• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • Football Player: ಹೃದಯಾಘಾತದಿಂದ ಮೈದಾನದಲ್ಲೇ ಸಾವನ್ನಪ್ಪಿದ ಫುಟ್ಬಾಲ್ ಆಟಗಾರ, ಕಣ್ಣೀರು ಬರುತ್ತೆ ಈ ಸ್ಟೋರಿ ಓದಿದ್ರೆ

Football Player: ಹೃದಯಾಘಾತದಿಂದ ಮೈದಾನದಲ್ಲೇ ಸಾವನ್ನಪ್ಪಿದ ಫುಟ್ಬಾಲ್ ಆಟಗಾರ, ಕಣ್ಣೀರು ಬರುತ್ತೆ ಈ ಸ್ಟೋರಿ ಓದಿದ್ರೆ

ಆಟಗಾರ ಸೋಫಿಯಾನೆ ಲೋಕರ್

ಆಟಗಾರ ಸೋಫಿಯಾನೆ ಲೋಕರ್

ಲೋಕರ್ ಈ ವಾರ ನಿಧನರಾದ ಎರಡನೇ ಫುಟ್ಬಾಲ್ ಆಟಗಾರರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಶುಕ್ರವಾರ, ಕ್ರೊಯೇಷಿಯಾದ ಫುಟ್ಬಾಲ್ ಆಟಗಾರ ಮರಿನ್ ಕ್ಯಾಸಿಕ್ ಹೃದಯ ವೈಫಲ್ಯದಿಂದಾಗಿ ನಿಧನರಾಗಿದ್ದರು

 • Share this:

ಕೆಲವು ದುರಂತಗಳು (Tragedies) ಆಟದ ಮೈದಾನದಲ್ಲಿಯೇ (Playground)ನಡೆದು ಹೋಗುತ್ತವೆ, ಇಲ್ಲಿಯೂ ಒಂದು ಅದೇ ರೀತಿಯ ಘಟನೆ(Event Occurred) ನಡೆದಿದೆ. ಅಲ್ಜೀರಿಯಾದಲ್ಲಿ ( Algerian ) ಶನಿವಾರದಂದು ಫುಟ್ಬಾಲ್ ಪಂದ್ಯವೊಂದು ನಡೆಯುತ್ತಿರುವ ವೇಳೆಯಲ್ಲಿ ಫುಟ್ಬಾಲ್ ಆಟಗಾರನೊಬ್ಬ ಮೈದಾನದಲ್ಲಿಯೇ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.


ಗೋಲ್‌ಕೀಪರ್‌ಗೆ ಡಿಕ್ಕಿ


ಪಂದ್ಯ ನಡೆಯುವ ವೇಳೆಯಲ್ಲಿ ಆಟಗಾರ ಸೋಫಿಯಾನೆ ಲೋಕರ್ ತಮ್ಮದೇ ತಂಡದ ಗೋಲ್‌ಕೀಪರ್‌ಗೆ ಡಿಕ್ಕಿ ಹೊಡೆದರು. ಇದಾದ ಬಳಿಕ ಅವರಿಗೆ ಹೃದಯಾಘಾತವಾಗಿ ಮೈದಾನದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಲೀಗ್-2 ಪಂದ್ಯಾವಳಿಯನ್ನು ಅಲ್ಜೀರಿಯಾದಲ್ಲಿ ಆಡಲಾಗುತ್ತಿದ್ದು, ಇದೇ ಟೂರ್ನಿಯಲ್ಲಿ ಮೌಲೌದಿಯಾ ಸೈದಾ ಹಾಗೂ ಎಎಸ್‌ಎಂ ಓರಾನ್ ಕ್ಲಬ್ ನಡುವಿನ ಪಂದ್ಯದಲ್ಲಿ ಈ ದುರ್ಘಟನೆ ನಡೆದಿದೆ. ಈ ಪಂದ್ಯದಲ್ಲಿ ಸೋಫಿಯಾನೆ ಲೋಕರ್ ಮೌಲೌದಿಯಾ ಸೈದಾ ಪರ ಆಡುತ್ತಿದ್ದರು ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Maradona death anniversary: 13ನೇ ವಯಸ್ಸಿಗೆ ಕನ್ಯತ್ವ ಕಳೆದುಕೊಂಡಿದ್ದರು ಡಿಯಾಗೊ ಮರಡೋನಾ!


ಆಟದ ಮೈದಾನದಲ್ಲಿ ಚಿಕಿತ್ಸೆ


ಲೋಕರ್ ತಮ್ಮದೇ ತಂಡದ ಗೋಲ್‌ಕೀಪರ್‌ಗೆ ಡಿಕ್ಕಿ ಹೊಡೆದ ನಂತರ ಲೋಕರ್ ಗೆ ಆಟದ ಮೈದಾನದಲ್ಲಿಯೇ ಚಿಕಿತ್ಸೆ ನೀಡಲಾಯಿತು ಮತ್ತು ಆಟವನ್ನು ಮುಂದುವರಿಸಲು ಎಲ್ಲವನ್ನೂ ತೆರವು ಗೊಳಿಸಲಾಯಿತು. ಇದಾದ ಒಂಬತ್ತು ನಿಮಿಷಗಳ ನಂತರ, ಅವರು ಆಟದ ಮೈದಾನದಲ್ಲಿಯೇ ಕುಸಿದು ಬಿದ್ದರು ಎಂದು ಹೇಳಲಾಗಿದೆ. ಲೋಕರ್ ಕುಸಿದು ಬಿದ್ದ ನಂತರ, ಮೈದಾನದಲ್ಲಿರುವ ವೈದ್ಯರು ಓಡಿ ಬಂದು ಅವನನ್ನು ಬದುಕಿಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಸಹ ಅವರ ಪ್ರಯತ್ನಗಳು ಯಶಸ್ವಿ ಆಗಲಿಲ್ಲ. ಲೋಕರ್ ಅವರು ಈ ತಂಡದ ನಾಯಕರಾಗಿದ್ದರು ಮತ್ತು ಅವರ ನಿಧನದ ಸುದ್ದಿ ಹೊರಬಂದ ನಂತರ, ಆಟಗಾರರು ಪಂದ್ಯವನ್ನು ಅಲ್ಲಿಗೆ ಕೈಬಿಟ್ಟರು.


ಈ ವಾರ ನಿಧನವಾದ ಎರಡನೆಯ ಫುಟ್ಬಾಲ್ ಆಟಗಾರ


ಲೋಕರ್ ಈ ವಾರ ನಿಧನರಾದ ಎರಡನೇ ಫುಟ್ಬಾಲ್ ಆಟಗಾರರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಶುಕ್ರವಾರ, ಕ್ರೊಯೇಷಿಯಾದ ಫುಟ್ಬಾಲ್ ಆಟಗಾರ ಮರಿನ್ ಕ್ಯಾಸಿಕ್ ಹೃದಯ ವೈಫಲ್ಯದಿಂದಾಗಿ ನಿಧನರಾಗಿದ್ದರು. ತರಬೇತಿಯ ಸಮಯದಲ್ಲಿ ಹೃದಯಾಘಾತದಿಂದ ನೆಲದ ಮೇಲೆ ಕುಸಿದು ಬಿದ್ದ ಕ್ಯಾಸಿಕ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದರು.


ಫುಟ್ಬಾಲ್ ಆಟಗಾರರು ದಿಗ್ಬ್ರಮೆ


ಈ ವರ್ಷದ ಆರಂಭದಲ್ಲಿ, ಯುರೋ 2020 ಪಂದ್ಯದ ಸಮಯದಲ್ಲಿ ಫಿನ್ಲ್ಯಾಂಡ್ ವಿರುದ್ಧ ಆಡುವಾಗ ಡೆನ್ಮಾರ್ಕ್ ಆಟಗಾರ ಕ್ರಿಶ್ಚಿಯನ್ ಎರಿಕೆನ್ ನೆಲದ ಮೇಲೆ ಕುಸಿದು ಬಿದ್ದ ನಂತರ ಯುರೋಪಿಯನ್ ಫುಟ್ಬಾಲ್ ಆಟಗಾರರು ತುಂಬಾನೇ ದಿಗ್ಬ್ರಮೆಗೊಂಡಿದ್ದರು. ಈ ವರ್ಷದ ಅಕ್ಟೋಬರ್ ನಲ್ಲಿ, ಸೆರ್ಗಿಯೊ ಅಗ್ಯೂರೊ ಉಸಿರಾಟದ ಸಮಸ್ಯೆಯಿಂದಾಗಿ ಅಲಾವ್ಸ್ ವಿರುದ್ಧದ ಬಾರ್ಸಿಲೋನಾ ಪಂದ್ಯದ ಸಮಯದಲ್ಲಿ ಮೈದಾನದಿಂದ ಹೊರ ನಡೆದಿದ್ದರು.


ಇತ್ತೀಚಿನ ದಿನಗಳಲ್ಲಿ ಫುಟ್ಬಾಲ್ ಆಟಗಾರರಿಗೆ ಏಕೆ ಹೀಗಾಗುತ್ತಿದೆ


ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳಲ್ಲಿ ಹೃದಯ ಸ್ತಂಭನಕ್ಕೆ ಅನೇಕ ಕಾರಣಗಳಿವೆ. ಈ ಅಸಹಜತೆಗಳು ಆನುವಂಶಿಕವಾಗಿರಬಹುದು ಮತ್ತು ಹೆಚ್ಚಾಗಿ ಅವು ಪತ್ತೆಯಾಗದೆ ಉಳಿಯುವಂತದ್ದು ಆಗಿರಬಹುದಾದ ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಾರೆ.


ಇದನ್ನೂ ಓದಿ: ನನ್ನೊಂದಿಗೆ ಒಂದು ರಾತ್ರಿ ಕಳೆದರೆ 43 ಲಕ್ಷ ಕೊಡ್ತೇನೆ! ಖ್ಯಾತ ಫುಟ್​ಬಾಲ್ ತಾರೆಯ ಹಣೆಬರಹ ಬಿಚ್ಚಿಟ್ಟ ಮಾಡೆಲ್

top videos


  ಕೆಲವೊಮ್ಮೆ ಈ ಆಟಗಾರರು ಅತಿಯಾದ ವ್ಯಾಯಾಮ ಮಾಡುತ್ತಾರೆ ಮತ್ತು ಅಸಹಜ ಹೃದಯ ಸ್ಥಿತಿಯನ್ನು ಹೊಂದಿರುವ ಕ್ರೀಡಾಪಟುವಿಗೆ ಇದು ಪ್ರಚೋದಕವಾಗಬಹುದು. ಕೆಲವೊಮ್ಮೆ ಎದೆಗೆ ಬಲವಾದ ಹೊಡೆತವು ಸಹ ಹೃದಯ ಸ್ತಂಭನವನ್ನು ಪ್ರಚೋದಿಸಬಹುದು, ಇದನ್ನು "ಕೊಮೊಟಿಯೊ ಕಾರ್ಡಿಸ್" ಎಂದು ಕರೆಯಲಾಗುತ್ತದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು