• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Shahbaz Ahmed: ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಆಲ್‌ರೌಂಡರ್‌ ಶಹಬಾಜ್, ಹಳೆಯ ದಿನಗಳನ್ನು ಮೆಲುಕು ಹಾಕಿದ ಪೋಷಕರು

Shahbaz Ahmed: ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಆಲ್‌ರೌಂಡರ್‌ ಶಹಬಾಜ್, ಹಳೆಯ ದಿನಗಳನ್ನು ಮೆಲುಕು ಹಾಕಿದ ಪೋಷಕರು

ಶಹಬಾಜ್ ಅಹ್ಮದ್

ಶಹಬಾಜ್ ಅಹ್ಮದ್

ಆಲ್‌ರೌಂಡರ್‌ ಶಹಬಾಜ್ ಅಹ್ಮದ್ ಮುದೊಂದು ದಿನ ಟೀಮ್ ಇಂಡಿಯಾ ಪರ ಆಡೇ ಆಡುತ್ತಾರೆ ಅಂತಾ ಹಲವು ಕ್ರಿಕೆಟ್‌ ಅಭಿಮಾನಿಗಳು ನಿರೀಕ್ಷಿಸಿದ್ದರು. ಪ್ರಸ್ತುತ ಅಭಿಮಾನಿಗಳ ಊಹೆ, 27 ವರ್ಷದ ಪ್ರತಿಭಾನ್ವಿತ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಪರಿಶ್ರಮ ಈ ಎರಡೂ ಫಲಿಸಿದೆ. ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್‌ ಆಡುವ ಮೊತ್ತ ಮೊದಲ ಅವಕಾಶ ಪಡೆದುಕೊಂಡ ಶಹಬಾಜ್ ಕನಸು ನನಸಾಗಿದೆ. 

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • New Delhi, India
 • Share this:

ಐಪಿಎಲ್‌ನಲ್ಲಿ(IPL) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡುತ್ತಿದ್ದ ಆಲ್‌ರೌಂಡರ್‌ ಶಹಬಾಜ್ ಅಹ್ಮದ್ (Shahbaz Ahmed) ಮುದೊಂದು ದಿನ ಟೀಮ್ ಇಂಡಿಯಾ ಪರ ಆಡೇ ಆಡುತ್ತಾರೆ ಅಂತಾ ಹಲವು ಕ್ರಿಕೆಟ್‌ ಅಭಿಮಾನಿಗಳು ನಿರೀಕ್ಷಿಸಿದ್ದರು. ಪ್ರಸ್ತುತ ಅಭಿಮಾನಿಗಳ ಊಹೆ, 27 ವರ್ಷದ ಪ್ರತಿಭಾನ್ವಿತ ಆಲ್‌ರೌಂಡರ್ ಶಹಬಾಜ್ ಅಹ್ಮದ್ ಪರಿಶ್ರಮ ಈ ಎರಡೂ ಫಲಿಸಿದೆ. ಟೀಮ್ ಇಂಡಿಯಾ (Team India) ಪರ ಏಕದಿನ ಕ್ರಿಕೆಟ್‌ ಆಡುವ ಮೊತ್ತ ಮೊದಲ ಅವಕಾಶ ಪಡೆದುಕೊಂಡ ಶಹಬಾಜ್ ಕನಸು ನನಸಾಗಿದೆ. 27 ವರ್ಷದ ಪ್ರತಿಭಾನ್ವಿತ ಆಲ್‌ರೌಂಡರ್‌ (All Rounder) ಶಹಬಾಜ್‌ಗೆ ಕ್ರಿಕೆಟ್ ಆಟವೇ ಎಲ್ಲಾ. ಇಂಜಿನಿಯರಿಂಗ್ ತೊರೆದು ಕ್ರಿಕೆಟ್ (Cricket) ಕಡೆ ಒಲವು ತೋರಿದ್ದ ಈ ಹುಡುಗ ಬ್ಲೂ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ.


ಇದೇ ಸಂಭ್ರಮದಲ್ಲಿ ಶಹಬಾಜ್‌ ಪೋಷಕರಾದ ಅಹಮದ್ ಜಾನ್ ಮತ್ತು ತಾಯಿ ಅಬ್ನಮ್ ತಮ್ಮ ಮಗನ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.


ಟೀಮ್ ಇಂಡಿಯಾಗೆ ಶಹಬಾಜ್‌ ಎಂಟ್ರಿ.. ಪೋಷಕರ ಸಂಭ್ರಮ
ಶಹಬಾಜ್‌ ಕಷ್ಟಗಳನ್ನೇ ನೋಡದ ಹುಡುಗ. ಮನೆಯ ಪರಿಸ್ಥಿತಿ ಅನುಕೂಲಕರವಾಗಿತ್ತು. ಶಹಬಾಜ್‌ಗೆ ಮನೆ ನಿಭಾಯಿಸುವ ಅಥವಾ ಹಣ ನೀಡಬೇಕಾದ ಯಾವ ಸಂದರ್ಭವೂ ಇರಲಿಲ್ಲ. ಶಹಬಾಜ್‌ ತಂದೆ ಅಹಮದ್ ಜಾನ್ ಹರಿಯಾಣದ ಸರ್ಕಾರದ ಉದ್ಯೋಗಿ. ಇವರು ನುಹ್ ಜಿಲ್ಲೆಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದು, ಇವರೇ ಮನೆಯನ್ನು ನಿರ್ವಹಿಸುತ್ತಿದ್ದರು.


"ಕ್ರಿಕೆಟ್‌ಗಾಗಿ ಶಹಬಾಜ್‌ ಕಾಲೇಜು ಬಿಡುತ್ತಾನೆಂದು ಊಹೆ ಮಾಡಿರಲಿಲ್ಲ"
ಶಾಲಾ ದಿನಗಳಿಂದ ಉತ್ತಮ ವಿದ್ಯಾರ್ಥಿಯಾಗಿದ್ದ ಶಹಬಾಜ್‌ ಮುಂದೊಂದು ದಿನ ಕ್ರಿಕೆಟ್‌ ಸಲುವಾಗಿ ಆತ ಕಾಲೇಜು ಬಿಡುತ್ತಾನೆ ಎಂದು ನಾವು ಊಹಿಸಿರಲಿಲ್ಲ ಎಂದು ಕ್ರಿಕೆಟರ್‌ ಪೋಷಕರು ಹೇಳಿದರು. ಕ್ರಿಕೆಟ್‌ ಎಂದರೆ ನಮಗೂ ಇಷ್ಟ, ನಾನು ಸಹ ಕಾಲೇಜಿನಲ್ಲಿರುವಾಗ ಆಡುತ್ತಿದ್ದೆ.


ಆದರೆ, ನಮಗೆ ಆಟಕ್ಕಿಂತ ಶಿಕ್ಷಣವೇ ಹೆಚ್ಚಾಗಿತ್ತು. ನನ್ನ ತಂದೆ ಮೊಹಮ್ಮದ್ ಇಶಾಕ್ ಮುಖ್ಯೋಪಾಧ್ಯಾಯರಾಗಿದ್ದರು. ನಾನು ಸರ್ಕಾರಿ ಉದ್ಯೋಗಿ, ನನ್ನ ಕಿರಿಯ ಸಹೋದರ ಶಿಕ್ಷಕ, ಮತ್ತು ನನ್ನ ಮಗಳು ಡಾಕ್ಟರ್. ಹೀಗೆ ನಮ್ಮ ಕುಟುಂಬ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿತ್ತು ಎಂದರು ಜಾನ್.


ಬೆಸ್ಟ್‌ ಸ್ಟೂಡೆಂಟ್‌ ಆಗಿದ್ದ ಶಹಬಾಜ್
ಶಹಬಾಜ್ ಸಹ ಅದ್ಭುತ ವಿದ್ಯಾರ್ಥಿಯಾಗಿದ್ದ, ಅವನು ಹತ್ತನೇ ತರಗತಿಯಲ್ಲಿ 80% ಮತ್ತು ಸೆಕೆಂಡ್‌ ಪಿಯುಸಿಯಲ್ಲಿ 88% ಪಡೆದಿದ್ದನು. ಶಹಬಾಜ್ ಕ್ರಿಕೆಟ್ ಆಡಲಿಕ್ಕೆ ಓದು ಬಿಡುತ್ತಾನೆ ಎಂದು ನನ್ನ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಎಂದು ಜಾನ್ ಹೇಳುತ್ತಾರೆ,


ಈ ಬಗ್ಗೆ ಮಾತನಾಡಿದ ಶಹಬಾಜ್‌ ತಾಯಿ ಅಬ್ನಮ್ "ಅವನು ತನ್ನ ಇಂಜಿನಿಯರಿಂಗ್ ಪೂರ್ಣಗೊಳಿಸಬೇಕು, ಒಳ್ಳೆಯ ಕೆಲಸ ಪಡೆಯಬೇಕು ಎಂದು ನಾನು ಬಯಸಿದ್ದೆ, ಆದರೆ ಕೆಲವೊಮ್ಮೆ, ಅವರ ಆಯ್ಕೆ ಏನು ಎಂದು ನಾವು ನಮ್ಮ ಮಕ್ಕಳನ್ನೂ ಕೇಳಬೇಕಾಗುತ್ತದೆ" ಎಂದು ನಗುತ್ತಾ ಉತ್ತರಿಸಿದರು.


ಇದನ್ನೂ ಓದಿ: National Games: ಅಗಲಿದ ಕೋಚ್​ಗೆ ಗೋಲ್ಡ್​ ಮೆಡಲ್ ಗೆದ್ದು ಅರ್ಪಿಸಿದ ಶಿಷ್ಯ


ಲಾಕ್‌ಡೌನ್ ಸಮಯದಲ್ಲಿ ಶಹಬಾಜ್ ತನ್ನ ಪದವಿಯನ್ನು ಪೂರ್ಣಗೊಳಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಅಹ್ಮದ್ ಹೇಳುತ್ತಾರೆ. ನಾನು ನನ್ನ ಮಗನ ‌ಟ್ರೋಫಿಗಳನ್ನು ಇಡಲು ಹೊಸ ಶೆಲ್ಫ್‌ ನಿರ್ಮಿಸುತ್ತಿದ್ದೇನೆ ಎಂಬುದಾಗಿ ಮಗನ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.


ಕಾಲೇಜಿಗೆ ಬಂಕ್‌ ಮಾಡಿ ಕ್ರಿಕೆಟ್‌ ಆಡಲು ಹೋಗುತ್ತಿದ್ದ ಶಹಬಾಜ್
ಶಹಬಾಜ್ ತಿಂಗಳಿನಿಂದ ತರಗತಿಗಳಿಗೆ ಹಾಜರಾಗುತ್ತಿಲ್ಲ ಎಂದು ಕಾಲೇಜಿನಿಂದ ಬರುತ್ತಿದ್ದ ನೋಟೀಸ್‌ ದಿನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಅಹ್ಮದ್ ಮತ್ತು ಅಬ್ನಮ್ ತಿಳಿಸಿದರು. ನನ್ನ ಮಗ ಕಾಲೇಜಿಗೆ ಬಂಕ್‌ ಮಾಡಿ ಕ್ರಿಕೆಟ್‌ ಆಡಲು ಹೋಗುತ್ತಿದ್ದ.


ಇದು ನಮಗೆ ಸಾಕಷ್ಟು ಆತಂಕ ಮೂಡಿಸಿತ್ತು ಎಂದು ಆ ದಿನಗಳನ್ನು ಶಹಬಾಜ್‌ ಪೋಷಕರು ನೆನೆಸಿಕೊಂಡರು. ಆತ ಕಳೆದ ಎರಡು ವರ್ಷಗಳಿಂದ ಹರಿಯಾಣ U-19 ಶಿಬಿರದಲ್ಲಿ ಭಾಗವಹಿಸುತ್ತಿರುವುದು ನಮಗೆ ತಿಳಿಯಿತು. ನಂತರ ನಮಗೆ ಶಹಬಾಜ್‌ಗೆ ಶಿಕ್ಷಣಕ್ಕಿಂತ ಕ್ರಿಕೆಟ್‌ ಮೇಲೆ ಒಲವಿದೆ ಎಂದು ಅರಿವಾಯಿತು. ನಾವು ಕೂಡ ಅವನ ಇಷ್ಟಕ್ಕೆ ಅವನನ್ನು ಬಿಟ್ಟೆವು ಎನ್ನುತ್ತಾರೆ ಪೋಷಕರು. ಆದರೆ ಕ್ರಿಕೆಟ್‌ ಜೊತೆಜೊತೆಯೇ ಓದು ಮುಂದುವರೆಸುತ್ತಾನೆ ಎಂದು ನಾವು ಭಾವಿಸಿದ್ದೆವು. ಆದರೆ ನಮ್ಮಿಬ್ಬರಿಗೂ ಶಾಕ್‌ ಒಂದು ಎದುರಾಗಿತ್ತು. ಶಹಬಾಜ್ ತನ್ನ ಕ್ರಿಕೆಟ್ ಕನಸುಗಳನ್ನು ಮುಂದುವರಿಸಲು ಕಾಲೇಜನ್ನೇ ಬಿಟ್ಟು ಕೋಲ್ಕತ್ತಾಗೆ ತೆರಳಲು ನಿರ್ಧರಿಸಿದನು" ಎಂದು ಶಹಬಾಜ್‌ ಪೋಷಕರು ನೆನಪಿಸಿಕೊಂಡರು.


ಇದನ್ನೂ ಓದಿ:  Urvashi-Rishabh: ಊರ್ವಶಿ ಹಣೆಯಲ್ಲಿ ಸಿಂಧೂರ, ಕತ್ತಲ್ಲಿ ತಾಳಿ! ರಿಷಭ್ ಜೊತೆ ಹೆಸರು ಥಳುಕು ಹಾಕಿಕೊಂಡ ಮೇಲೆ ಚೇಂಜ್ ಆಯ್ತಾ ಗೆಟಪ್!


ಕಾಲೇಜು ಪ್ರಾಧ್ಯಾಪಕರು ಕೂಡ ಅವನು ಉತ್ತಮ ವಿದ್ಯಾರ್ಥಿಯಾಗಿದ್ದ ಕಾರಣ ಅವನ ಈ ನಿರ್ಧಾರವನ್ನು ಒಪ್ಪೊಕೊಂಡಿರಲಿಲ್ಲ. ಈ ವೇಳೆ ಶಹಬಾಜ್ ತನ್ನ ವಿಭಾಗದ ಮುಖ್ಯಸ್ಥರಿಗೆ ‘ಒಂದು ದಿನ ನನ್ನ ಪದವಿಯನ್ನು ನೀಡಿ ನನ್ನನ್ನು ಸನ್ಮಾನಿಸುತ್ತೀರಿ’ ಎಂದು ಹೇಳಿ ಹೊರಟಿದ್ದ ಮತ್ತು ಕಳೆದ ವರ್ಷ ಆತನು ಅದನ್ನು ನಿಜ ಮಾಡಿದ ಎಂದು ತಾಯಿ ಹೆಮ್ಮೆ ಯಿಂದ ಹೇಳಿಕೊಂಡರು. ಶಹಬಾಜ್ ಕೋಲ್ಕತ್ತಾಗೆ ತೆರಳಿ ಕ್ರಿಕೆಟ್‌ ಆಡಲು ಹೋಗುತ್ತಾನೆ. ಆಗ ಆತನ ತಂದೆ ಜೀವನದಲ್ಲಿ ಏನಾದರೂ ಸಾಧಿಸದೇ ಹಿಂದಿರುಗಬೇಡ ಎಂದಿದ್ದರು ಎಂದು ತಾಯಿ ನೆನಪಿಸಿಕೊಳ್ಳುತ್ತಾರೆ. ಕೋಲ್ಕತ್ತಾದಲ್ಲಿ ಅವನು ತನ್ನ ಇತರ ಮೂರು ಕ್ರಿಕೆಟಿಗರೊಂದಿಗೆ 12×12 ರೂಮ್‌ ಹಂಚಿಕೊಂಡು ವಾಸಿಸಿ, ಅಲ್ಲಿಯೇ ಅಭ್ಯಾಸ ಮಾಡಿದನು ಎಂದು ಮಗನ ಕ್ರಿಕೆಟ್‌ ದಿನಗಳನ್ನು ನೆನಸಿಕೊಂಡರು.


ಶಹಬಾಜ್ ಎರಡನೇ ವಿಭಾಗದಲ್ಲಿ ಆಡಲು ಪ್ರಾರಂಭಿಸಿದರು, ಮತ್ತು ಒಂದು ದಿನ ಅವರನ್ನು ಪ್ರಮೋದ್ ಚಂಡಿಲಾ (ಮಾಜಿ ಬಂಗಾಳ ಮತ್ತು ಪ್ರಸ್ತುತ ಹರಿಯಾಣ ಕ್ರಿಕೆಟಿಗ) ಪಾರ್ಥ ಪ್ರತಿಮ್ ಚೌಧರಿಗೆ ಪರಿಚಯಿಸಿದರು, ಅವರು ಶಹಬಾಜ್ ಗೆ ಕ್ರಿಕೆಟ್‌ ವೃತ್ತಿಜೀವನದಲ್ಲಿ ಸಹಾಯ ಮಾಡಿದರು. ಶಹಬಾಜ್ ಆಟದಿಂದ ಪ್ರಭಾವಿತರಾದ ಚೌಧರಿ ಅವರು ತಪನ್ ಮೆಮೋರಿಯಲ್ ಕ್ಲಬ್‌ಗೆ ಪ್ರವೇಶಿಸಲು ಸಹಾಯ ಮಾಡಿದರು ಎಂದು ಆತನ ಪೋಷಕರು ತಿಳಿಸಿದರು.


ಮಗನ ಏಳಿಗೆಗೆ ಶ್ರಮಿಸಿದವರಿಗೆ ಪೋಷಕರ ಕೃತಜ್ಞತೆ
ಶಹಬಾಜ್‌ಗೆ ಮನೋಜ್ ತಿವಾರಿ ಸಹೋದರನಂತೆ ಮತ್ತು ಅರುಣ್ ಮಾರ್ಗದರ್ಶಕರಾಗಿದ್ದರು. ಅವರಲ್ಲಿ ಯಾರನ್ನೂ ನಾನು ಇನ್ನೂ ಭೇಟಿ ಮಾಡಿಲ್ಲ, ಆದರೆ ಅವರಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ನಾವು ಈ ವರ್ಷ ಕೋಲ್ಕತ್ತಾಗೆ ಭೇಟಿ ನೀಡುತ್ತಿದ್ದೇವೆ. ಅವರಿಂದಲೇ ಶಹಬಾಜ್ ಈ ಮಟ್ಟಕ್ಕೆ ತಲುಪಿದ್ದಾರೆ ಎಂದು ‌ ಅಹಮದ್ ಜಾನ್ ತಿಳಿಸಿದರು.


ಪಶ್ಚಿಮ ಬಂಗಾಳ ಪರ ಗಮನಾರ್ಹ ಪ್ರದರ್ಶನ
ದೇಶಿ ಟೂರ್ನಿಗಳಲ್ಲಿ ಪಶ್ಚಿಮ ಬಂಗಾಳ ಪರ ಗಮನಾರ್ಹ ಪ್ರದರ್ಶನ ನೀಡಿರುವ ಎಡಗೈ ಆಟಗಾರ ಶಹಬಾಜ್ ಅಹ್ಮದ್ 2019-20 ರ ರಣಜಿ ಟ್ರೋಫಿಯ ಫೈನಲ್ ತಲುಪುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.


ಆಲ್‌ರೌಂಡರ್ ಬ್ಯಾಟ್‌ನೊಂದಿಗೆ 509 ರನ್ ಗಳಿಸಿದರು ಮತ್ತು ಅವರ ಎಡಗೈ ಸ್ಪಿನ್‌ನಿಂದ 35 ವಿಕೆಟ್‌ಗಳನ್ನು ಪಡೆದರು. 2021-22ರಲ್ಲಿ, ಅವರು ಐದು ಪಂದ್ಯಗಳಲ್ಲಿ 582 ರನ್ ಗಳಿಸಿದರು ಮತ್ತು ಒಂಬತ್ತು ವಿಕೆಟ್ಗಳನ್ನು ಪಡೆದರು.


ಟೀಂ ಇಂಡಿಯಾದ ಭರವಸೆಯ ಆಲ್‌ರೌಂಡರ್
ಇನ್ನೂ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರ ಈವರೆಗೆ 29 ಪಂದ್ಯಗಳನ್ನು ಆಡಿರುವ ಶಹಬಾಜ್ ಅಹ್ಮದ್‌, 18.60ರ ಸರಾಸರಿಯಲ್ಲಿ 279 ರನ್‌ಗಳನ್ನು ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ 13 ವಿಕೆಟ್‌ಗಳನ್ನು ಪಡೆದಿದ್ದಾರೆ. 7ಕ್ಕೆ 3 ವಿಕೆಟ್‌ಗಳನ್ನು ಪಡೆದಿರುವುದು ಅವರ ಶ್ರೇಷ್ಠ ಬೌಲಿಂಗ್‌ ಪ್ರದರ್ಶನವಾಗಿದೆ.


ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಜೊತೆಗೆ ಫೀಲ್ಡೀಂಗ್‌ನಲ್ಲೂ ಅತ್ಯದ್ಬುತ ಪ್ರದರ್ಶನ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ತನ್ನ ಮೂರು ವರ್ಷಗಳ ಅವಧಿಯಲ್ಲಿ, ಶಹಬಾಜ್ ಫ್ರಾಂಚೈಸಿಯ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಆಲ್ ರೌಂಡರ್ ಆಗಿ ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ.


ಇದನ್ನೂ ಓದಿ:  T20 World Cup 2022: ಭಾರತ ತಂಡಕ್ಕೆ ಮತ್ತೊಂದು ಆಘಾತ, ವೀಸಾ ಸಮಸ್ಯೆಯಿಂದ ಫ್ಲೈಟ್​ ತಪ್ಪಿಸಿಕೊಂಡ ಇಬ್ಬರು ಪ್ಲೇಯರ್ಸ್​


ಸದ್ಯ ದಕ್ಷಿಣಾ ಆಫ್ರಿಕಾದ ವಿರುದ್ಧ ಏಕದಿನ ಪಂದ್ಯದ ಮೂಲಕ ಶಹಬಾಜ್‌ ಟೀಮ್‌ ಇಂಡಿಯಾಗೆ ಪ್ರವೇಶ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಹತ್ತು ಓವರ್‌ ಬೌಲ್‌ ಮಾಡಿದ ಯುವ ಆಟಗಾರ 54 ರನ್‌ ನೀಡಿ ಒಂದು ವಿಕೆಟ್‌ ಪಡೆದರು.

First published: