• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Rohit Sharma: ರೋಹಿತ್ ಕೈ ತಪ್ಪುತ್ತಾ ಟೀಂ ಇಂಡಿಯಾ ಕ್ಯಾಪ್ಟನ್ಸಿ? ಹಿಟ್​ಮ್ಯಾನ್ ಸ್ಥಾನಕ್ಕೆ ಬರ್ತಾರಾ ಪಾಂಡ್ಯಾ?

Rohit Sharma: ರೋಹಿತ್ ಕೈ ತಪ್ಪುತ್ತಾ ಟೀಂ ಇಂಡಿಯಾ ಕ್ಯಾಪ್ಟನ್ಸಿ? ಹಿಟ್​ಮ್ಯಾನ್ ಸ್ಥಾನಕ್ಕೆ ಬರ್ತಾರಾ ಪಾಂಡ್ಯಾ?

ಹಾರ್ದಿಕ್​-ರೋಹಿತ್

ಹಾರ್ದಿಕ್​-ರೋಹಿತ್

Rohit Sharma: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಮುಕ್ತಾಯಗೊಂಡಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲನ್ನು ಎದುರಿಸುವ ಮೂಲಕ ಐಸಿಸಿ ಶ್ರೇಯಾಂಕದಲ್ಲಿ ನಂಬರ್​ 1 ಸ್ಥಾನದಿಂದ ಕೆಳಗಿಳಿಯಿತು.

  • Share this:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ (IND vs AUS) ಮುಕ್ತಾಯಗೊಂಡಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲನ್ನು ಕಾಣುವ ಮೂಲಕ ಐಸಿಸಿ (ICC) ಏಕದಿನ ಶ್ರೇಯಾಂಕದಲ್ಲಿಯೂ ಕುಸಿತಕಂಡಿದೆ. ತಂಡದ ಆಯ್ಕೆಗೆ ಸಂಬಂಧಿಸಿದಂತೆ ಅಭಿಮಾನಿಗಳು ನಿರಂತರವಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ರೋಹಿತ್ ಶರ್ಮಾ (Rohit Sharma) ನಾಯಕತ್ವದ ಬಗ್ಗೆಯೂ ಅನೇಕರು ಪ್ರಶ್ನಿಸುತ್ತಿದ್ದಾರೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು ಗೆದ್ದುಕೊಂಡಿತ್ತು. ಬಳಿಕ ನಡೆದ 2 ಪಂದ್ಯಗಳಲ್ಲಿಯೂ ಭಾರತ ತಂಡ ಹೀನಾಯವಾಗಿ ಸೋಲನ್ನಪ್ಪುವ ಮೂಲಕ ಸರಣಿಯನ್ನು ಕೈ ಚೆಲ್ಲಿದೆ.


ಮೊದಲ ಪಂದ್ಯದಲ್ಲಿ ನಾಯಕತ್ವ ಬದಲಾವಣೆ:


ಕೌಟುಂಬಿಕ ಕಾರಣಗಳಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಇರಲಿಲ್ಲ. ಇದಾದ ನಂತರ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಏಕದಿನ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಏಕದಿನದಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದ ಪಾಂಡ್ಯ ನಾಯಕತ್ವದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿತು. ಇದೀಗ ಏಕದಿನ ಪಂದ್ಯದಲ್ಲೂ ಹಾರ್ದಿಕ್ ತಮ್ಮ ನಾಯಕತ್ವದ ಪ್ರಭಾವವನ್ನು ತೋರಿಸಿದ್ದಾರೆ. ನಿಸ್ಸಂಶಯವಾಗಿ ಅವರು ರೋಹಿತ್ ಶರ್ಮಾ ನಂತರ ನಾಯಕರಾಗಿ ಆಯ್ಕೆ ಆಗುವಸ ಆಧ್ಯತೆ ಹೆಚ್ಚಿದೆ.


ಕೆಎಲ್ ರಾಹುಲ್ ನಾಯಕತ್ವ:


ದೀರ್ಘ ಕಾಲದಿಂದ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದ ಕೆಎಲ್ ರಾಹುಲ್ ಅವರಿಗೆ ರೋಹಿತ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ಈ ಹಿಂದೆ ನೀಡಲಾಗಿತ್ತು. ಆದರೆ ಇದೀಗ ಕಳಪೆ ಫಾರ್ಮ್‌ನಿಂದಾಗಿ ಈ ಜವಾಬ್ದಾರಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. 2022ರಲ್ಲಿ ಗಾಯದಿಂದ ಹಿಂದಿರುಗಿದ ನಂತರ, ಹಾರ್ದಿಕ್ ಹೊಸ ಫ್ರಾಂಚೈಸ್ ಗುಜರಾತ್ ಟೈಟಾನ್ಸ್‌ಗೆ ಪ್ರಶಸ್ತಿ ಜಯಿಸಿದರು. ಈಗ ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ಬಳಿಕ ನಾಯಕತ್ವದಿಂದ ಹೊರನಡೆಯುವ ಸಾಧ್ಯತೆ ಹೆಚ್ಚಿದೆ.


ಇದನ್ನೂ ಓದಿ: IPL 2023: ಐಪಿಎಲ್‌ ಫೀವರ್, ರಶ್ಮಿಕಾ ಡ್ಯಾನ್ಸ್ ಖದರ್! ಕ್ರಿಕೆಟ್ ಹಬ್ಬಕ್ಕೆ ಕಿಚ್ಚು ಹಚ್ಚೋಕೆ ರೆಡಿಯಾದ ನ್ಯಾಷನಲ್ ಕ್ರಶ್


ಸೂರ್ಯಕುಮಾರ್ ಬಗ್ಗೆ ಹೆ್ಚಚಿದ ಪ್ರಶ್ನೆ:


ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಪ್ರದರ್ಶನ ಕಳಪಡಯಾಗಿತ್ತು. ಮೊದಲೆರಡು ODIಗಳಲ್ಲಿ ಅವರು ಶೂನ್ಯ ಗಳಿಸಿದರು. ಇದರ ಹೊರತಾಗಿಯೂ ರೋಹಿತ್ ಶರ್ಮಾ ಅವರಿಗೆ ಮೂರನೇ ಏಕದಿನ ಪಂದ್ಯದಲ್ಲಿ ಅವಕಾಶ ನೀಡಿದರು. ಆದರೆ ಸೂರ್ಯ 3ನೇ ಪಂದ್ಯದಲ್ಲೂ ಶೂನ್ಯಕ್ಕೆ ಪೆವಿಲಿಯನ್ ಮರಳಿದರು. ಈ ನಿರ್ಧಾರವು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ಗೆ ಭಾರವಾಗಿದೆ. ಸೋಲಿನ ಬಳಿಕ ತಂಡದ ಆಯ್ಕೆಗಾಗಿ ಅಭಿಮಾನಿಗಳು ನಾಯಕ ಹಾಗೂ ಕೋಚ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ.
ಈ ಮೂಲಕ ಸತತ ಮೂರು ಪಂದ್ಯಗಳಿಂದ ಸೂರ್ಯ ಗೋಲ್ಡನ್​ ಡಕ್​ ಆಗುತ್ತಿದ್ದು, ಕ್ರಿಕೆಟ್​ ಅಭಿಮಾನಿಗಳು SKY ಮೇಲೆ ಬೇಸರ ವ್ಯಕ್ತ ಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಅವರ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸವನ್ನು ಅವಲೋಕಿಸಿದರೆ, ಸರಣಿಯ ಎಲ್ಲಾ ಪಂದ್ಯಗಳಲ್ಲಿ ಆಟಗಾರನೊಬ್ಬ ಗೋಲ್ಡನ್ ಡಕ್‌ಗೆ ಬಲಿಯಾಗುತ್ತಿರುವುದು ಇದೇ ಮೊದಲು. ಸಚಿನ್ ತಮ್ಮ ವೃತ್ತಿಜೀವನದಲ್ಲಿ ಸತತ ಎರಡು ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು.


ಇದನ್ನೂ ಓದಿ: Most Valued Celebrity: ಬಾಲಿವುಡ್​ ಸ್ಟಾರ್ಸ್​ಗೇ ಕಿಂಗ್​ ಕೊಹ್ಲಿ ಠಕ್ಕರ್, ಅತ್ತ ರಶ್ಮಿಕಾ ಮಂದಣ್ಣ ಬ್ರಾಂಡ್ ವ್ಯಾಲ್ಯೂ ಕೂಡಾ ಡಬಲ್


ಏಕದಿನ ರ‍್ಯಾಂಕಿಂಗ್​ನಿಂದ ಕೆಳಕ್ಕೆ:


ಇದರ ನಡುವೆ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲುವ ಮೂಲಕ ಭಾರತ ತಂಡ ಐಸಿಸಿ ಏಕದಿನ ರ‍್ಯಾಂಕಿಂಗ್ ನಲ್ಲಿ ಹೆನ್ನಡೆ ಅನುಭವಿಸಿದೆ. ನಂಬರ್​ 1 ಸ್ಥಾನದಿಂದ ಕೆಳಗಿಳಿದಿರುವ ಭಾರತ 2ನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ನಂಬರ್​ 1 ಸ್ಥಾನಕ್ಕೇರಿದೆ.

First published: