ಅಮೆಜಾನ್ ಪ್ರೈಮ್​ನಲ್ಲೂ ಇನ್ಮುಂದೆ ನೀವು ಲೈವ್ ಕ್ರಿಕೆಟ್ ವೀಕ್ಷಿಸಿಬಹುದು!; ಹೇಗೆ? ಇಲ್ಲಿದೆ ಮಾಹಿತಿ

ಇಷ್ಟು ವರ್ಷ ಸಿನಿಮಾ ಹಾಗೂ ವೆಬ್​ ಸೀರಿಸ್​ಗಳ ಪ್ರಸಾರಕ್ಕೆ ಮಾತ್ರ ಪ್ರೈಮ್​ ವಿಡಿಯೋ ಸೀಮಿತವಾಗಿತ್ತು. ದಿನದಿಂದ ದಿನಕ್ಕೆ ಖ್ಯಾತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆಜಾನ್​ ಪ್ರೈಮ್​ ಈ ನಿರ್ಧಾರಕ್ಕೆ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸ್ಟಾರ್ ಸಂಸ್ಥೆಯ ಒಡೆತನದ ಹಾಟ್​ಸ್ಟಾರ್​ ಆ್ಯಪ್​ ಇತ್ತೀಚೆಗೆ ಖ್ಯಾತಿ ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಆ್ಯಪ್​ನಲ್ಲಿ ಲೈವ್​ ಕ್ರಿಕೆಟ್​ ವೀಕ್ಷಣೆಗೆ ಅವಕಾಶ ಇರುವುದು ಇದಕ್ಕೆ ಕಾರಣ. ಈಗ ಹಾಟ್​​ಸ್ಟಾರ್​ಗೆ ಸ್ಪರ್ಧೆ ನೀಡೋಕೆ ಅಮೆಜನಾ​ ಪ್ರೈಮ್ ವಿಡಿಯೋ​ ಮುಂದಾಗಿದೆ. ನ್ಯೂಜಿಲೆಂಡ್​ನಲ್ಲಿ ನಡೆಯುವ ಕ್ರಿಕೆಟ್​ಗಳನ್ನು ಭಾರತದಲ್ಲಿ ನೇರ ಪ್ರಸಾರ ಮಾಡುವ ಹಕ್ಕನ್ನು ಪ್ರೈಮ್​ ವಿಡಿಯೋ ಪಡೆದುಕೊಂಡಿದೆ. ಈ ಒಪ್ಪಂದ 2025-26ರವರೆಗೆ ಇರಲಿದೆ.

  ಈ  ವರ್ಷದಿಂದಲೇ ಈ ಒಪ್ಪಂದ ಆರಂಭ ಆಗಲಿದೆ. ಈ ಒಪ್ಪಂದ ಪ್ರಕಾರ ನ್ಯೂಜಿಲೆಂಡ್​ ಅಂಗಳದಲ್ಲಿ ನಡೆಯುವ ಏಕದಿನ, ಟಿ-20 ಹಾಗೂ ಟೆಸ್ಟ್​ ಪಂದ್ಯಗಳನ್ನು ಭಾರತದಲ್ಲಿ ಪ್ರಸಾರ ಮಾಡುವ ಹಕ್ಕು ಪ್ರೈಮ್​ಗೆ ಇರಲಿದೆ.

  2022ರ ಆರಂಭದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿದೆ. ಎರಡನೇ ಟೂರ್​ನ ದಿನಾಂಕ ಕೂಡ ಇನ್ನಷ್ಟೇ ಘೋಷಣೆ ಆಗಬೇಕಿದೆ. ಇವುಗಳ ನೇರ ಪ್ರಸಾರದ ಹಕ್ಕು ಪ್ರೈಮ್​ ಬಳಿ ಇದೆ.  ಇಷ್ಟು ವರ್ಷ ಸಿನಿಮಾ ಹಾಗೂ ವೆಬ್​ ಸೀರಿಸ್​ಗಳ ಪ್ರಸಾರಕ್ಕೆ ಮಾತ್ರ ಪ್ರೈಮ್​ ವಿಡಿಯೋ ಸೀಮಿತವಾಗಿತ್ತು. ದಿನದಿಂದ ದಿನಕ್ಕೆ ಖ್ಯಾತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆಜಾನ್​ ಪ್ರೈಮ್​ ಈ ನಿರ್ಧಾರಕ್ಕೆ ಬಂದಿದೆ.
  Published by:Rajesh Duggumane
  First published: