬಗ್ಗೆ ಸಾಕಷ್ಟು ಅರಿತಿರುವ ಮುರಳಿ ವಿಜಯ್ ಬ್ರಾಡ್​ ಬೌಲಿಂಗ್​ಗೆ ಯಾವ ರೀತಿ ಬ್ಯಾಟ್ ಬೀಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಬ್ಯಾಟಿಂಗ್​​ನಲ್ಲಿ ವಿಜಯ್ ಆರಂಭಿಕರಾಗಿ ಕಣಕ್ಕಿಳಿದರೆ, ಬೌಲಿಂಗ್​ನಲ್ಲಿ ಬ್ರಾಂಡ್ ವಿಜಯ್​ಗೆ ಬೆಂಕಿಯ ಚೆಂಡನ್ನು ಎಸೆಯುವುದು ಕಂಡಿತ.

ಅಜಿಂಕ್ಯ ರಹಾನೆ vs ಆದಿಲ್ ರಶೀದ್ತವರಿನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಅಜಿಂಕ್ಯ ರಹಾನೆ ವಿದೇಶಿ ನೆಲದಲ್ಲಿ ಉತ್ತಮ ಆಟವಾಡಿದ್ದಾರೆ. ಅದರಲ್ಲು ಸ್ಪಿನ್ನರ್​​ಗಳ ಎಸೆತಕ್ಕೆ ನಾಜುಕಾಗಿ ಬ್ಯಾಟ್ ಬೀಸುವ ರಹಾನೆ ಅವರು ಆದಿಲ್ ರಶೀದ್ ಅವರ ಸ್ಪಿನ್ ಅನ್ನು ಯಾವ ರೀತಿ ಎದುರಿಸುತ್ತಾರೆಂದು ನೋಡಲು ಅಭಿಮಾನಿಗಳು ಕಾತುರದಲ್ಲಿದ್ದಾರೆ.

ಇಶಾಂತ್ ಶರ್ಮಾ vs ಜೋ ರೂಟ್ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್​ಮನ್​​ ಜೋ ರೂಟ್ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಫಾಸ್ಟ್​ ಬೌಲರ್​​ಗಳ ಎಸೆತಕ್ಕೆ ಮನಬಂದಂತೆ ಚಚ್ಚುವ ರೂಟ್ ಇಶಾಂತ್ ಶರ್ಮಾ ಅವರ ಬೌನ್ಸ್​ ಬೌಲಿಂಗ್​ಗೆ ಯಾವರೀತಿ ಆಡಲಿದ್ದಾರೆ ನೋಡಬೇಕಿದೆ. ಜೋ ರೂಟ್ ಉತ್ತಮ ಫಾರ್ಮ್​​ನಲ್ಲಿದ್ದರೆ, ಇಶಾಂತ್ ಶರ್ಮಾ ಈಗಾಗಲೇ ತನ್ನ ಸಾಮರ್ಥ್ಯವನ್ನು ಇಂಗ್ಲೆಂಡ್ ನೆಲದಲ್ಲಿ ಸಾಭೀತು ಪಡಿಸಿದ್ದಾರೆ. ಹೀಗಾಗಿ ಇವರಿಬ್ಬರ ನಡುವಣ ಜಿದ್ದಾಜಿದ್ದಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ