ಗೆಲುವಿನ ವಿದಾಯದೊಂದಿಗೆ 33 ಬಿಯರ್ ಬಾಟಲ್ ಪಡೆದ ಅಲೆಸ್ಟರ್ ಕುಕ್​!

 • News18
 • 2-MIN READ
 • Last Updated :
 • Share this:

  -ನ್ಯೂಸ್ 18 ಕನ್ನಡ

  ಓವಲ್​ ನಲ್ಲಿ ನಡೆದ ಕೊನೆಯ ಟೆಸ್ಟ್​ನಲ್ಲಿ ಭಾರತ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಇಂಗ್ಲೆಂಡ್ ತಂಡ ತಮ್ಮ ಸಹ ಆಟಗಾರ ಅಲೆಸ್ಟರ್ ಕುಕ್​ಗೆ ಗೆಲುವಿನ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್​ ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ದಾಖಲೆಗಳು ಕುಕ್ ಅವರ ಹೆಸರಲ್ಲಿದೆ. ಆಂಗ್ಲರ ನಾಡಿನ ದಾಖಲೆಗಳ ಸರದಾರ ಇತ್ತೀಚೆಗೆ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.

  ಅದರಂತೆ ಕೊನೆಯ ಟೆಸ್ಟ್​ನ ಸುದ್ದಿಗೋಷ್ಠಿಯಲ್ಲಿ ಅಲೆಸ್ಟರ್ ಕುಕ್ ಭಾಗವಹಿಸಿದ್ದರು. ಅವರ ವಿದಾಯದ ಪಂದ್ಯದ ಸುದ್ದಿಗೋಷ್ಠಿಯನ್ನು ಸ್ಮರಣೀಯವಾಗಿರಿಸಲು ತೀರ್ಮಾನಿಸಿದ್ದ ಮಾಧ್ಯಮ ಪ್ರತಿನಿಧಿಗಳು ಮಾಜಿ ನಾಯಕನಿಗೆ ಉಡುಗೊರೆಯನ್ನು ನೀಡಿ ಗೌರವಿಸಿತ್ತು. 33 ಬಿಯರ್​ಗಳಿದ್ದ ಬಾಕ್ಸ್​ವೊಂದನ್ನು ಗಿಫ್ಟ್​ ನೀಡಿದ ಪತ್ರಕರ್ತರು ಕುಕ್​ ವಿದಾಯ ಕ್ಷಣಗಳಲ್ಲಿ ಭಾಗಿಯಾದರು.  ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ಶತಕ ಸಿಡಿಸಿರುವ ದಾಖಲೆ ಕುಕ್​ ಅವರ ಹೆಸರಲ್ಲಿದೆ.  33 ಟೆಸ್ಟ್ ಶತಕಗಳನ್ನು ಸಿಡಿಸಿರುವ ಇವರ ದಾಖಲೆಯನ್ನು ಸ್ಮರಿಸುವ ಸಲುವಾಗಿ 33 ಬಿಯರ್​ ಬಾಟಲ್​ಗಳನ್ನು ನೀಡಲಾಯಿತು. ಪ್ರತಿ ಬಿಯರ್ ಬಾಟಲ್ ಮೇಲೆ ಪತ್ರಕರ್ತರು ಸಂದೇಶಗಳನ್ನು ಬರೆದಿದ್ದರು. ಬ್ರಿಟೀಷ್ ಮಾಧ್ಯಮದ ಅನಿರೀಕ್ಷಿತ ಗೌರವಕ್ಕೆ ಧನ್ಯವಾದ ತಿಳಿಸಿದ ಅಲೆಸ್ಟರ್ ಕುಕ್ ತಮ್ಮ ಕೆರಿಯರ್​ ಏಳು ಬೀಳುಗಳನ್ನು ಸ್ಮರಿಸಿ ಎಲ್ಲರಿಗೂ ಕೃತಜ್ಞತೆ ಹೇಳಿದರು. ತಮ್ಮ ಮೊದಲ ಟೆಸ್ಟ್​ ಪಂದ್ಯವನ್ನು ಭಾರತದೊಂದಿಗೆ ಆರಂಭಿಸಿ ಶತಕ ಸಿಡಿಸಿದ್ದ ಅಲೆಸ್ಟರ್ ಕುಕ್ ಕೊನೆಯ ಪಂದ್ಯದಲ್ಲೂ ಶತಕ ಬಾರಿಸುವ ಮೂಲಕ ಕ್ರಿಕೆಟ್ ಅಂಗಳದಿಂದ ಹೊರ ನಡೆದಿರುವುದು ವಿಶೇಷ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು