ಭಾರತ-ಇಂಗ್ಲೆಂಡ್ ಟೆಸ್ಟ್​: 11 ವರ್ಷಗಳ ಬಳಿಕ ಆಂಗ್ಲರ ನಾಡಲ್ಲಿ ದಿನೇಶ್ ಕಾರ್ತಿಕ್​ಗೆ ಅಗ್ನಿಪರೀಕ್ಷೆ

news18
Updated:July 31, 2018, 5:32 PM IST
ಭಾರತ-ಇಂಗ್ಲೆಂಡ್ ಟೆಸ್ಟ್​: 11 ವರ್ಷಗಳ ಬಳಿಕ ಆಂಗ್ಲರ ನಾಡಲ್ಲಿ ದಿನೇಶ್ ಕಾರ್ತಿಕ್​ಗೆ ಅಗ್ನಿಪರೀಕ್ಷೆ
news18
Updated: July 31, 2018, 5:32 PM IST
ನ್ಯೂಸ್ 18 ಕನ್ನಡ

2004ರಲ್ಲಿ ಟೀಂ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ್ದ ದಿನೇಶ್ ಕಾರ್ತಿಕ್ ಅದೇ ವರ್ಷದ ನವಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ ಸರಣಿಗೂ ಆಯ್ಕೆ ಆದರು. 2007ರ ವರೆಗೆ ಉತ್ತಮ ಫಾರ್ಮ್​ನಲ್ಲಿದ್ದ ಕಾರ್ತಿಕ್ ಬಳಿಕ ಕೆಲ ಸಮಯದ ನಂತರ ಬ್ಯಾಡ್​​ ಫಾರ್ಮ್​ಗೆ ಮರಳಿದರು. 2008ರಲ್ಲಿ ಎರಡು ಪಂದ್ಯ, 2009 ಹಾಗೂ 2010ರಲ್ಲಿ ಕೇವಲ ಒಂದು ಟೆಸ್ಟ್​​  ಪಂದ್ಯವನ್ನಷ್ಟೆ ಕಾರ್ತಿಕ್ ಆಡಿದ್ದರು. ಇದಾದ ಬಳಿಕ ಬ್ಯಾಟಿಂಗ್ ವೈಫಲ್ಯದಿಂದ ಭಾರತದಲ್ಲಿ ಸ್ಥಾನ ಪಡೆಯಲು ಸಂಪೂರ್ಣ ವಿಫಲರಾದರು. ನಂತರ ಬರೋಬ್ಬರಿ 8 ವರ್ಷದ ಬಳಿಕ ಕಳೆದ ಜೂನ್​​ನಲ್ಲಿ ಬೆಂಗಳೂರಿನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದರು. ಇದಾದಾ ನಂತರ ಸದ್ಯ ಬಲಿಷ್ಠ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ದಿನೇಶ್ ಕಾರ್ತಿಕ್ ಆಯ್ಕೆ ಆಗಿದ್ದಾರೆ.

ಎಂ. ಎಸ್. ಧೊನಿ ಟೆಸ್ಟ್​ ಕ್ರಿಕೆಟ್​​ಗೆ ನಿವೃತ್ತಿ ನೀಡಿದ ಬಳಿಕ ಟೀಂ ಇಂಡಿಯಾ ಕೀಪರ್ ಆಗಿ ಸ್ಥಾನ ತುಂಬುತ್ತಿದ್ದ ವೃದ್ಧಿಮಾನ್ ಸಾಹ ಗಾಯದಿಂದಾಗಿ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಸದ್ಯ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿದ್ದು, ಕಾರ್ತಿಕ್ ಪ್ರದರ್ಶನದ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. ದಿನೇಶ್ ಕಾರ್ತಿಕ್​ಗೆ ಸಹ ಈ ಸರಣಿ ಮುಖ್ಯವಾಗಿದ್ದು ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್​​ನಲ್ಲು ಉತ್ತಮ ಪ್ರದರ್ಶನ ತೋರಬೇಕಾದ ಅನಿವಾರ್ಯತೆ ಇದೆ.

ಈ ಹಿಂದೆ 2007ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ಸಂದರ್ಭ ಕಾರ್ತಿಕ್ ಮೂರು ಅರ್ಧಶತಕ ಗಳಿಸಿ ಉತ್ತಮ ಪ್ರದರ್ಶನ ತೋರಿದ್ದರು. ಮೊದಲ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ 60 ರನ್ ಗಳಿಸಿದ್ದ ಕಾರ್ತಿಕ್, ಎರಡನೇ ಪಂದ್ಯದಲ್ಲಿ 77 ಹಾಗೂ ಮೂರನೇ ಟೆಸ್ಟ್ ಪಂದ್ಯದಲ್ಲಿ 91 ರನ್ ಬಾರಿಸಿದ್ದರು. ಇದೀಗ ಕಾರ್ತಿಕ್ ಅವರಿಗೆ ಮತ್ತೆ ಆಂಗ್ಲರ ನಾಡಲ್ಲಿ ಮಿಂಚುವ ಅವಕಾಶ ಸಿಕ್ಕಿದ್ದು, ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರಾ ನೋಡಬೇಕಿದೆ.

ಟೆಸ್ಟ್​ ಕ್ರಿಕೆಟ್​​ನಲ್ಲಿ ಒಟ್ಟು 24 ಪಂದ್ಯಗಳನ್ನು ಆಡಿರುವ ಕಾರ್ತಿಕ್ 1004 ರನ್ ಕಲೆಹಾಕಿದ್ದಾರೆ. ಇದರಲ್ಲಿ ಗರಿಷ್ಠ ಸ್ಕೋರ್ 129 ಆಗಿದ್ದು, 1 ಶತಕ ಹಾಗೂ 7 ಅರ್ಧಶತಕ ಬಾರಿಸಿದ್ದಾರೆ. ಕೀಪಿಂಗ್​​ನಲ್ಲಿ 5 ಸ್ಟಂಪ್ ಮಾಡಿದ್ದು, 51 ಕ್ಯಾಚ್ ಇವರ ಖಾತೆಯಲ್ಲಿದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...