Dhoni: ಐಪಿಎಲ್ ಬಳಿಕ ಸ್ನೇಹಿತರಿಗೆ ಟೈಮ್ ಕೊಡ್ತಿದ್ದಾರೆ ಕ್ಯಾಪ್ಟನ್ ಕೂಲ್, ಗೆಳೆಯನ ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡ ಧೋನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಪ್ರಸ್ತುತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಮಾತ್ರವಲ್ಲದೇ ತಮ್ಮ ಶಾಂತ ಸ್ವಭಾವಕ್ಕೂ ಹೆಸರುವಾಸಿ, ಕ್ಯಾಪ್ಟನ್ ಕೂಲ್ ಅಂತಾನೇ ಕರೆಸಿಕೊಳ್ಳುವ ಧೋನಿಯ ಕ್ರಿಕೆಟ್ ಪಯಣ ಪ್ರತಿಯೊಬ್ಬ ಆರಂಭಿಕ ಆಟಗಾರನಿಗೂ ಸ್ಪೂರ್ತಿಯಾಗಿದೆ.

ಆಪ್ತ ಸ್ನೇಹಿತನ ಹುಟ್ಟುಹಬ್ಬದಲ್ಲಿ ಧೋನಿ

ಆಪ್ತ ಸ್ನೇಹಿತನ ಹುಟ್ಟುಹಬ್ಬದಲ್ಲಿ ಧೋನಿ

  • Share this:
ಐಪಿಎಲ್ (IPL) ನಂತರ ಬಿಡುವು ಮಾಡಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಇತ್ತೀಚೆಗೆ ಸ್ನೇಹಿತರೊಬ್ಬರ ಹುಟ್ಟುಹಬ್ಬದ ಸಮಾರಂಭಕ್ಕೆ ಭೇಟಿ ನೀಡಿದ್ದರು. ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆನಿಸಿಕೊಂಡಿರುವ ಎಂ.ಎಸ್ ಧೋನಿ ತಮ್ಮ ಹಳೇ ಸ್ನೇಹಿತರಿಗಾಗಿ ಯಾವಾಗಲೂ ಸಮಯ ಮೀಸಲಿಟ್ಟಿರುತ್ತಾರೆ. ಇತ್ತಿಚೆಗೆ ಆಪ್ತ ಸ್ನೇಹಿತನ ಹುಟ್ಟುಹಬ್ಬದ (Birthday) ಸಂತೋಷಕೂಟದಲ್ಲಿ ಧೋನಿ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬರ್ತ್ ಡೇ ಪಾರ್ಟಿಯಲ್ಲಿದ್ದ ಧೋನಿಯವರ ಫೋಟೋಗಳು, ವಿಡಿಯೋಗಳು ಹರಿದಾಡುತ್ತಿವೆ. ಕ್ರಿಕೆಟ್ (Cricket) ಅಂದರೆ ನೆನಪಾಗುವ ಕೆಲವು ಕ್ರಿಕೆಟಿಗರಲ್ಲಿ ಎಂ.ಎಸ್ ಧೋನಿ ಪ್ರಮುಖರು. ತಮ್ಮ ಹೊಡಿಬಡಿ ಆಟದಿಂದಲೇ ಕೊಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಪ್ರಸ್ತುತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಮಾತ್ರವಲ್ಲದೇ ತಮ್ಮ ಶಾಂತ ಸ್ವಭಾವಕ್ಕೂ ಹೆಸರುವಾಸಿ, ಕ್ಯಾಪ್ಟನ್ ಕೂಲ್ ಅಂತಾನೇ ಕರೆಸಿಕೊಳ್ಳುವ ಧೋನಿಯ ಕ್ರಿಕೆಟ್ ಪಯಣ ಪ್ರತಿಯೊಬ್ಬ ಆರಂಭಿಕ ಆಟಗಾರನಿಗೂ ಸ್ಪೂರ್ತಿಯಾಗಿದೆ.

ಆಪ್ತ ಸ್ನೇಹಿತನ ಬರ್ತ್ ಡೇ ಪಾರ್ಟಿಯಲ್ಲಿ ಧೋನಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಮುಕ್ತಾಯದ ನಂತರ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ 'ಥಲಾ' ಧೋನಿ ಇತ್ತೀಚೆಗೆ ತಮ್ಮ ಆತ್ಮೀಯರೊಬ್ಬರ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಸುದೀರ್ಘ ಐಪಿಎಲ್ ಪಯಣದಲ್ಲಿ ಬ್ಯುಸಿ ಇದ್ದ ಧೋನಿ ಪ್ರಸ್ತುತ ಕುಟುಂಬ ಮತ್ತು ಸ್ನೇಹಿತರಿಗೆ ಟೈಮ್ ಕೊಡುತ್ತಿದ್ದಾರೆ. ಕ್ರಿಕೆಟ್ ಮೈದಾನದಿಂದ ದೂರವಿರುವ ಸಮಯವನ್ನು ಖುಷಿಯಿಂದ ಕಳೆಯುತ್ತಿರುವ ಎಂ.ಎಸ್. ಧೋನಿ ಇತ್ತೀಚೆಗೆ ರಾಂಚಿಯಲ್ಲಿ ಸುರೇಂದರ್ ಕುಮಾರ್ ಎಂಬ ಸ್ನೇಹಿತರೊಬ್ಬರ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿ ಸ್ನೇಹಿತನಿಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ:  Happy Birthday Lionel Messi: 2 ಪಾಸ್​ಪೋರ್ಟ್ ಹೊಂದಿದ್ದಾರಂತೆ ಈ ಖ್ಯಾತ ಫುಟ್ಬಾಲ್ ಆಟಗಾರ

ಸ್ನೇಹಿತನಾದ ಸುರೇಂದರ್ ಕುಮಾರ್ ವಾಸ್ತವವಾಗಿ ಧೋನಿಯ ಟೆನಿಸ್ ತರಬೇತುದಾರ. ಸುರೇಂದರ್ ಕುಮಾರ್ ಅವರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭಾಗಿಯಾಗಲು ಧೋನಿ ಅವರು ರಾಂಚಿಯಿಂದ ಬಂದಿದ್ದರು. ಧೋನಿ ಮತ್ತು ಸುರೇಂದರ್ ಕುಮಾರ್ ಇಬ್ಬರೂ ಆಪ್ತ ಸ್ನೇಹಿತರಾಗಿದ್ದು, ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಧೋನಿ ಭಾಗಿಯಾಗಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆದಿದ್ದು, ಹುಟ್ಟುಹಬ್ಬದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಕ್ಲಿಪ್‌ನಲ್ಲಿ, ಪ್ರಸಿದ್ಧ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಕೇಕ್ ಕತ್ತರಿಸುವ ಸಮಾರಂಭದಲ್ಲಿ ಅವರ ಆಪ್ತ ಸ್ನೇಹಿತ ಸುರೇಂದರ್ ಕುಮಾರ್ ಅವರ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದಾರೆ. ಕೆಲವೇ ಮಂದಿ ಭಾಗಿಯಾಗಿದ್ದ ಹುಟ್ಟುಹಬ್ಬದ ಸಂಭ್ರಮದಲ್ಲಿ ಧೋನಿ ಕೂಡ ಭಾಗಿಯಾಗಿದ್ದರು.

ಟ್ವಿಟ್ಟರ್‌ನಲ್ಲಿ ಸಿಎಸ್‌ಕೆ ನಾಯಕನ ಅಭಿಮಾನಿಗಳ ಪುಟವೊಂದು ಈ ವೀಡಿಯೊವನ್ನು ಹಂಚಿಕೊಂಡಿದೆ. ಯಾವ ಸಿನಿಮಾ ನಟನಿಗೂ ಕಡಿಮೆ ಇಲ್ಲ ಎನ್ನುವಂತೆ ಕಾಣುವ ಧೋನಿ ಸಿಂಪಲ್ ಔಟ್ ಫಿಟ್ ನಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿದ್ದರು.

ಟೆನಿಸ್ ಮೇಲೆ ಧೋನಿ ಒಲವು
ಸುರೇಂದರ್ ಕುಮಾರ್ ರಾಂಚಿಯ ಜೆಎಸ್‌ಸಿಎ ಟೆನಿಸ್ ಅಕಾಡೆಮಿಯಲ್ಲಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಪಂದ್ಯಗಳು ಇಲ್ಲದ ಸಂದರ್ಭದಲ್ಲಿ ರಾಂಚಿಯಲ್ಲಿ ತನ್ನ ಸ್ನೇಹಿತರೊಂದಿಗೆ ಫುಟ್ಬಾಲ್ ಮತ್ತು ಟೆನಿಸ್ ಅನ್ನು ಆಡಲು ಧೋನಿ ಇಷ್ಟಪಡುತ್ತಾರೆ. ಕ್ರಿಕೆಟ್ ನಂತೆಯೇ ಇತರೆ ಆಟಗಳಲ್ಲೂ ಆಸಕ್ತಿ ಹೊಂದಿರುವ ಧೋನಿ 2018ರಲ್ಲಿ JSCA ಕಂಟ್ರಿ ಕ್ರಿಕೆಟ್ ಕ್ಲಬ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಟೆನಿಸ್ ಕೌಶಲ್ಯಗಳನ್ನು ಪ್ರದರ್ಶಿಸಿದರು.

ಇದನ್ನೂ ಓದಿ:  PHOTOS: 2ನೇ ಬಾರಿಗೆ ತಂದೆಯಾಗುತ್ತಿರುವ ರಾಬಿನ್​ ಉತ್ತಪ್ಪ! ಪತ್ನಿ ಶೀತಲ್​ ಅವರ ಬೇಬಿ ಬಂಪ್​​ ಫೋಟೋಗಳು ವೈರಲ್​

2022ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ನಾಲ್ಕು ಬಾರಿ ಚಾಂಪಿಯನ್ ಆಗಿದ್ದ ಧೋನಿ ತಂಡ ಸಿಎಸ್‌ಕೆ ಈ ಋತುವಿನಲ್ಲಿ 10 ತಂಡಗಳ ಟೂರ್ನಿಯಲ್ಲಿ ಒಂಬತ್ತನೇ ಸ್ಥಾನ ಗಳಿಸಿತ್ತು. 40 ವರ್ಷ ವಯಸ್ಸಿನ ಧೋನಿ ಐಪಿಎಲ್ 2023ರಲ್ಲೂ ಸಹ ಸಿಎಸ್ ಕೆ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಹಳದಿ ಜರ್ಸಿಯಲ್ಲಿ 'ಥಲ' ಅವರನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡಲು ಅಭಿಮಾನಿಗಳಿ ಐಪಿಎಲ್ ಅನ್ನು ಎದುರು ನೋಡುತ್ತಿದ್ದಾರೆ.
Published by:Ashwini Prabhu
First published: