Aditi Ashok: ಟೋಕಿಯೋ ಒಲಂಪಿಕ್ಸ್‌ಗೆ ಅರ್ಹತೆ ಪಡೆದ ಬೆಂಗಳೂರಿನ ಗಾಲ್ಫರ್ ಅದಿತಿ ಅಶೋಕ್

ಟೋಕಿಯೋ ಒಲಂಪಿಕ್‍ಗೆ ಆಯ್ಕೆಯಾಗುವ ಮೂಲಕ ಗಾಲ್ಫಗೆ ಅರ್ಹತೆ ಪಡೆದ ಮೊದಲ ಭಾರತದ ಮಹಿಳೆ ಎಂಬ ಖ್ಯಾತಿ ಕೂಡ ಅತಿಥಿ ಪಡೆದಿದ್ದಾರೆ.

ಅದಿತಿ ಅಶೋಕ್

ಅದಿತಿ ಅಶೋಕ್

  • Share this:

ಬೆಂಗಳೂರು ಮೂಲದ ಅದಿತಿ ಅಶೋಕ್ ಗಾಲ್ಫರ್ ಆಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಮುಂಬರುವ ಟೋಕಿಯೋ ಒಲಂಪಿಕ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಟೋಕಿಯೋ ಒಲಂಪಿಕ್ಸ್‍ಗೆ ಅರ್ಹತೆ ಪಡೆದ ಮೊದಲ ಮಹಿಳಾ ಗಾಲ್ಫರ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. 2016ರಲ್ಲಿ ನಡೆದ ಒಲಂಪಿಕ್‍ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅದಿತಿ, ಈ ಎರಡನೇ ಬಾರಿಯೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಈ ಮೂಲಕ ಗಾಲ್ಫರ್ ಆಟದಲ್ಲಿರುವ ಶ್ರದ್ಧೆ, ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೆರೆದಿಡಲು, ಭಾರತಕ್ಕೆ ಪದಕದ ಗರಿ ಮೂಡಿಸಲು ಮತ್ತೊಮ್ಮೆ ಸಜ್ಜಾಗುತ್ತಿದ್ದಾರೆ.


ಗಾಲ್ಫರ್ ಅದಿತಿ ಅಶೋಕ್‍ಗೆ ಆಯ್ಕೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಕೂಡ ಸಂತಸ ವ್ಯಕ್ತಪಡಿಸಿ ಟ್ವೀಟ್​ ಮಾಡಿದೆ. ಟೋಕಿಯೋ ಒಲಂಪಿಕ್‍ಗೆ ಆಯ್ಕೆಯಾಗುವ ಮೂಲಕ ಗಾಲ್ಫಗೆ ಅರ್ಹತೆ ಪಡೆದ ಮೊದಲ ಭಾರತದ ಮಹಿಳೆ ಎಂಬ ಖ್ಯಾತಿ ಕೂಡ ಅತಿಥಿ ಪಡೆದಿದ್ದಾರೆ. ಒಲಂಪಿಕ್ ಶ್ರೇಯಾಂಕದ ಅಂತಿಮಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಅದಿತಿ ಅಶೋಕ್ ಹೆಸರು 45ನೇ ಶ್ರೇಯಾಂಕ ಪಡೆದಿದ್ದಾರೆ. ಇವರು ಎರಡನೇ ಒಲಂಪಿಕ್ ಆಡಲು ತೆರಳಲಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಿಳಿಸಿದೆ.


ಈ ಖುಷಿಯನ್ನು ಹಂಚಿಕೊಂಡ ಅದಿತಿ ಅಶೋಕ್, ರಿಯೋ ಒಲಂಪಿಕ್ 2016 ನಿನ್ನೆ ಮುಗಿದಂತೆ ಭಾಸವಾಗುತ್ತಿದೆ. ಒಲಂಪಿಕ್​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ. ಅಲ್ಲದೇ ಟೋಕಿಯೋ ಒಲಂಪಿಕ್‍ನಲ್ಲಿ ನನ್ನ ಆಟದ ಮಾದರಿಯನ್ನು ಅನಾವರಣ ಮಾಡಲು ನಾನು ಉತ್ಸುಕಳಾಗಿದ್ದೇನೆ. ಗಾಲ್ಫರ್ ಆಟದ ಮೂಲಕ ಪುನಃ ನನ್ನ ದೇಶ ಮತ್ತು ನನ್ನ ಆಟವನ್ನು ಪ್ರತಿನಿಧಿಸುವ ಅವಕಾಶ ದೊರೆತಿದೆ ಎಂದು ಟ್ವೀಟ್ ಮಾಡಿದ್ದಾರೆ.


ಕಳೆದ ವಾರ ಭಾರತದ ಗಾಲ್ಫರ್ ಆಟಗಾರ ಅನಿರ್ಬನ್ ಲಹಿರಿ ಹಾಗೂ ಉದಯನ್ ಮಾನೆ ಅವರು ಕೂಡ ಎರಡನೇ ಬಾರಿಗೆ ಒಲಂಪಿಕ್‍ಗೆ ಆಯ್ಕೆಯಾಗುವ ಮೂಲಕ ಭಾರತದ ಕೀತಿ ಪತಾಕೆ ಹಾರಿಸುವ ಭರವಸೆ ನೀಡಿದ್ದರು. 33 ವರ್ಷದ ಅನಿರ್ಬನ್ ಲಹಿರಿ 60ನೇ ರ್ಯಾಂಕೆ ಪಡೆಯುವ ಮೂಲಕ ಟೋಕಿಯೋ ಒಲಂಪಿಕ್‍ಗೆ ಆಯ್ಕೆಯಾಗಿದ್ದರು.


ಇದನ್ನು ಓದಿ: ಈ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಹಾತೊರೆಯುತ್ತಿರುತ್ತರಂತೆ ಉದ್ಯೋಗಿಗಳು

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಕಳೆದ ವರ್ಷ ಆಯೋಜನೆಗೊಂಡಿದ್ದ ಒಲಿಂಪಿಕ್ ಕೋವಿಡ್-19 ಭೀತಿ ಹಿನ್ನೆಲೆ ಮುಂದೂಡಲಾಗಿತ್ತು. ಟೋಕಿಯೋ ಒಲಂಪಿಕ್ 2020ರ ಜುಲೈ 24 ರಿಂದ ಆಗಸ್ಟ್ 9ರವರೆಗೆ ಆಯೋಜಿಸಲಾಗಿತ್ತು. ಇವರ ಜೊತೆ ಭಾರತದ ಈಜು ಪಟು ಶ್ರೀಹರಿ ನಟರಾಜು ಕೂಡ ಟೋಕಿಯೋ ಒಲಂಪಿಕ್‍ಗೆ ಅರ್ಹತೆ ಪಡೆದ್ದಿದಾರೆ.


ಯಾರಿದು ಅದಿತಿ ಅಶೋಕ್?


ಭಾರತೀಯ ವೃತ್ತಿಪರ ಗಾಲ್ಫರ್ ಆದ ಅದಿತಿ ಅಶೋಕ್ ಹುಟ್ಟಿದ್ದು 29 ಮಾರ್ಚ್ 1998ರಲ್ಲಿ. ಅದಿತಿ ಅವರು ಗಾಲ್ಫನಲ್ಲಿ ಲಲ್ಲಾ ಐಛಾ ಪ್ರವಾಸ ಶಾಲೆ ಗೆಲ್ಲುವ ಮೂಲಕ ಇತಿಹಾಸ ಬರೆದರು, ಈ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಮತ್ತು ಮೊದಲ ಭಾರತೀಯ ಯುವತಿ ಎಂಬ ಖ್ಯಾತಿ ಪಡೆದರು. ಈ ಪ್ರಶಸ್ತಿ ಗೆದ್ದ ಬಳಿಕ 2016 ಮಹಿಳೆಯರ ಯುರೋಪಿಯನ್ ಪ್ರವಾಸಕ್ಕೆ ಅರ್ಹತೆ ಪಡೆದರು. ಈ ಗೆಲುವಿನ ಮೂಲಕ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಅರ್ಹತೆ ಪಡೆದ ಅತ್ಯಂತ ಕಿರಿಯ ವಿಜೇತೆ ಇವರಾದರು. 2016 ರ ಬೇಸಿಗೆ ಒಲಿಂಪಿಕ್ಸ್ ಸಹ ಅರ್ಹತೆ ಪಡೆದಿದ್ದರು. ಇದೀಗ ಟೋಕಿಯೋ ಒಲಂಪಿಕ್‍ಗೂ ಆಯ್ಕೆಯಾಗುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.


First published: