ಬೆಂಗಳೂರು: ಎಎಫ್ಸಿ ಕಪ್ ಫುಟ್ಬಾಲ್ ಟೂರ್ನಿಯಂದ ಹೊರಬೀಳುವ ಮುನ್ನ ಬೆಂಗಳೂರು ಫುಟ್ಬಾಲ್ ಕ್ಲಬ್ ಕೊನೆಗೂ ಒಂದು ಗೆಲುವು ಕಾಣುವಲ್ಲಿ ಸಫಲವಾಗಿದೆ. ನಿನ್ನೆ ನಡೆದ ಡಿ ಗ್ರೂಪ್ ಪಂದ್ಯದಲ್ಲಿ ಮಾಲ್ಡೀವ್ಸ್ ದೇಶದ ಮಾಝಿಯಾ ಕ್ಲಬ್ ವಿರುದ್ಧ ಬೆಂಗಳೂರು 6-2 ಗೋಲುಗಳಿಂದ ಅಮೋಘ ಗೆಲುವು ಪಡೆಯಿತು. ಆದರೆ, ಬೆಂಗಳೂರಿನ ಮುನ್ನಡೆಗೆ ಈ ಗೆಲುವು ಯಾವ ಸಹಾಯವನ್ನೂ ಮಾಡದೇ ಹೋದರೂ ಮಾನ ಉಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ, ಇದೇ ಗುಂಪಿನಿಂದ ಭಾರತದ ಮತ್ತೊಂದು ಕ್ಲಬ್ ಎಟಿಕೆ ಮೋಹನ್ ಬಗಾನ್ ಅಗ್ರಸ್ಥಾನ ಗಳಿಸಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿತು. ನಿನ್ನೆ ನಡೆದ ಪಂದ್ಯದಲ್ಲಿ ಮೋಹನ್ ಬಗಾನ್ ತಂಡ ಬಾಂಗ್ಲಾದೇಶದ ಚಾಂಪಿಯನ್ ಬಶುಂಧರಾ ಕಿಂಗ್ಸ್ ವಿರುದ್ಧ ಡ್ರಾ ಮಾಡಿಕೊಂಡಿತು. ಬೆಂಗಳೂರು ಎಫ್ಸಿ ಮತ್ತು ಮಾಜಿಯಾ ವಿರುದ್ಧ ಗೆಲುವು ಪಡೆದಿದ್ದ ಮೋಹನ್ ಬಗಾನ್ ಅಗ್ರಸ್ಥಾನದೊಂದಿಗೆ ಕ್ವಾರ್ಟರ್ಫೈನಲ್ ಪ್ರವೇಶ ಮಾಡಿತು.
ಡಿ ಗುಂಪಿನಲ್ಲಿ ಮೋಹನ್ ಬಗಾನ್ 7 ಪಾಯಿಂಟ್ ಕಲೆಹಾಕಿದರೆ ಬಶುಂಧರಾ ಕಿಂಗ್ಸ್ 5 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಬೆಂಗಳೂರು 4 ಅಂಕಗಳಿಗೆ ತೃಪ್ತಿಪಡಬೇಕಾಯಿತು. ಮಾಝಿಯಾಗೆ ಒಂದೂ ಅಂಕ ಸಿಗದೆ ಕೊನೆಯ ಸ್ಥಾನ ಪಡೆಯಿತು. ಇದೀಗ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿರುವ ಮೋಹನ್ ಬಗಾನ್ ತಂಡಕ್ಕೆ ಉಜ್ಬೆಕಿಸ್ತಾನದ ನಸಾಫ್ ಕ್ಲಬ್ ಅಥವಾ ತುರ್ಕಮೆನಿಸ್ತಾನದ ಅಹಾಲ್ ಎಫ್ಸಿ ತಂಡ ಕ್ವಾರ್ಟರ್ ಫೈನಲ್ನಲ್ಲಿ ಎದುರುಗೊಳ್ಳುವ ನಿರೀಕ್ಷೆ ಇದೆ. ಒಂದು ವೇಳೆ ಆ ಪಂದ್ಯವನ್ನ ಮೋಹನ್ ಬಗಾನ್ ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ ಹಾಂಕಾಂಗ್ನ ಲೀ ಮಾನ್ ಕ್ಲಬ್ನ ಸವಾಲನ್ನು ಎದುರಿಸಲಿದೆ.
ಇದನ್ನೂ ಓದಿ: Petrol Diesel Cheaper- ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ; ಕರ್ನಾಟಕದ ವಿವಿಧೆಡೆ ಇವತ್ತಿನ ರೇಟ್ ವಿವರ
ಭಾರತದ ಯಾವ ಫುಟ್ಬಾಲ್ ತಂಡವೂ ಎಎಫ್ಸಿ ಕಪ್ ಅನ್ನು ಗೆದ್ದಿದ್ದಿಲ್ಲ. ಬೆಂಗಳೂರು ತಂಡ ಫೈನಲ್ ತಲುಪಿದ್ದೇ ಈವರೆಗಿನ ಗರಿಷ್ಠ ಸಾಧನೆಯಾಗಿದೆ. ಈ ಬಾರಿ ಮೋಹನ್ ಬಗಾನ್ ತಂಡ ಪ್ರಶಸ್ತಿ ಗೆಲ್ಲುತ್ತದಾ ಎಂದು ಕಾದುನೋಡಬೇಕು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ