ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್: ಸೆಮಿಫೈನಲ್​ಗೆ ಲಗ್ಗೆಯಿಟ್ಟ ಪಿವಿ ಸಿಂಧು..!

ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಥಾಯ್ಲೆಂಡ್​ನ ಪೋರ್ನ್‌ಪಾವಿ ಚೋಚುವಾಂಗ್ ಯುಎಸ್‌ಎಯ ಬೀವೆನ್ ಜಾಂಗ್ ಅವರನ್ನು 21-16, 21-19ರ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

PV Sindhu

PV Sindhu

 • Share this:
  ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಭಾರತದ ಆಟಗಾರ್ತಿ ಪಿವಿ ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್​ನ ಅಕಾನೆ ಯಮಗುಚಿ ಅವರ ವಿರುದ್ಧ ಗೆಲ್ಲುವ ಮೂಲಕ ನಿರ್ಣಾಯಕ ಹಂತಕ್ಕೇರಿದರು. ಆರಂಭಿಕ ಪಂದ್ಯಗಳಲ್ಲಿ ವಿರೋಚಿತ ಹೋರಾಟ ನಡೆಸುವಲ್ಲಿ ಎಡವಿದ್ದ ಸಿಂಧು ಕ್ವಾಟರ್​ಫೈನಲ್​ನಲ್ಲಿ ಲಯಕ್ಕೆ ಮರಳಿದ್ದರು.  ಬ್ಯಾಡ್ಮಿಂಟನ್ ಅಂಗಳದ ಬಲಿಷ್ಠೆ ಎಂದೇ ಖ್ಯಾತಿ ಪಡೆದಿರುವ ಯಮಗುಚಿ ವಿರುದ್ಧ ಮೊದಲ ಸೆಟ್ (16-21) ಸೋತರೂ, ಬಳಿಕ ಕಂಬ್ಯಾಕ್ ಮಾಡಿದ ಸಿಂಧು ಎರಡು ಸೆಟ್​ಗಳಲ್ಲಿ 21-16, 21-19 ಅಂತರದ ಗೆಲುವು ಸಾಧಿಸಿದರು. ಈ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ಎರಡನೇ ಬಾರಿಗೆ ಸಿಂಧು ಸೆಮಿಫೈನಲ್‌ಗೆ ಪ್ರವೇಶಿಸುತ್ತಿದ್ದಾರೆ.

  ಇನ್ನು ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಥಾಯ್ಲೆಂಡ್​ನ ಪೋರ್ನ್‌ಪಾವಿ ಚೋಚುವಾಂಗ್ ಯುಎಸ್‌ಎಯ ಬೀವೆನ್ ಜಾಂಗ್ ಅವರನ್ನು 21-16, 21-19ರ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇಂದು ನಡೆಯಲಿರುವ ಮೊದಲ ಸೆಮೀಸ್​ನಲ್ಲಿ ಪಿವಿ ಸಿಂಧು, ಪೋರ್ನ್‌ಪಾವಿ ಚೋಚುವಾಂಗ್ ಅವರನ್ನು ಎದುರಿಸಲಿದ್ದಾರೆ.
  Published by:zahir
  First published: