ಏಷ್ಯನ್ ಗೇಮ್ಸ್ 2018: ಬ್ಯಾಡ್ಮಿಂಟನ್​​ನಲ್ಲಿ ಸೆಮೀಸ್​ಗೆ ಲಗ್ಗೆ ಇಟ್ಟ ಸಿಂಧು-ಸೈನಾ

news18
Updated:August 26, 2018, 3:34 PM IST
ಏಷ್ಯನ್ ಗೇಮ್ಸ್ 2018: ಬ್ಯಾಡ್ಮಿಂಟನ್​​ನಲ್ಲಿ ಸೆಮೀಸ್​ಗೆ ಲಗ್ಗೆ ಇಟ್ಟ ಸಿಂಧು-ಸೈನಾ
news18
Updated: August 26, 2018, 3:34 PM IST
ನ್ಯೂಸ್ 18 ಕನ್ನಡ

ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಅದ್ಭುತ ಪ್ರದರ್ಶನ ತೋರುತ್ತಿದ್ದು, ಬ್ಯಾಡ್ಮಿಂಟನ್​​​ನಲ್ಲಿ ಹೊಸ ದಾಖಲೆ ಬರೆಯುವ ಸನಿಹದಲ್ಲಿದೆ. ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಪಿ. ವಿ ಸಿಂಧು ಹಾಗೂ ಸೇನಾ ನೆಹ್ವಾಲ್ ಅವರು ಸೆಮೀಸ್​ಗೆ ತಲುಪಿದ್ದಾರೆ.

ವಿಶ್ವದ 4ನೇ ಶ್ರೇಯಾಂಕಿತ ಆಟಗಾರ್ತಿ ಥೈಲೆಂಡ್​ನ ರಟ್ಟನೋಕ್ ಅವರನ್ನು 21-18, 21-16ತ ಅಂತರದಲ್ಲಿ ಸೋಲಿಸಿ ಸೈನಾ ಅವರು ಸೆಮಿ ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ. ನಾಳೆ ನಡೆಯುವ ಸೆಮೀಸ್​ನಲ್ಲಿ ವಿಶ್ವದ ನಂ. 1 ಆಟಗಾರ್ತಿಯಾಗಿರುವ ಥೈ ಟ್ಜು ಯಿಂಗ್ ಅವರನ್ನು ಸೈನಾ ಎದುರಿಸಲಿದ್ದು, ಇತಿಹಾಸ ಸೃಷ್ಟಿಸುವ ಸನಿಹದಲ್ಲಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್​​ನಲ್ಲಿ ಭಾರತಕ್ಕೆ ಪದಕವನ್ನಂತು ದೃಢಪಡಿಸಿದ್ದಾರೆ. ಇದರ ಜೊತೆಗೆ ಪಿ. ವಿ ಸಿಂಧು ಅವರು ಕೂಡ ಮಹಿಳೆಯ ಬ್ಯಾಡ್ಮಿಂಟನ್​​ನಲ್ಲಿ ಸೆಮಿ ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ. ಥೈಲೆಂಡ್​ನ ನಿಟ್ಚಾನ್ ಅವರನ್ನು 21-11, 16-21, 21-14 ಅಂತರದಲ್ಲಿ ಸೋಲಿಸಿ ಪದಕವನ್ನು ಕಚಿತ ಪಡಿಸಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್​​​​​​​ನಲ್ಲಿ ಭಾರತದ ಮಹಿಳೆಯರು ಹೊಸ ದಾಖಲೆ ಬರೆಯಲು ತುದಿಗಾಲಲ್ಲಿ ನಿಂತಿದ್ದಾರೆ.

ಭಾರತ 7 ಚಿನ್ನದ ಪದಕ, 7 ಬೆಳ್ಳಿ ಪದಕ ಹಾಗೂ 17 ಕಂಚಿನ ಪದಕ ಗೆದ್ದಿದ್ದು, ಒಟ್ಟಾರೆ 31 ಪದಕದೊಂದಿಗೆ 9ನೇ ಸ್ಥಾನದಲ್ಲಿದೆ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...