• Home
  • »
  • News
  • »
  • sports
  • »
  • T20 World Cup: ಇನ್ನೂ ಆ ನೋ ಬಾಲ್ ಬಗ್ಗೆನೇ ಮಾತಾಡ್ತಿದ್ದಾರೆ ಪಾಕ್​ ಮಾಜಿ ಆಟಗಾರ!

T20 World Cup: ಇನ್ನೂ ಆ ನೋ ಬಾಲ್ ಬಗ್ಗೆನೇ ಮಾತಾಡ್ತಿದ್ದಾರೆ ಪಾಕ್​ ಮಾಜಿ ಆಟಗಾರ!

ಶಾಹಿದ್​ ಅಫ್ರಿದಿ

ಶಾಹಿದ್​ ಅಫ್ರಿದಿ

ನೋಬಾಲ್ ಕರೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಎರಾಸ್ಮಸ್ ಅದನ್ನು ಸ್ವತಃ ನಿರ್ಧಾರ ತೆಗೆದುಕೊಳ್ಳುವ ಬದಲು ಮೂರನೇ ಅಂಪೈರ್ ಗೆ ನಿರ್ಧಾರ ತಿಳಿಸಲು ಕಳುಹಿಸಬೇಕಿತ್ತು ಅಂತ ಹೇಳಿದರು.

  • Share this:

ಮೆಲ್ಬೋರ್ನ್ ಕ್ರಿಕೆಟ್ (Malborne) ಗ್ರೌಂಡ್ ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ (India Vs Pakistan) ನಡುವಿನ ಟ್ವೆಂಟಿ20 ವಿಶ್ವಕಪ್ ನ ಪಂದ್ಯವು ತುಂಬಾನೇ ರೋಚಕತೆಯಿಂದ ತುಂಬಿತ್ತು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ 40 ಓವರ್ ಗಳ ಪೂರ್ತಿ ಪಂದ್ಯವು ಅನೇಕ ರೋಚಕತೆಗಳಿಂದ ಕೂಡಿತ್ತು ಅಂತ ಹೇಳಬಹುದು. ಮೆಲ್ಬೊರ್ನ್ ಸ್ಟೇಡಿಯಂ (Malborne Stadium) ನಲ್ಲಿ ಪಂದ್ಯ ನೋಡಲು ಬಂದಿದ್ದ 90,000 ಕ್ಕೂ ಹೆಚ್ಚು ಕ್ರಿಕೆಟ್ ಅಭಿಮಾನಿಗಳಿಂದ ಸೃಷ್ಟಿಯಾಗಿದ್ದ ಆ ವಾತಾವರಣ ನೋಡಲು ತುಂಬಾನೇ ರೋಮಾಂಚನವಾಗಿತ್ತು ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಅನೇಕ ರೋಚಕತೆಗಳಿಂದ ಕೂಡಿದ್ದ ಭಾರತ-ಪಾಕ್ ಪಂದ್ಯ


ಸ್ಪೈಡರ್ ಕ್ಯಾಮ್​ನ ಕೇಬಲ್ ನಿಂದಾಗಿ ಪಾಕ್ ಬ್ಯಾಟ್ಸ್​ಮನ್​ ಶಾನ್ ಮಸೂದ್ ಅವರ ವಿಕೆಟ್ ಭಾರತಕ್ಕೆ ಕೈ ತಪ್ಪಿ ಹೋಗಿದ್ದು ಭಾರತೀಯ ಕ್ರಿಕೆಟಿಗರು ಮತ್ತು ಅಭಿಮಾನಿಗಳನ್ನು ತುಂಬಾನೇ ನಿರಾಶೆಗೊಳಿಸಿತು. ಮಧ್ಯೆ ಮಧ್ಯೆ ಮಿಸ್ ಆದ ರನೌಟ್ ಅವಕಾಶಗಳು ಅಭಿಮಾನಿಗಳನ್ನು ನಿರಾಶೆಗೊಳಿಸಿತು.


ಆದರೆ, ಪಂದ್ಯದ ಕೊನೆಯ ಓವರ್ ನಲ್ಲಿ ಮೈದಾನದಲ್ಲಿರುವ ಅಂಪೈರ್ ನೀಡಿದ ನೋ-ಬಾಲ್ ಕರೆ ಮಾತ್ರ ಪಾಕ್ ತಂಡದ ಆಟಗಾರರಿಗೆ ಮತ್ತು ಮಾಜಿ ಆಟಗಾರರಿಗೆ ಸುಲಭವಾಗಿ ಮರೆಯಲು ಆಗುತ್ತಿಲ್ಲ ಅಂತ ಅನ್ನಿಸುತ್ತದೆ.


ಏನಾಯ್ತು ಆ ಕೊನೆಯ ಓವರ್ ನಲ್ಲಿ ನೋಡಿ!


ಪಾಕಿಸ್ತಾನದ ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್ ಅವರು ವಿರಾಟ್ ಕೊಹ್ಲಿಗೆ ಫುಲ್‌ಟಾಸ್ ಎಸೆದಾಗ ಭಾರತಕ್ಕೆ 3 ಎಸೆತಗಳಲ್ಲಿ 13 ರನ್ ಗಳ ಅವಶ್ಯಕತೆಯಿತ್ತು, ಆ ಚೆಂಡು ಸೊಂಟದ ಮೇಲ್ಭಾಗದಲ್ಲಿ ಬಂದರೂ ಸಹ ಅದನ್ನು ಸ್ಕ್ವೇರ್-ಲೆಗ್ ಫೀಲ್ಡರ್ ಮೇಲಿಂದ ಸಿಕ್ಸ್ ಬಾರಿಸುವಲ್ಲಿ ಯಶಸ್ವಿಯಾದರು. ಆ ಚೆಂಡನ್ನು ಹೊಡೆದ ತಕ್ಷಣ, ಕೊಹ್ಲಿ ಅವರು ಸ್ಕ್ವೇರ್ ಲೆಗ್ ನಲ್ಲಿ ನಿಂತಿರುವ ಅಂಪೈರ್ ಮರೈಸ್ ಎರಾಸ್ಮಸ್ ಕಡೆಗೆ ತಿರುಗಿ, ಎತ್ತರವಿದೆ ‘ನೋ-ಬಾಲ್’ ಅಲ್ವಾ ಅಂತ ಕೇಳಿದರು.


ಒಂದೆರಡು ಸೆಕೆಂಡುಗಳ ನಂತರ, ಎರಾಸ್ಮಸ್ ಮನಸ್ಸು ಮಾಡಿ ತನ್ನ ಸಹೋದ್ಯೋಗಿ ರಾಡ್ ಟಕ್ಕರ್ ಗೆ ಇದು ನಿಜವಾಗಿಯೂ ಕೊಹ್ಲಿಯ ಸೊಂಟದ ಮೇಲಿದೆ ಎಂದು ಸಂಜ್ಞೆ ಮಾಡಿದರು. ಆ ಚೆಂಡನ್ನು ನೋ-ಬಾಲ್ ಅಂತ ಹೇಳಿದರು. ಇದು ಭಾರತಕ್ಕೆ ಒಂದು ಫ್ರೀ ಹಿಟ್ ಅನ್ನು ತಂದುಕೊಟ್ಟಿತು, ಇದರಿಂದ ಭಾರತಕ್ಕೆ ಪಂದ್ಯ ಗೆಲ್ಲಲು ಉಳಿದಿರುವ 3 ಎಸೆತಗಳಲ್ಲಿ 6 ರನ್ ಗಳು ಬೇಕಾಗಿದ್ದವು.


ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್​ ​ಶಾಕ್, ತಂಡಕ್ಕೆ ಬೆನ್ನೆಲುಬಾಗಿದ್ದ ಆಟಗಾರನ ಬೆನ್ನಿಗೆ ಗಾಯ! ಮುಂದಿನ ಪಂದ್ಯಕ್ಕೆ ಅಲಭ್ಯ


ಪಾಕಿಸ್ತಾನದ ನಾಯಕ ಬಾಬರ್ ಅಜಮ್, ವೇಗಿ ಶಾಹೀನ್ ಶಾ ಅಫ್ರಿದಿ ಮತ್ತು ಇತರ ಕೆಲವರು ನೋ-ಬಾಲ್ ಕರೆಯನ್ನು ಪ್ರತಿಭಟಿಸಲು ಅಂಪೈರ್ ಗಳ ಬಳಿಗೆ ಬಂದಿದ್ದರು. ಆದರೆ ಆದಾಗಲೇ ಅಂಪೈರ್ ಗಳು ಆ ನಿರ್ಧಾರವನ್ನು ತೆಗೆದುಕೊಂಡಾಗಿತ್ತು.


ಇನ್ನೂ ಮುಂದಿನ ಫ್ರೀ ಹಿಟ್ ಬೌಲ್ ನಲ್ಲಿ ಸ್ವೀಪ್ ಮಾಡುವ ಪ್ರಯತ್ನದಲ್ಲಿ ಕೊಹ್ಲಿ ಅವರು ಬೌಲ್ಡ್ ಆದರು, ಆದರೆ ಅದು ಫ್ರೀ ಹಿಟ್ ಆಗಿದ್ದರಿಂದ, ಕೊಹ್ಲಿ ರನ್ ಓಡಿ ಮೂರು ರನ್ ಗಳನ್ನು ಗಳಿಸಿದರು. ಕೊನೆಗೆ ಭಾರತ ತಂಡವು ನಾಲ್ಕು ವಿಕೆಟ್ ಗಳೊಂದಿಗೆ ಪಂದ್ಯವನ್ನು ಗೆದ್ದುಕೊಂಡಿತು.


'ನೋ-ಬಾಲ್' ನಿರ್ಧಾರದ ಬಗ್ಗೆ ಶಾಹಿದ್ ಅಫ್ರಿದಿ ಹೇಳಿದ್ದೇನು?


ನೋಬಾಲ್ ಕರೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಎರಾಸ್ಮಸ್ ಅದನ್ನು ಸ್ವತಃ ನಿರ್ಧಾರ ತೆಗೆದುಕೊಳ್ಳುವ ಬದಲು ಮೂರನೇ ಅಂಪೈರ್ ಗೆ ನಿರ್ಧಾರ ತಿಳಿಸಲು ಕಳುಹಿಸಬೇಕಿತ್ತು ಅಂತ ಹೇಳಿದರು. ಈ ಹಿಂದೆ ಅಂಪೈರ್ ಗಳು ರನೌಟ್ ಆಗಿದೆಯೋ, ಇಲ್ಲವೋ ಅಂತ ತಿಳಿದುಕೊಳ್ಳಲು ಮೂರನೇ ಅಂಪೈರ್ ಬಳಿಗೆ ನಿರ್ಧಾರಕ್ಕೆ ಸಿಗ್ನಲ್ ನೀಡಿದ ಅನೇಕ ಉದಾಹರಣೆಗಳಿವೆ.


ಇದನ್ನೂ ಓದಿ: ರಾಹುಲ್​ ಮೇಲೆ ಯಾಕಿಷ್ಟು ಕುರುಡು ನಂಬಿಕೆ? ರನ್​ ಬರದಿದ್ರೂ ಚಾನ್ಸ್​ ಕೊಡ್ತಿರೋದು ಆ ಕಾರಣಕ್ಕಾ?


ಅದು ಪಂದ್ಯದ ನಿರ್ಣಾಯಕ ಹಂತವಾಗಿತ್ತು, ಅದನ್ನು ಮೂರನೇ ಅಂಪೈರ್ ಗೆ ಶಿಫಾರಸು ಮಾಡಬೇಕಾಗಿತ್ತು, ಅವರು ಉತ್ತಮ ತೀರ್ಪುಗಾರರಾಗಬಹುದಿತ್ತು. ನೀವು ಇಷ್ಟು ಬೇಗ ನಿರ್ಧಾರ ತೆಗೆದುಕೊಂಡಿದ್ದೀರಿ, ನಿಮಗೆ ಹದ್ದಿನ ಕಣ್ಣುಗಳಿವೆಯೇ" ಎಂದು ಅವರು ಹೇಳಿದರು. ಪಾಕ್ ನ ಮಾಜಿ ಆಟಗಾರರಾದ ವಾಸಿಂ ಅಕ್ರಮ್, ವಕಾರ್ ಯೂನಿಸ್ ಮತ್ತು ಶೋಯೆಬ್ ಅಖ್ತರ್ ಕೂಡ ಅಂಪೈರ್ ಗಳ ಈ ನಿರ್ಧಾರದಿಂದ ಅಸಮಾಧಾನ ಗೊಂಡಿದ್ದಾರೆ.

Published by:ವಾಸುದೇವ್ ಎಂ
First published: