2022 ಫಿಫಾ ಫುಟ್ಬಾಲ್ ವಿಶ್ವಕಪ್ಗೆ ಭರ್ಜರಿ ತಯಾರಿಗಳು ನಡೆಯುತ್ತಿವೆ. ಅದರಲ್ಲೂ ಮುಂದಿನ ಫುಟ್ಬಾಲ್ ಕದನ ನಡೆಯುತ್ತಿರುವುದು ಸುಲ್ತಾನರ ನಾಡು ಕತಾರ್ನಲ್ಲಿ ಎಂಬುದು ವಿಶೇಷ. ಹೀಗಾಗಿ 2022ರ ಕತಾರ್ ಫುಟ್ಬಾಲ್ ವಿಶ್ವಕಪ್ ಕಳೆದ ವರ್ಷದಿಂದಲೇ ಸುದ್ದಿಯಲ್ಲಿದೆ. ಇದಕ್ಕೆ ಒಂದು ಕಾರಣ, ಕತಾರ್ ಸರ್ಕಾರ ಸಜ್ಜುಗೊಳಿಸುತ್ತಿರುವ ಮೈದಾನಗಳು. ಹೌದು, ಕತಾರ್ ಫುಟ್ಬಾಲ್ ವಿಶ್ವಕಪ್ಗಾಗಿ ಬೃಹತ್ ಮೈದಾನಗಳನ್ನು ನಿರ್ಮಿಸಲಾಗಿದೆ.
ಅದರಲ್ಲೊಂದಾದ ಅಹ್ಮದ್ ಬಿನ್ ಅಲಿ ಸ್ಟೇಡಿಯಂನ್ನು ಅನಾವರಣಗೊಳಿಸಲಾಗಿದೆ. ಕತಾರ್ ರಾಷ್ಟ್ರೀಯ ದಿನದಂದು 48ನೇ ಅಮೀರ್ ಕಪ್ಗೆ ಈ ಕ್ರೀಡಾಂಗಣ ಆತಿಥ್ಯವಹಿಸಿದ್ದು, ಇದೇ ಮೈದಾನದಲ್ಲೇ ಫಿಫಾ ವರ್ಲ್ಡ್ಕಪ್ ಫುಟ್ಬಾಲ್ನ 7 ಪಂದ್ಯಗಳು ನಡೆಯಲಿದೆ.
ಅಹ್ಮದ್ ಬಿನ್ ಅಲಿ ಸ್ಟೇಡಿಯಂ ಒಟ್ಟು 40,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದ್ದು, ಇಲ್ಲಿನ ಹವಾನಿಯಂತ್ರಿತ ವ್ಯವಸ್ಥೆ, ಸುಸಜ್ಜಿತ ರೂಮ್ಗಳನ್ನು ನಿರ್ಮಿಸಲಾಗಿದೆ. ಇನ್ನು ಅಮೀರ್ ಕಪ್ ಆರಂಭಕ್ಕೂ ಮುನ್ನ ಉದ್ಘಾಟನಾ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಬೆಳಕಿನ ಕಾರಂಜಿಯೊಂದಿಗೆ ದೃಶ್ಯ ವೈಭವ ಮೂಡಿ ಕ್ರೀಡಾಂಗಣದಲ್ಲಿ ನೆರೆದಿದ್ದ ಶೇ.50 ರಷ್ಟು ಜನರನ್ನು ನಿಬ್ಬೆರಗಾಗುವಂತೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ