ನಾಯಕತ್ವದಿಂದ ಮಾತ್ರವಲ್ಲ… ಶ್ರೀಲಂಕಾ ತಂಡದಿಂದಲೂ ಮ್ಯಾಥ್ಯೂಸ್ ಔಟ್..!

news18
Updated:September 27, 2018, 7:36 PM IST
ನಾಯಕತ್ವದಿಂದ ಮಾತ್ರವಲ್ಲ… ಶ್ರೀಲಂಕಾ ತಂಡದಿಂದಲೂ ಮ್ಯಾಥ್ಯೂಸ್ ಔಟ್..!
ಶ್ರೀಲಂಕಾ ತಂಡ ಭಾರತ ವಿರುದ್ಧ ಸರಣಿ ಜಯಿಸಲೇ ಬೇಕೆಂದು ಟಿ-20 ಪಂದ್ಯಕ್ಕೆ ಒಂದುವರೆ ವರ್ಷದ ಬಳಿಕ ಅನುಭವಿ ಆ್ಯಂಜಲೋ ಮ್ಯಾಥ್ಯೂಸ್ ಅವರನ್ನು ತಮಡಕ್ಕೆ ಸೇರಿಸಿಕೊಂಡಿತ್ತು. ಆದರೆ, ಅದರಲ್ಲೂ ಎಡವಿತು.
  • News18
  • Last Updated: September 27, 2018, 7:36 PM IST
  • Share this:
ನ್ಯೂಸ್ 18 ಕನ್ನಡ

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್​​​​ನಲ್ಲಿ ಶ್ರೀಲಂಕಾ ತಂಡ ಹೀನಾಯ ಪ್ರದರ್ಶನ ತೋರಿದ ಹಿನ್ನಲೆಯಲ್ಲಿ ಇತ್ತೀಚೆಗಷ್ಟೆ ತಂಡದ ನಾಯಕ ಏಂಜೆಲೋ ಮ್ಯಾಥ್ಯೂಸ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದರಿಂದ ಬೇಸರಗೊಂಡ ಮ್ಯಾಥ್ಯೂಸ್ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ದೂರಿದ್ದರು.

ಇದಾದ ಬೆನ್ನಲ್ಲೆ ಮ್ಯಾಥ್ಯೂಸ್ ಅವರನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದಲೂ ಗೇಟ್ ಪಾಸ್ ನೀಡಲಾಗಿದೆ. ಅ. 10ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ-ಇಂಗ್ಲೆಂಡ್ ತಂಡಗಳ ನಡುವಣ 5 ಏಕದಿನ ಪಂದ್ಯಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ 15 ಸದಸ್ಯರನ್ನು ಒಳಗೊಂಡ ತಂಡ ಪ್ರಕಟಿಸಿದೆ. ಆದರೆ ಇದರಲ್ಲಿ ಮ್ಯಾಥ್ಯೂಸ್​ಗೆ ಸ್ಥಾನ ನೀಡಲಾಗಿಲ್ಲ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಫಿಟ್​ನೆಸ್ ತೊಂದರೆಯಿಂದ ಮ್ಯಾಥ್ಯೂಸ್ ಅವರನ್ನು ಆಯ್ಕೆ ಮಾಡಿಲ್ಲ ಎಂದು ತಿಳಿಸಿದೆ.

ಏಷ್ಯಾ ಕಪ್​​ನಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ವಿರುದ್ಧ ಸೋತು ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಿತ್ತು. ಇದನ್ನೆಲ್ಲಾ ಮನಗಂಡು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮ್ಯಾಥ್ಯೂಸ್ ಅವರನ್ನು ನಾಯಕತ್ವ ಸ್ಥಾನದಿಂದ ವಜಾಮಾಡಿತ್ತು. ಈ ಬಗ್ಗೆ ಮ್ಯಾಥ್ಯೂಸ್, ಏಷ್ಯಾ ಕಪ್​​ನಲ್ಲಿ ತಂಡದ ಸೋಲಿನ ಆರೋಪ ಹೊರಲು ನಾನು ಸಿದ್ಧ. ಆದರೆ, ಈ ಇಡೀ ಸೋಲಿನ ಹೊಣೆಯನ್ನು ನನ್ನೊಬ್ಬನ ಮೇಲೆ ಕಟ್ಟಲಾಗುತ್ತಿದೆ. ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದರು.
First published:September 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading