ಟೀಂ ಇಂಡಿಯಾ ಕಟ್ಟಿಹಾಕಲು ಮಾಜಿ ಆಟಗಾರನ ಮೊರೆ ಹೋದ ಇಂಗ್ಲೆಂಡ್

news18
Updated:July 26, 2018, 10:31 PM IST
ಟೀಂ ಇಂಡಿಯಾ ಕಟ್ಟಿಹಾಕಲು ಮಾಜಿ ಆಟಗಾರನ ಮೊರೆ ಹೋದ ಇಂಗ್ಲೆಂಡ್
news18
Updated: July 26, 2018, 10:31 PM IST
ಸಾಗರ್​ ಕನ್ನೆಮನೆ, ನ್ಯೂಸ್​ 18 ಕನ್ನಡ

ಆಗಸ್ಟ್​ 1 ರಿಂದ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ದಿನದಿಂದ ದಿನಕ್ಕೇ  ಕುತೂಹಲವನ್ನು ಹೆಚ್ಚಿಸುತ್ತಿದೆ. ಜಿದ್ದಾಜಿದ್ದಿಯ ಫೈಟ್​ ಎಂದೇ ಬಿಂಬಿತವಾಗುತ್ತಿರುವ ಇಂಡೋ-ಆಂಗ್ಲೋ ಕದನಕ್ಕೆ​​​​​ಗೆ ಉಭಯ ತಂಡಗಳು ಭರ್ಜರಿಯಾಗಿ ಸಿದ್ಧಗೊಳ್ಳುತ್ತಿವೆ. ಎದುರಾಳಿಯ ಸ್ಟಾರ್​ ಆಟಗಾರರನ್ನು ಕೆಡವಲು ತನ್ನದೇ ಆದ ರಣತಂತ್ರ​ ಕೂಡ ತಯಾರು ಮಾಡುತ್ತಿವೆ. ಆದರೀಗ ಒಂದು ಹೆಜ್ಜೆ ಮುಂದಿಟ್ಟಿರುವ ಇಂಗ್ಲೆಂಡ್ ತಂಡ,​ ಮಾಜಿ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಇಂಗ್ಲೆಂಡ್​ ತಂಡಕ್ಕೆ ಸೇರಿಸಿಕೊಂಡಿರುವ ಆ ಮಾಜಿ ಪ್ಲೇಯರ್ ಏಕದಿನ ಸರಣಿಯಲ್ಲಿ ಭಾರತಕ್ಕೆ ಆಘಾತ ನೀಡಿದ ಲೆಗ್​ ಸ್ಪಿನ್ನರ್ ಆದಿಲ್​ ರಶೀದ್​​. ಈಗಾಗಲೇ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿರುವ ಆದಿಲ್​ ರಶೀದ್​​ಗೆ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಿದೆ. ಈ ನಡುವೆ ತಾನು ನಿಗದಿತ ಓವರ್ ಕ್ರಿಕೆಟ್ ನತ್ತ ಗಮನ ಹರಿಸಬೇಕಾದ ಅಗತ್ಯವಿದೆ ಎಂದೂ ರಶೀದ್ ಹೇಳಿಕೊಂಡಿದ್ದಾರೆ. ಇನ್ನು ಕಳೆದ ಏಕದಿನ ಸರಣಿಯ 2 ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಆದಿಲ್ ರಶೀದ್ ಸ್ಪಿನ್ ಮೋಡಿಗೆ ಬಲಿಯಾಗಿದ್ದಾರೆ. ಇಷ್ಟೇ ಅಲ್ಲ, ಟೀಂ ಇಂಡಿಯಾದ ಇತರೇ ಬ್ಯಾಟ್ಸ್‌ಮನ್‌ಗಳು ಕೂಡ ರಶೀದ್ ಸ್ಪಿನ್​ ತಂತ್ರ ಎದುರಿಸಲು ಪರದಾಡಿದ್ದಾರೆ. ಹೀಗಾಗಿ ಈಗಾಗಲೇ ಟೆಸ್ಟ್ ಮಾದರಿಯಿಂದ ನಿವೃತ್ತಿ ಪಡೆದಿರುವ ಆದಿಲ್ ರಶೀದ್‌ಗೆ ಮೊದಲ ಟೆಸ್ಟ್​ 13 ಆಟಗಾರರ ಸ್ಕ್ವಾಡ್​ನಲ್ಲಿ ಸ್ಥಾನ ನೀಡಲಾಗಿದೆ.

ಇನ್ನು ಈ ಆಯ್ಕೆ ಕುರಿತು ಸ್ವತಃ ರಶೀದ್ ಅವರಿಗೆ  ಆಶ್ಚರ್ಯವಾಗಿದೆಯಂತೆ. ರಶೀದ್ ಅವರೇ ಹೇಳುವಂತೆ ಅವರಿನ್ನೂ ಟೆಸ್ಟ್ ಕ್ರಿಕೆಟ್​ಗೆ ಸಂಪೂರ್ಣ ಸಜ್ಜಾಗಿಲ್ಲವಂತೆ. ಈ ಹಿಂದೆ ಯಾರ್ಕ್​ ಶೈರ್ ಪರ ವೈಟ್ ಬಾಲ್ ಕ್ರಿಕೆಟ್ ಆಡಲು ಸಹಿ ಮಾಡಿದ್ದ ಈವರ ಆಯ್ಕೆ ನಿಜಕ್ಕೂ ಅಚ್ಚರಿ ತಂದಿದೆ ಎಂದು ಯಾರ್ಕ್​ ಶೈರ್ ತಿಳಿಸಿದೆ. ಜೊತೆಗೆ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್​ ಇದೊಂದು ಹಾಸ್ಯಾಸ್ಪದ ನಿರ್ಧಾರ ಎಂದಿದ್ದಾರೆ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ