ಭಾರತ ವಿರುದ್ಧ ನನ್ನ ಕೊನೆಯ ಪಂದ್ಯ: ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಅಲೆಸ್ಟರ್ ಕುಕ್

news18
Updated:September 3, 2018, 5:13 PM IST
ಭಾರತ ವಿರುದ್ಧ ನನ್ನ ಕೊನೆಯ ಪಂದ್ಯ: ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಅಲೆಸ್ಟರ್ ಕುಕ್
news18
Updated: September 3, 2018, 5:13 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್ ತಂಡದ ಪ್ರಮುಖ ಆರಂಭಿಕ ಆಟಗಾರ ಅಲೆಸ್ಟರ್ ಕುಕ್ ಅವರು ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ. ಟೀಂ ಇಂಡಿಯಾ ವಿರುದ್ಧ ಓವಲ್​​ನಲ್ಲಿ ನಡೆಯಲಿರುವ 5ನೇ ಟೆಸ್ಟ್​ ಪಂದ್ಯ ಕುಕ್ ಅವರ ಕೊನೆಯ ಅಂತರಾಷ್ಟ್ರೀ ಪಂದ್ಯವಾಗಲಿದೆ. ಸತತ ಬ್ಯಾಟಿಂಗ್ ವೈಫಲ್ಯದ ಹಿನ್ನಲೆಯಿಂದ ಕುಕ್ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

33 ವರ್ಷ ಪ್ರಾಯದ ಕುಕ್ ಇಂಗ್ಲೆಂಡ್ ತಂಡದಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ತೋರಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಪಟ್ಟಿಯಲ್ಲಿ ಕುಕ್ ಅವರು 12,254 ರನ್ ಬಾರಿಸಿ ಆರನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಇಂಗ್ಲೆಂಡ್ ತಂಡದಲ್ಲಿ ಟೆಸ್ಟ್​​ ಕ್ರಿಕೆಟ್​​ನಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ಕುಕ್ ಮೊದಲಿಗರಾಗಿದ್ದಾರೆ. 160 ಟೆಸ್ಟ್​ ಪಂದ್ಯವನ್ನಾಡಿರುವ ಕುಕ್ 12, 254 ರನ ಕಲೆಹಾಕಿದ್ದಾರೆ. ಇದರಲ್ಲಿ 32 ಶತಕ ಹಾಗೂ 56 ಅರ್ಧಶತಕವಿದೆ. ಟೆಸ್ಟ್​ನಲ್ಲಿ ಕುಕ್ ಅವರ ಗರಿಷ್ಠ ಸ್ಕೋರ್ 294 ಆಗಿದೆ. ಅಂತೆಯೆ ಏಕದಿನ ಕ್ರಿಕೆಟ್​​ನಲ್ಲಿ92 ಪಂದ್ಯಗಳನ್ನಾಡಿದ್ದು, 3,204 ರನ್ ಬಾರಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 19 ಅರ್ಧಶತಕ ಸೇರಿದೆ. ಏಕದಿನ ಕ್ರಿಕೆಟ್​ನಲ್ಲಿ 137 ರನ್ ಬಾರಿಸಿರುವುದು ಕುಕ್ ಅವರ ಶ್ರೇಷ್ಠ ಸಾಧನೆಯಾಗಿದೆ.

ನಾಯಕನಾಗಿಯು ಕ್ರಿಕೆಟ್ ವೃತ್ತಿ ಜೀವನದಲ್ಲಿ ಅದ್ಭುತ ಸಾಧನೆ ಮಾಡಿರುವ ಕುಕ್, ಭಾರತ ವಿರುದ್ಧದ 5ನೇ ಟೆಸ್ಟ್​ ಪಂದ್ಯದ ಬಳಿಕ ಕ್ರಿಕೆಟ್ ಲೋಕದಿಂದ ಹಿಂದೆ ಸರಿಯಲಿದ್ದಾರೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...