Mauka Mauka ಜಾಹೀರಾತು ಅಧಿಕೃತವಾಗಿ ಕೊನೆಗೊಂಡಿತೆಂದು ಕ್ರಿಕೆಟ್ ಪ್ರೇಮಿಗಳು ಆನಂದಿಸಿದ್ದಾದರೂ ಏಕೆ?
Official End of Viral Ad Mauka Mauka: 10 ವಿಕೆಟ್ಗಳ ಅಂತರದಿಂದ ಭಾರತವನ್ನು ಪಾಕ್ ಪಡೆಯು ವಿಶ್ವಕಪ್ನಲ್ಲಿ ಸೋಲಿಸಿದ ನಂತರ ಜಾಹೀರಾತನ್ನು ನಿಲ್ಲಿಸುವ ಕುರಿತು ನೆಟ್ಟಿಗರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ
ಭಾರತ-ಪಾಕಿಸ್ತಾನ ಕ್ರಿಕೆಟ್ ಸಮರ (India Pakistan cricket rivalry) ಹಿಂದಿನಿಂದಲೂ ಹೆಚ್ಚು ಕೌತುಕಮಯವಾದ ಹಾಗೂ ಸೆನ್ಸೇಶನಲ್ ಪಂದ್ಯಾಟವೆಂದೇ ಜನಜನಿತ. ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ಪಂದ್ಯಾಟದ ವೇಳೆಯಲ್ಲಿ ತಮ್ಮ ದೇಶಕ್ಕೆ ಬೆಂಬಲ ವ್ಯಕ್ತಪಡಿಸುವುದು, ಘೋಷಣೆಗಳನ್ನು ಕೂಗುವುದು ಸ್ಟೇಡಿಯಂನಲ್ಲಿ ಇದ್ದೇ ಇರುತ್ತದೆ. ಅದೂ ಅಲ್ಲದೆ ಭಾರತ-ಪಾಕ್ (India vs Pakistan) ಪಂದ್ಯಾಟವೆಂದರೆ ಕ್ರಿಕೆಟ್ ಅಭಿಮಾನಿಗಳಿಗಂತೂ ಹಬ್ಬವೇ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಟಿವಿ ಎದುರು ಕುಳಿತೇಬಿಡುತ್ತಾರೆ. ಒಂದಿಂಚೂ ಅತ್ತಿತ್ತ ಕದಲದೆ ಆಟಗಾರರನ್ನು ಹುರಿದುಂಬಿಸುತ್ತಲೇ ಇರುತ್ತಾರೆ.
ICC Men’s T20 ವರ್ಲ್ಡ್ ಕಪ್ನ ಅಧಿಕೃತ ಬ್ರಾಡ್ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ (T20 World Cup broadcaster Star Sports) ಎರಡೂ ದೇಶಗಳ ನಡುವಿನ ಸ್ನೇಹಪರ ಸಂಭಾಷಣೆಯನ್ನು ವ್ಯಕ್ತಪಡಿಸಲು ‘ಮೌಕಾ ಮೌಕಾ ಜಾಹೀರಾತನ್ನು (Mauka Mauka Ad) ಆಗಾಗ್ಗೆ ಪ್ರಸಾರ ಮಾಡುತ್ತಿದ್ದುದು ನೋಡಿರಲೇಬೇಕು. ನವೀಕೃತ ಜಾಹೀರಾತಿನಲ್ಲಿ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಯೊಬ್ಬ ಟಿ20 ವರ್ಲ್ಡ್ ಕಪ್ ನೋಡುವುದಕ್ಕಾಗಿ ಟಿವಿ ಖರೀದಿಸುವುದಕ್ಕಾಗಿ ತನ್ನ ಗೆಳೆಯನ ಇಲೆಕ್ಟ್ರಾನಿಕ್ ಅಂಗಡಿಗೆ ಭೇಟಿ ನೀಡುತ್ತಾನೆ. ಭಾರತೀಯ ಮತ್ತು ಪಾಕಿಸ್ತಾನಿ ಅಭಿಮಾನಿಗಳನ್ನು ಪರಸ್ಪರ ಉತ್ತಮವಾಗಿಸುವ ಪರಿಕಲ್ಪನೆಯೊಂದಿಗೆ ಜಾಹೀರಾತು ಮುಂದುವರಿಯುತ್ತದೆ.
ಕಡೆಗೂ ಬಂತು ಪಾಕಿಸ್ತಾನಕ್ಕೆ ಮೌಕಾ:
ಅಂತೂ ಇಂತೂ ಭಾನುವಾರ ದುಬೈನಲ್ಲಿ ಪಂದ್ಯಾಟ ಏರ್ಪಟ್ಟಿತು ಹಾಗೂ ಮೌಕಾ ಮೌಕಾ ಜಾಹೀರಾತನ್ನು (Offician End of Mauka Mauka viral Ad) ನಿಲ್ಲಿಸಬೇಕು ಇಲ್ಲವೇ ಜಾಹೀರಾತಿನಲ್ಲಿ ಹೊಸ ಪರಿವರ್ತನೆಗಳನ್ನು ನಡೆಸಬೇಕು ಎಂದು ಹೇಳುವುದೇ ಸುರಕ್ಷಿತವಾಗಿದೆ. 10 ವಿಕೆಟ್ಗಳ ಅಂತರದಿಂದ ಭಾರತವನ್ನು ಪಾಕ್ ಪಡೆಯು ವಿಶ್ವಕಪ್ನಲ್ಲಿ ಸೋಲಿಸಿದ ನಂತರ ಜಾಹೀರಾತನ್ನು ನಿಲ್ಲಿಸುವ ಕುರಿತು ನೆಟ್ಟಿಗರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದ 152 ವಿಕೆಟ್ಗಳನ್ನು ಗುರಿಯಾಗಿಸಿಕೊಂಡು 13 ಎಸೆತಗಳ ಮೂಲಕ ಹಾಗೂ 10 ವಿಕೆಟ್ಗಳು ಬಾಕಿ ಇರುವಾಗಲೇ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ಕೊನೆಗೊಳ್ಳತ್ತಾ ಮೌಕಾ ಮೌಕಾ ಜಾಹೀರಾತು:
ಹಾಗಿದ್ದರೆ ಪಾಕಿಸ್ತಾನ ಮೌಕಾ ಮೌಕಾ ಜಾಹೀರಾತನ್ನು ಕೊನೆಗೊಳಿಸಲಿದೆಯೇ? ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ಆಶಾದಾಯಕವಾಗಿ ಆಶಿಸಿದ್ದಾರೆ. ಏಕೆಂದರೆ ಸದ್ಯ ಈ ಕುರಿತು ಸಾಮಾಜಿಕ ತಾಣದಲ್ಲಿ ಕಾಮೆಂಟ್ಗಳು ಹರಿದಾಡುತ್ತಿದ್ದು ಹೆಚ್ಚಿನ ನೆಟ್ಟಿಗರು ಮೌಕಾ ಮೌಕಾ ಜಾಹೀರಾತಿಗೆ ತಮ್ಮದೇ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇನ್ನು ಮೌಕಾ ಮೌಕಾ ಜಾಹೀರಾತಿನಲ್ಲಿ ಅಭಿನಯಿಸಿದ ನಟನ ವೃತ್ತಿ ಬದುಕು ಅಂತ್ಯಗೊಂಡಿದೆ ಇನ್ನೇನು ಅವರಿಗೆ ಕೆಲಸವಿಲ್ಲವೆಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದರೆ, ಮುಂದಿನ ವರ್ಷದಿಂದ ಈ ಜಾಹೀರಾತು ಇರುವುದಿಲ್ಲವೆಂದು ಇನ್ನೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. ತಂಡದ ಆಯ್ಕೆಯಿಂದ ಹಿಡಿದು ಕಡಿಮೆ ಸಿದ್ಧತೆ ಹೀಗೆ ಭಾರತದ ಸೋಲಿಗೆ ಹಲವಾರು ಕಾರಣಗಳಿವೆ ಎಂದು ಬಳಕೆದಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೌಕಾ ಮೌಕಾ ಜಾಹೀರಾತಿಗೆ ವಿದಾಯ ಎಂದು ತಿಳಿಸಿದ್ದಾರೆ. ಅಂತೂ ಇಂತೂ ಮೌಕಾ ಮೌಕಾ ಜಾಹೀರಾತಿನ ನಟನ ವೃತ್ತಿ ಬದುಕು ಮುಗಿಯಿತೇ? ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ಈ ಗೆಲುವಿನೊಂದಿಗೆ ದೇಶವು ತನ್ನ ನೆರೆಹೊರೆಯವರಿಂದ “ಮುರಿದ ಟಿವಿ” ವ್ಯಂಗ್ಯೋಕ್ತಿಗಳಿಂದ ಮುಕ್ತಗೊಂಡಿದೆ ಎಂದೇ ಹೇಳಬಹುದು. ಪಂದ್ಯಾಟಕ್ಕೂ ಮುನ್ನ ಭಾನುವಾರ ಪೋಸ್ಟ್ ಮಾಡಲಾದ ಟ್ವೀಟ್ನಲ್ಲಿ ಫೆವಿಕ್ವಿಕ್ನ ಟ್ವಿಟ್ಟರ್ ಖಾತೆಯು ಭಾರತ ವರ್ಸಸ್ ಪಾಕಿಸ್ತಾನ ಪಂದ್ಯಾಟದ ಉತ್ಸಾಹವನ್ನು ಗುರಿಯಾಗಿಸಿಕೊಂಡು ಹೀಗೆ ಬರೆದುಕೊಂಡಿತ್ತು. ಆತ್ಮೀಯ ನೆರೆಹೊರೆಯವರೇ, ಮುರಿದ ಟಿವಿಯನ್ನು ಫಿಕ್ಸ್ ಮಾಡುವುದು ತುಂಬಾ ಕಷ್ಟ, ನಮಗೂ ಕೂಡ. ಇಂದು ಏನನ್ನಾದರೂ ಮುರಿಯಿರಿ #IndvsPak #ThirteenZero #SixZero ಎಂದು ಪೋಸ್ಟ್ ಮಾಡಿತ್ತು.
Published by:Sharath Sharma Kalagaru
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ