ವಿಶ್ವ ಬಾಕ್ಸಿಂಗ್‌ ಚಾಂಪಿಯನ್​​ಶಿಪ್​​​​: ಫೈನಲ್ಸ್​​ ಸೋತರೂ ಬೆಳ್ಳಿ ಪದಕ ಗೆದ್ದು ದಾಖಲೆ ನಿರ್ಮಿಸಿದ ಅಮಿತ್​​ ಫಂಗಲ್​​

ಶನಿವಾರ ನಡೆದ ಪುರುಷರ 52 ಕೆ.ಜಿ ವಿಭಾಗದ ಸೆಮಿ ಫೈನಲ್​ನಲ್ಲಿ ಖಜಕಸ್ತಾನದ ಸಕೆನ್​​ ಬಿಬೋಸಿನೋವ್​​ ವಿರುದ್ಧ 3-2 ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಆ ಮೂಲಕ ಪುರುಷರ ಬಾಕ್ಸಿಂಗ್​ ಫೈನಲ್​ ಪ್ರವೇಶಿಸಿದ ಭಾರತದ ಮೊತ್ತ ಮೊದಲ ಪುರುಷ ಬಾಕ್ಸರ್​ ಎಂಬ ದಾಖಲೆಗೆ ಪಾತ್ರರಾದರು.

news18-kannada
Updated:September 21, 2019, 11:15 PM IST
ವಿಶ್ವ ಬಾಕ್ಸಿಂಗ್‌ ಚಾಂಪಿಯನ್​​ಶಿಪ್​​​​: ಫೈನಲ್ಸ್​​ ಸೋತರೂ ಬೆಳ್ಳಿ ಪದಕ ಗೆದ್ದು ದಾಖಲೆ ನಿರ್ಮಿಸಿದ ಅಮಿತ್​​ ಫಂಗಲ್​​
ಶನಿವಾರ ನಡೆದ ಪುರುಷರ 52 ಕೆ.ಜಿ ವಿಭಾಗದ ಸೆಮಿ ಫೈನಲ್​ನಲ್ಲಿ ಖಜಕಸ್ತಾನದ ಸಕೆನ್​​ ಬಿಬೋಸಿನೋವ್​​ ವಿರುದ್ಧ 3-2 ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಆ ಮೂಲಕ ಪುರುಷರ ಬಾಕ್ಸಿಂಗ್​ ಫೈನಲ್​ ಪ್ರವೇಶಿಸಿದ ಭಾರತದ ಮೊತ್ತ ಮೊದಲ ಪುರುಷ ಬಾಕ್ಸರ್​ ಎಂಬ ದಾಖಲೆಗೆ ಪಾತ್ರರಾದರು.
  • Share this:
ಎಕಟೆರಿನ್​ಬರ್ಗ್​(ರಷ್ಯಾ): ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಯುವ ಪ್ರತಿಭಾವಂತ ಬಾಕ್ಸರ್​ ಅಮಿತ್​ ಫಂಗಲ್​ ಫೈನಲ್​ ಪಂದ್ಯದಲ್ಲಿ ಸೋತರೂ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

​ಶನಿವಾರ ನಡೆದ ಪುರುಷರ 52 ಕೆ.ಜಿ ವಿಭಾಗದ ಸೆಮಿ ಫೈನಲ್​ನಲ್ಲಿ ಖಜಕಸ್ತಾನದ ಸಕೆನ್​​ ಬಿಬೋಸಿನೋವ್​​ ವಿರುದ್ಧ 3-2 ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಆ ಮೂಲಕ ಪುರುಷರ ಬಾಕ್ಸಿಂಗ್​ ಫೈನಲ್​ ಪ್ರವೇಶಿಸಿದ ಭಾರತದ ಮೊತ್ತ ಮೊದಲ ಪುರುಷ ಬಾಕ್ಸರ್​ ಎಂಬ ದಾಖಲೆಗೆ ಪಾತ್ರರಾದರು.

ಇದನ್ನೂ ಓದಿ: ಪ್ರೀತಿ ಒಪ್ಪಿಕೊಳ್ಳದಿದ್ದಕ್ಕೆ ಹುಚ್ಚು ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಸಾವು

ಆದರೆ ಫೈನಲ್​ ಪಂದ್ಯದಲ್ಲಿ ಅಮಿತ್​ ಸೋತರು ಭಾರತದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಫೈನಲ್​ ಪಂದ್ಯದ ವೇಳೆ ಆರಂಭದಿಂದಲೂ ನೀರಿಕ್ಷೆಯಷ್ಟು ಪ್ರದರ್ಶನ ತೋರಿಸಲಾಗದೆ ಎದುರಾಳಿ ಆಟಕ್ಕೆ ಅಮಿತ್​ ಮಂಕಾಗಿದ್ದರು.

ಏಷ್ಯಾ ಗೇಮ್ಸ್​ ಚಿನ್ನದ ಪದಧಾರಿಯಾಗಿರುವ ಅಮಿತ್​ ಬಾಕ್ಸಿಂಗ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ತಲುಪುವ ಮೂಲಕ ಭಾರತೀಯ ಬಾಕ್ಸರ್​ಗಳಾದ ವಿಜೇಂದರ್​, ವಿಕಾಸ್​​ ಕೃಷ್ಣನ್​​​, ಶಿವ ತಾಪ ಹಾಗೂ ಗೌರವ್​​ ಬಿಧುರಿ ಸಾಧನೆಯನ್ನು ಮೀರಿಸಿದ್ದಾರೆ.

First published:September 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading