'ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ವಯಸ್ಸಿನ ಅಂತರ ಬೇಕಿಲ್ಲ'; ತೆಂಡೂಲ್ಕರ್

news18
Updated:August 7, 2018, 5:18 PM IST
'ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ವಯಸ್ಸಿನ ಅಂತರ ಬೇಕಿಲ್ಲ'; ತೆಂಡೂಲ್ಕರ್
news18
Updated: August 7, 2018, 5:18 PM IST
ನ್ಯೂಸ್ 18 ಕನ್ನಡ

ನವ ದೆಹಲಿ: ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಬೇಕಾದರೆ ವಯಸ್ಸಿನ ಅಂತರ ಬೇಕಿಲ್ಲ, ಪ್ರತಿಭೆಯೊಂದಿದ್ದರೆ ಸಾಕು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್​​ ತಂಡದಲ್ಲಿ 20 ವರ್ಷ ಪ್ರಾಯದ ಸ್ಯಾಮ್ ಕುರ್ರನ್ ಅವರು ಅದ್ಭುತ ಪ್ರದರ್ಶನ ತೋರಿದ್ದರು, ಹಾಗೆಯೇ ಮುಂದಿನ ಟೆಸ್ಟ್​ಗೆ ಆಯ್ಕೆಯಾಗಿರುವ ಒಲಿವರ್ ಪೋಪ್​​ ಅವರು ಯುವ ಆಟಗಾರನಾಗಿದ್ದು ಉತ್ತಮ ಪ್ರತಿಭೆಯುಳ್ಳವರು. ಅವರು ದೇಶಕ್ಕಾಗಿ ಆಡಬೇಕು. ಅದರಲ್ಲಿ ವಯಸ್ಸಿನ ಬಗ್ಗೆ ತಾರತಮ್ಯ ಮಾಡಬಾರದು ಎಂದಿದ್ದಾರೆ.

ಇನ್ನು ನಾನು ಮೊದಲ ಪಂದ್ಯವನ್ನಾಡಿದಾಗ ನನಗೆ 16 ವರ್ಷ. ಆದರೆ ಆ ಕಾಲದ ದೈತ್ಯ ಬೌಲರ್​ಗಳಾದ ವಾಸೀಂ ಅಕ್ರಂ, ಇಮ್ರಾನ್ ಖಾನ್, ಅದ್ಬುಲ್ ಖಾದಿರ್ ಅವರ ಬೆಂಕಿಯ ಚೆಂಡನ್ನು ಎದುರಿಸಿದ್ದೆ. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಅನುಭವ ಹಾಗೂ ಪ್ರತಿಭೆಯೊಂದಿದ್ದಾರೆ ಸಾಕು ಅದಕ್ಕೆ ವಯಸ್ಸಿನ ವಯೋಮಿತಿಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸಚಿನ್ ಅವರು ಸಹ 16 ವರ್ಷ ಇರುವಾಗ 1989ರಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ