• Home
  • »
  • News
  • »
  • sports
  • »
  • IND vs SA: ಭಾರತದ ಎದುರು ಆಫ್ರಿಕಾ ಗೆಲ್ಲಲು ಧೋನಿ ಕಾರಣ, ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

IND vs SA: ಭಾರತದ ಎದುರು ಆಫ್ರಿಕಾ ಗೆಲ್ಲಲು ಧೋನಿ ಕಾರಣ, ಶಾಕಿಂಗ್​ ಹೇಳಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Team India: ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಒಂದು ರೀತಿಯಲ್ಲಿ ನೋಡಿದರೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಕಾರಣ ಅಂತ ಹೇಳಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ? ಇಲ್ಲಿದೆ ನೋಡಿ ಅಚ್ಚರಿಯ ಹೇಳಿಕೆ.

  • Share this:

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup) ಶುರುವಾಗುವ ಮುಂಚೆಯೇ ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ವಾಸಿಮ್ ಅಕ್ರಂ (Wasim Akram) ದಕ್ಷಿಣ ಆಫ್ರಿಕಾ ತಂಡವು ಈ ವಿಶ್ವಕಪ್ ನಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತೆ ಅಂತ ಭವಿಷ್ಯ ನುಡಿದಿದ್ದರು. ಇವರು ಹೇಳಿದ ಹಾಗೆಯೇ ನಡೆಯುತ್ತಿದೆ. ತೆಂಬಾ ಬವುಮಾ ಅವರ ನಾಯಕತ್ವದ ದಕ್ಷಿಣ ಆಫ್ರಿಕಾ (South Africa) ತಂಡವು ಪ್ರಸ್ತುತ ಮೂರು ಪಂದ್ಯಗಳಿಂದ ಐದು ಅಂಕಗಳನ್ನು ಗಳಿಸುವುದರೊಂದಿಗೆ ಅಗ್ರಸ್ಥಾನದಲ್ಲಿದೆ. ಅವರು ಮೊದಲ ಪಂದ್ಯದಲ್ಲಿ ಮಳೆಯ ಕಾಟದಿಂದ ಜಿಂಬಾಬ್ವೆ ತಂಡದೊಂದಿಗೆ ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡರು ಮತ್ತು ನಂತರದ ಮುಖಾಮುಖಿಯಲ್ಲಿ ಬಾಂಗ್ಲಾದೇಶವನ್ನು 104 ರನ್ ಗಳಿಂದ ಸೋಲಿಸಿದರು. ಅಷ್ಟೇ ಅಲ್ಲದೆ ಭಾನುವಾರ ಪರ್ತ್ ನಲ್ಲಿ ನಡೆದ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ, ಪ್ರೋಟೀಸ್ ತನ್ನ ಮಿಂಚಿನ ಬೌಲಿಂಗ್ ಮತ್ತು ಬ್ಯಾಟಿಂಗ್ ನಿಂದಾಗಿ ಐದು ವಿಕೆಟ್ ಗಳ ಭರ್ಜರಿ ಗೆಲುವನ್ನು ಸಾಧಿಸಿತು.


ದಕ್ಷಿಣ ಆಫ್ರಿಕಾ ತಂಡದ ಭರ್ಜರಿ ಪ್ರದರ್ಶನ:


ಲುಂಗಿ ಎನ್ಗಿಡಿ ಅವರು ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಶುಭಾರಂಭ ಮಾಡಿದರು. ನಂತರ ಐಡೆನ್ ಮಾರ್ಕ್ರಮ್ ಮತ್ತು ಡೇವಿಡ್ ಮಿಲ್ಲರ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನಡೆಸಿದರು. ಇಬ್ಬರೂ ಬ್ಯಾಟ್ಸ್ಮನ್ ಗಳು ತಲಾ ಅರ್ಧ ಶತಕಗಳನ್ನು ಬಾರಿಸಿದರು, ಮಿಲ್ಲರ್ ಅಜೇಯರಾಗಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.


46 ಎಸೆತಗಳಲ್ಲಿ 59 ರನ್ ಗಳಿಸಿದ ಮಿಲ್ಲರ್ ಎಚ್ಚರಿಕೆಯಿಂದ ಇನಿಂಗ್ಸ್ ಆರಂಭಿಸಿದರು ಮತ್ತು ನಿಧಾನವಾಗಿ ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು, ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟವನ್ನು ಬದಲಾಯಿಸಿದರು. ಅವರ ಇನ್ನಿಂಗ್ಸ್ ಆರು ಬೌಂಡರಿಗಳು ಮತ್ತು ಮೂರು ಸಿಕ್ಸ್ ಗಳನ್ನು ಒಳಗೊಂಡಿತ್ತು. ಮಿಲ್ಲರ್ ಅವರ ಬ್ಯಾಟಿಂಗ್ ನಿಂದ ಪ್ರಭಾವಿತರಾದ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರು ಏನ್ ಹೇಳಿದ್ದಾರೆ ನೋಡಿ.


ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಗುಡ್​ ನ್ಯೂಸ್, ಸ್ಟಾರ್​ ಆಲ್​ರೌಂಡರ್ ತಂಡಕ್ಕೆ​ ಕಂಬ್ಯಾಕ್​


ಆಫ್ರಿಕಾ ಗೆಲುವಿಗೆ ಧೋನಿ ಕಾರಣ ಎಂದಿದ್ದಾರೆ:


ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಒಂದು ರೀತಿಯಲ್ಲಿ ನೋಡಿದರೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಕಾರಣ ಅಂತ ಹೇಳಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ? ಧೋನಿ ಇಂತಹ ಅನೇಕ ರೀತಿಯ ಪಂದ್ಯಗಳನ್ನು ಹೇಗೆ ಸಮಾಧಾನದಿಂದ ಆಟವಾಡಿ ಮುಗಿಸಬೇಕು ಅಂತ ಕೇವಲ ಭಾರತ ತಂಡಕ್ಕೆ ಅಲ್ಲದೆ ಇಡೀ ವಿಶ್ವಕ್ಕೆ ತೋರಿಸಿ ಕೊಟ್ಟಿದ್ದು ನಮಗೆಲ್ಲಾ ಗೊತ್ತೇ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಧೋನಿ ಅವರು ಒಂದು ಟ್ರೆಂಡ್ ಸೆಟ್ ಮಾಡಿದ್ದರು ಅಂತ ಜಡೇಜಾ ಹೇಳಿದ್ದಾರೆ.


"ಡೇವಿಡ್ ಮಿಲ್ಲರ್ ಆಡಿದ ಆಟ ನೋಡಿದರೆ ನಮಗೆ ಅರ್ಥವಾಗುತ್ತದೆ, ಅವರು ಸಂದರ್ಭಕ್ಕೆ ಅನುಗುಣವಾಗಿ ಅವರ ಆಟವನ್ನು ಹೇಗೆ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಇದರಲ್ಲಿ ಅವರು ದೊಡ್ಡ ಹೊಡೆತಗಳನ್ನು ಆಡಲಿಲ್ಲ. ಅವರು ಶಾಂತರಾಗಿ ಆಟವಾಡುತ್ತಾ ಎದುರಾಳಿಗಳು ಮಾಡುವ ತಪ್ಪುಗಳಿಗೆ ಕಾಯುತ್ತಾ ಬುದ್ದಿವಂತಿಕೆಯಿಂದ ಆಟವಾಡಿದ್ದಾರೆ. ಧೋನಿ ವಿಶ್ವ ಕ್ರಿಕೆಟ್ ಗೆ ಕಲಿಸಿದ ಪಾಠದ ಕಾರಣದಿಂದಾಗಿ ನಾವು ಕಷ್ಟಗಳನ್ನು ಅನುಭವಿಸುತ್ತಿದ್ದೇವೆ" ಎಂದು ಜಡೇಜಾ ಅವರು ಹೇಳಿದರು.


ಇದನ್ನೂ ಓದಿ: T20 WC 2022 IND vs BAN: ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಹೊಸ ಟೆನ್ಶನ್​! ಹೀಗಾದ್ರೆ ಭಾರತ ಸೆಮಿ ಫೈನಲ್​ ಕನಸು ಭಗ್ನ!


ರೋಹಿತ್​ಗೆ ಬೌಲರ್​ಗಳನ್ನು ಉಪಯೋಗಿಸಿ ತಿಳಿದಿಲ್ಲ:


ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದರು. ಭಾರತೀಯ ನಾಯಕ ತನ್ನ ಬೌಲರ್ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದ್ದು, ‘ರೋಹಿತ್ ಶರ್ಮಾ ತಮ್ಮ ಬೌಲರ್ ಗಳನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಅಥವಾ ಅವರು ನಿರ್ದಿಷ್ಟ ಸ್ಥಾನದಲ್ಲಿ ನಿರ್ದಿಷ್ಟ ಬೌಲರ್ ಅನ್ನು ಬಳಸುವಲ್ಲಿ ವಿಫಲರಾಗಿದ್ದಾರೆ‘ ಎಂದು ಜಡೇಜಾ ಹೇಳಿದ್ದಾರೆ. ಭಾರತ ತಂಡವು ನಾಳೆ ಎಂದರೆ ಬುಧವಾರ ಬಾಂಗ್ಲಾದೇಶದೊಂದಿಗೆ ಸೆಣಸಲಿದೆ.

Published by:shrikrishna bhat
First published: