• Home
  • »
  • News
  • »
  • sports
  • »
  • Ajit Agarkar Marriage: ಸ್ನೇಹಿತನ ಸಹೋದರಿಯನ್ನೇ ಮದುವೆಯಾಗಿದ್ರು ಅಜಿತ್ ಅಗರ್ಕರ್! ಇಂಟರೆಸ್ಟಿಂಗ್ ಆಗಿದೆ ಇವರ ಲವ್ ಸ್ಟೋರಿ

Ajit Agarkar Marriage: ಸ್ನೇಹಿತನ ಸಹೋದರಿಯನ್ನೇ ಮದುವೆಯಾಗಿದ್ರು ಅಜಿತ್ ಅಗರ್ಕರ್! ಇಂಟರೆಸ್ಟಿಂಗ್ ಆಗಿದೆ ಇವರ ಲವ್ ಸ್ಟೋರಿ

ಅಜಿತ್​ ಅಗರ್ಕರ್​ ಮತ್ತು ಫಾತಿಮಾ

ಅಜಿತ್​ ಅಗರ್ಕರ್​ ಮತ್ತು ಫಾತಿಮಾ

ಜನಪ್ರಿಯ ಕ್ರಿಕೆಟ್​ ಆಟಗಾರರಾಗಿದ್ದ ಅಜಿತ್ ತನ್ನ ಸ್ನೇಹಿತನ ಸಹೋದರಿಯನ್ನು ಪ್ರೀತಿಸುತ್ತಿದ್ದರು ಮತ್ತು ನಂತರ ಅವರು ಧರ್ಮ ಬೇರೆ ಆಗಿದ್ದರೂ ಸಹ ಅದನ್ನೆಲ್ಲಾ ಮೀರಿ ಅವರಿಬ್ಬರು ವಿವಾಹವಾದರು.

  • Share this:

    ಕೆಲವೊಬ್ಬರು ತಮಗೆ ಇಷ್ಟವಾದ ವ್ಯಕ್ತಿಯ ಜೊತೆಗೆ ಜೀವನವನ್ನು ಹಂಚಿಕೊಳ್ಳಲು ಯಾವುದೇ ಜಾತಿ-ಮತ ಗಳ ಬಗ್ಗೆ ಯೋಚನೆ ಸಹ ಮಾಡುವುದಿಲ್ಲ. ತಮ್ಮ ಹೃದಯಕ್ಕೆ ಹತ್ತಿರವಾದವರನ್ನ ಮದುವೆ ಆಗಬೇಕು ಅನ್ನೋದು ಅಷ್ಟೇ ಅವರಿಗೆ ಮುಖ್ಯವಾಗಿರುತ್ತದೆ. ಹೀಗೆ ಅನೇಕ ಸೆಲೆಬ್ರಿಟಿಗಳು (Celebrities) ಜಾತಿ-ಮತಗಳನ್ನ ಮೀರಿ ಪ್ರೀತಿಗೆ ತಲೆ ಬಾಗಿದವರು ತುಂಬಾನೇ ಜನರಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಬಾಲಿವುಡ್ (Bollywood) ನಲ್ಲಿರುವ ನಟ-ನಟಿಯರು ಮತ್ತು ಕ್ರಿಕೆಟ್ ಆಟಗಾರರು (Cricket Players) ತಮಗೆ ಇಷ್ಟವಾದವರನ್ನ ಮದುವೆ ಆಗಿಯೇ ಬಿಡುತ್ತಾರೆ. ಹೌದು.. ನಿಜವಾಗಿಯೂ ಈ ಪ್ರೀತಿ (Love), ಪ್ರೇಮಕ್ಕೆ ವಯಸ್ಸಿನ ಅಂತರ, ಜಾತಿ-ಮತಗಳು, ದೇಶ-ವಿದೇಶ ಹೀಗೆ ಯಾವ ಅಂಶಗಳು ಅಡ್ಡಿಯಾಗುವುದಿಲ್ಲ ಅಂತ ಹೇಳಬಹುದು.


    ಅದೇ ರೀತಿ ಇಲ್ಲೊಬ್ಬರು ಪ್ರಸಿದ್ಧ ಕ್ರಿಕೆಟ್​ ಆಟಗಾರ ತನ್ನ ಸ್ನೇಹಿತನ ಸಹೋದರಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.


    ಹೇಗಿತ್ತು ಅಜಿತ್ ಅಗರ್ಕರ್ ಅವರ ಕ್ರಿಕೆಟ್ ಕರಿಯರ್?


    ಭಾರತ ತಂಡದ ಮಾಜಿ ಸ್ಟಾರ್ ಆಲ್ರೌಂಡರ್ ಅಜಿತ್ ಅಗರ್ಕರ್ ತಮ್ಮ ತೀಕ್ಷ್ಣವಾದ ಸ್ವಿಂಗ್ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್ ನಿಂದಾಗಿ ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಗಳಿಸಿದವರು. 16 ವರ್ಷಗಳ ವೃತ್ತಿಜೀವನದಲ್ಲಿ ಅವರು 26 ಟೆಸ್ಟ್, 191 ಏಕದಿನ ಮತ್ತು 4 ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.


    ಅವರು ಕ್ರಿಕೆಟ್ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ 200ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 1999, 2003 ಮತ್ತು 2007 ಕ್ರಿಕೆಟ್ ವಿಶ್ವಕಪ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ಉದ್ಘಾಟನಾ 2007 ಐಸಿಸಿ ವಿಶ್ವ ಟ್ವೆಂಟಿ 20 ಟೂರ್ನಿಯ ವಿಜೇತ ತಂಡವಾದ ಭಾರತದ ತಂಡದಲ್ಲಿ ಆಡಿದ್ದರು.




    ಎಲ್ಲದಕ್ಕೂ ಹೆಚ್ಚಾಗಿ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಸಹ ಆಗಿದ್ದಾರೆ. ಆದರೆ ಅಜಿತ್ ಅವರ ಅದ್ಭುತ ವೃತ್ತಿಜೀವನಕ್ಕಿಂತ ಅವರ ವೈಯಕ್ತಿಕ ಜೀವನವು ಹೆಚ್ಚು ಆಸಕ್ತಿದಾಯಕವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ಅಜಿತ್ ಅವರ ವೈಯಕ್ತಿಕ ಜೀವನವು ವೃತ್ತಿಜೀವನಕ್ಕಿಂತಲೂ ಇಂಟರೆಸ್ಟಿಂಗ್ ಅಂತೆ..


    ಹೌದು.. ಅಜಿತ್ ತನ್ನ ಸ್ನೇಹಿತನ ಸಹೋದರಿಯನ್ನು ಪ್ರೀತಿಸುತ್ತಿದ್ದರು ಮತ್ತು ನಂತರ ಅವರು ಧರ್ಮ ಬೇರೆ ಆಗಿದ್ದರೂ ಸಹ ಅದನ್ನೆಲ್ಲಾ ಮೀರಿ ಅವರಿಬ್ಬರು ವಿವಾಹವಾದರು. ಅಜಿತ್ ಅಗರ್ಕರ್ ಅಂತರ್ ಧರ್ಮೀಯ ವಿವಾಹವನ್ನು ಮಾಡಿಕೊಂಡರು. ಅಜಿತ್ 21 ವರ್ಷಗಳ ಹಿಂದೆ ಫಾತಿಮಾ ಘಡಿಯಾಲಿ ಅವರನ್ನು ಮದುವೆಯಾಗಿದ್ದಾರೆ.


    ಅಜಿತ್​ ಅಗರ್ಕರ್​ ಮತ್ತು ಫಾತಿಮಾajit agarkar wife


    ಫಾತಿಮಾ 2000ನೇ ಇಸವಿಯಲ್ಲಿ ಮುಂಬೈನ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅಗರ್ಕರ್ ಆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಕ್ರಿಕೆಟಿಗನೊಂದಿಗೆ ಸ್ನೇಹಿತರಾಗಿದ್ದ ಅವರ ಸಹೋದರ ಮಜರ್ ಘಡಿಯಾಲಿ, ಅವರು ಇವರಿಬ್ಬರು ಭೇಟಿಯಾಗೋದಕ್ಕೆ ಕಾರಣವಾದರು ಅಂತ ಹೇಳಬಹುದು.


    1990 ರ ದಶಕದ ಆರಂಭದಲ್ಲಿ, ಮಜರ್ ದೇಶೀಯ ಮಟ್ಟದಲ್ಲಿ ಕ್ರಿಕೆಟ್ ಆಟ ಆಡಿದವರು. ಹೀಗೆ ಇವರು ಅಜಿತ್ ಅವರೊಂದಿಗೆ ಸ್ನೇಹ ಹೊಂದಿದ್ದರು.


    ಅಜಿತ್ ಆಡುವ ಪಂದ್ಯಗಳನ್ನು ನೋಡಲು ಹೋಗ್ತಿದ್ರಂತೆ ಫಾತಿಮಾ


    ಫಾತಿಮಾ ಆಗಾಗ್ಗೆ ಅಜಿತ್ ಆಡುತ್ತಿದ್ದ ಪಂದ್ಯಗಳು ಮತ್ತು ಇತರ ಸಾರ್ವಜನಿಕ ಕಾರ್ಯಕ್ರಮಗಳಿಗೆ ತನ್ನ ಸಹೋದರ ಮಜರ್ ನೊಂದಿಗೆ ಹೋಗುತ್ತಿದ್ದರಂತೆ. ಹೀಗೆ ಅಜಿತ್ ಮತ್ತು ಫಾತಿಮಾ ನಡುವೆ ಸ್ನೇಹ ಬೆಳೆಯಿತು. ನಂತರ ಶೀಘ್ರದಲ್ಲಿಯೇ ಅವರಿಬ್ಬರು ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಅವರ ಸಂಬಂಧವು 2001 ರ ವೇಳೆಗೆ ರಾಷ್ಟ್ರೀಯ ಗಮನವನ್ನು ಸೆಳೆಯಿತು.


    ಈ ಜೋಡಿ 2002 ರಲ್ಲಿ ಮುಂಬೈನಲ್ಲಿ ನಡೆದ ಒಂದು ಸರಳವಾದ ಸಮಾರಂಭದಲ್ಲಿ ಅವರ ಹೆತ್ತವರ ಅನುಮೋದನೆಯೊಂದಿಗೆ ಮದುವೆ ಮಾಡಿಕೊಂಡರು. ಹತ್ತಿರದ ಸ್ನೇಹಿತರು ಮತ್ತು ಸಂಬಂಧಿಕರನ್ನು ಮಾತ್ರ ಇವರ ಮದುವೆಗೆ ಆಹ್ವಾನಿಸಲಾಗಿತ್ತು. ನಂತರ ಹಮ್ಮಿಕೊಂಡಿದ್ದ ಆರತಕ್ಷತೆಗೆ ಭಾರತೀಯ ಕ್ರಿಕೆಟ್ ತಂಡದ ಎಲ್ಲಾ ಆಟಗಾರರನ್ನು ಆಹ್ವಾನಿಸಲಾಯಿತು.


    ಇದನ್ನೂ ಓದಿ: ಕೊಹ್ಲಿ 71ನೇ ಸೆಂಚುರಿಗಾಗಿ ಮದುವೆಯನ್ನೇ ಮುಂದೂಡಿದ್ದ ಫ್ಯಾನ್, ವಿರಾಟ್ ಶತಕ ಸಿಡಿಸ್ತಿದ್ದಂತೆ ನೆರವೇರಿತು ಅಭಿಮಾನಿ ಕಲ್ಯಾಣ!


    ಅಜಿತ್ ಹಿಂದೂ ಪಂಡಿತ ಕುಟುಂಬಕ್ಕೆ ಸೇರಿದವರಾಗಿದ್ದರೆ, ಫಾತಿಮಾ ಮುಸ್ಲಿಂ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರಿಗೆ ಈಗ ರಾಜ್ ಎಂಬ ಒಬ್ಬ ಮಗನಿದ್ದಾನೆ.

    Published by:Prajwal B
    First published: