PV Sindhu: ಆಲ್​ ಇಂಗ್ಲೆಂಡ್ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್: ಸೆಮಿಫೈನಲ್​ನಲ್ಲಿ ಮುಗ್ಗರಿಸಿದ ಪಿವಿ ಸಿಂಧು..!

ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್​ನ ಅಕಾನೆ ಯಮಗುಚಿ ಅವರ ವಿರುದ್ಧ ಗೆಲ್ಲುವ ಮೂಲಕ ವಿವಿ ಸಿಂಧು ನಿರ್ಣಾಯಕ ಹಂತಕ್ಕೇರಿದರು. ಆರಂಭಿಕ ಪಂದ್ಯಗಳಲ್ಲಿ ವಿರೋಚಿತ ಹೋರಾಟ ನಡೆಸುವಲ್ಲಿ ಎಡವಿದ್ದ ಸಿಂಧು ಕ್ವಾಟರ್​ಫೈನಲ್​ನಲ್ಲಿ ಲಯಕ್ಕೆ ಮರಳಿದ್ದರು.

Pv Sindhu

Pv Sindhu

  • Share this:
    ಶನಿವಾರ ನಡೆದ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನ ಸೆಮಿಫೈನಲ್​ನಲ್ಲಿ ಪಿವಿ ಸಿಂಧು ಥಾಯ್ಲೆಂಡ್​ನ ಪೋರ್ನ್‌ಪಾವಿ ಚೋಚುವಾಂಗ್ ವಿರುದ್ಧ ಸೋಲನುಭವಿಸಿದ್ದಾರೆ. ಈ ಮೂಲಕ ಟೂರ್ನಿಯಂದ ಭಾರತೀಯ ಬ್ಯಾಡ್ಮಿಂಟನ್ ತಾರೆ ಹೊರಬಿದ್ದಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್​ನ 11 ನೇ ಕ್ರಮಾಂಕದ ಪ್ರತಿಸ್ಪರ್ಧಿ ಚೋಚುವಾಂಗ್ ಅವರ ವೇಗ ಮತ್ತು ನಿಖರತೆಗೆ ಮುಂದೆ ಸೆಟೆದು ನಿಲ್ಲಲು ಸಿಂಧುಗೆ ಸಾಧ್ಯವಾಗಲಿಲ್ಲ. ಭಾರತೀಯ ತಾರೆ ಆರಂಭದಲ್ಲೇ ನಿಧಾನಗತಿಯ ಆಟಕ್ಕೆ ಒತ್ತು ನೀಡಿದರೆ, ಚೋಚುವಾಂಗ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಅಲ್ಲದೆ ಸಿಂಧು ಅವರ ಮಂದಗತಿಯ ಆಟದ ಪೂರ್ಣ ಲಾಭ ಪಡೆದು ಆರಂಭದಲ್ಲೇ ಮೇಲುಗೈ ಸಾಧಿಸಿದರು.

    ಇದಾಗ್ಯೂ ಮೊದಲ ಸೆಟ್​ನಲ್ಲಿ ಕಂಬ್ಯಾಕ್ ಮಾಡುವ ಸೂಚನೆ ನೀಡಿದರೂ ಚೋಚುವಾಂಗ್ ಆಟದ ಮುಂದೆ ಅಂತಿಮ ಹಂತದಲ್ಲಿ ಮಂಕಾದರು. ಇನ್ನು 2ನೇ ಸೆಟ್​ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಥಾಯ್ಲೆಂಡ್ ಆಟಗಾರ್ತಿ ಯಾವುದೇ ಹಂತದಲ್ಲೂ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಪರಿಣಾಮ
    43 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಪಿವಿ ಸಿಂಧು 17-21 9-21 ಅಂತರದಿಂದ ಸೋಲೊಪ್ಪಿಕೊಂಡರು.

    ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್​ನ ಅಕಾನೆ ಯಮಗುಚಿ ಅವರ ವಿರುದ್ಧ ಗೆಲ್ಲುವ ಮೂಲಕ ವಿವಿ ಸಿಂಧು ನಿರ್ಣಾಯಕ ಹಂತಕ್ಕೇರಿದರು. ಆರಂಭಿಕ ಪಂದ್ಯಗಳಲ್ಲಿ ವಿರೋಚಿತ ಹೋರಾಟ ನಡೆಸುವಲ್ಲಿ ಎಡವಿದ್ದ ಸಿಂಧು ಕ್ವಾಟರ್​ಫೈನಲ್​ನಲ್ಲಿ ಲಯಕ್ಕೆ ಮರಳಿದ್ದರು. ಅಲ್ಲದೆ ಯಮಗುಚಿ ವಿರುದ್ಧ ಮೊದಲ ಸೆಟ್ (16-21) ಸೋತರೂ, ಬಳಿಕ ಕಂಬ್ಯಾಕ್ ಮಾಡಿ ಎರಡು ಸೆಟ್​ಗಳಲ್ಲಿ 21-16, 21-19 ಅಂತರದ ಗೆಲುವು ಸಾಧಿಸಿದರು. ಈ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ಎರಡನೇ ಬಾರಿಗೆ ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸಿದ್ದರು.

    ಆದರೆ ಥಾಯ್ಲೆಂಡ್​ನ ಪೋರ್ನ್‌ಪಾವಿ ಚೋಚುವಾಂಗ್ ಆಟದ ಮುಂದೆ ವಿಪಿ ಸಿಂಧು ಸಂಪೂರ್ಣ ಲಯ ತಪ್ಪುವ ಮೂಲಕ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ 2ನೇ ಬಾರಿ ಸೆಮಿಫೈನಲ್​ನಲ್ಲಿ ಸೋಲೊಪ್ಪಿಕೊಂಡರು. ಈ ಹಿಂದೆ 2018ರಲ್ಲಿ ನಡೆದ ಟೂರ್ನಿಯಲ್ಲಿ ಸಿಂಧು ಸೆಮಿಫೈನಲ್​ನಲ್ಲಿ ಹೊರಬಿದ್ದಿದ್ದರು.
    Published by:zahir
    First published: