Najeeb Tarakai: ಅಪ್ಘಾನಿಸ್ತಾನದ ಟಾಪ್​ ಬ್ಯಾಟ್ಸ್​​ಮನ್​ ಕಾರು ಅಪಘಾತದಲ್ಲಿ ನಿಧನ

2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಜೀಬ್​ ಪದಾರ್ಪಣೆ ಮಾಡಿದ್ದರು. ಏಷ್ಯಾಕಪ್​ನಲ್ಲಿ ಮೊದಲ ಬಾರಿಗೆ ಬಾಂಗ್ಲಾ ದೇಶದ ವಿರುದ್ಧ ಬ್ಯಾಟ್ ಬೀಸಿದ್ದರು.

ನಜೀಬ್

ನಜೀಬ್

 • Share this:
  ಕಾಬೂಲ್​ (ಅಕ್ಟೋಬರ್ 6): ಕಳೆದವಾರ ನಡೆದಿದ್ದರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಫ್ಘಾನಿಸ್ತಾನದ ಕ್ರಿಕೆಟ್​ ಆಟಗಾರ ನಜೀಬ್​ ತಾರಕೈ (29) ಮಂಗಳವಾರ ಮೃತಪಟ್ಟಿದ್ದಾರೆ. ಅಫ್ಘಾನಿಸ್ತಾನದ ಜಲಾಲಾಬಾದ್​ನ ನಂಗಾಹಾರ್​ ಬಳಿ ಕಳೆದ ಶುಕ್ರವಾರ ನಜೀಬ್​ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಅವರಿಗೆ ಗುದ್ದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಕೋಮಾಗೆ ತೆರಳಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

  ಈ ಬಗ್ಗೆ ಅಫ್ಘಾನಿಸ್ತಾನದ ಕ್ರಿಕೆಟ್​ ಮಂಡಳಿ ಟ್ವೀಟ್​ ಮಾಡುವ ಮೂಲಕ ಈ ವಿಚಾರವನ್ನು ಖಚಿತಪಡಿಸಿದೆ. ಆರಂಭಿಕ ಬ್ಯಾಟ್ಸ್​ಮನ್​ ಹಾಗೂ ಉತ್ತಮ ವ್ಯಕ್ತಿಯನ್ನು ನಾವು ಕಳೆದುಕೊಂಡಿರುವುದಕ್ಕೆ ನಾವು ಸಂತಾಪ ಸೂಚಿಸುತ್ತಿದ್ದೇವೆ. ದೇವರು ಅವರ ಮೇಲೆ ಕರಣು ತೋರಲಿ ಎಂದು ಬರೆದುಕೊಂಡಿದೆ.  2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಜೀಬ್​ ಪದಾರ್ಪಣೆ ಮಾಡಿದ್ದರು. ಏಷ್ಯಾಕಪ್​ನಲ್ಲಿ ಮೊದಲ ಬಾರಿಗೆ ಬಾಂಗ್ಲಾ ದೇಶದ ವಿರುದ್ಧ ಬ್ಯಾಟ್ ಬೀಸಿದ್ದರು. ಅಪ್ಘಾನಿಸ್ತಾನ ಪರ 12 ಟಿ20ಗಳನ್ನು ಇವರು ಆಡಿದ್ದಾರೆ. ಗ್ರೇಟರ್​ ನೋಯ್ಡಾದಲ್ಲಿ ನಡೆದ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಅವರು 90 ರನ್​ ಬಾರಿಸಿದ್ದರು. ನಂತರ ಅವರನ್ನು ಯಾವುದೇ ಟೂರ್ನಮೆಂಟ್​ ಆಯ್ಕೆ ಮಾಡಿಕೊಂಡಿರಲಿಲ್ಲ.
  Published by:Rajesh Duggumane
  First published: