• Home
  • »
  • News
  • »
  • sports
  • »
  • T20 World Cup: ಕಿಂಗ್ ಕೊಹ್ಲಿ ಕಂಡು ಆಸ್ಟ್ರೇಲಿಯಾದ ಮಾಜಿ ಆಟಗಾರ ಮಾಡಿದ್ದೇನು? ವಿಡಿಯೋ ಸಿಕ್ಕಾಪಟ್ಟೆ ವೈರಲ್!

T20 World Cup: ಕಿಂಗ್ ಕೊಹ್ಲಿ ಕಂಡು ಆಸ್ಟ್ರೇಲಿಯಾದ ಮಾಜಿ ಆಟಗಾರ ಮಾಡಿದ್ದೇನು? ವಿಡಿಯೋ ಸಿಕ್ಕಾಪಟ್ಟೆ ವೈರಲ್!

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ

ಡೇಲ್ ಸ್ಟೇನ್ ಅವರೊಂದಿಗೆ ಮಾತನಾಡುತ್ತಾ ನಿಂತ ಕೊಹ್ಲಿ ಅವರ ಬಳಿ ಇದ್ದಕಿದ್ದಂತೆಯೇ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್ ಅವರು ಭಾವೋದ್ರಿಕ್ತವಾಗಿ ಸ್ವಾಗತಿಸಿದರು ಅಂತಾನೆ ಹೇಳಬಹುದು.

  • Share this:

ಈಗಾಗಲೇ ಭಾರತ ಪುರುಷರ ಕ್ರಿಕೆಟ್ ತಂಡವು (Team India Cricket Team) ಟ್ವೆಂಟಿ20 ವಿಶ್ವಕಪ್ (T20 World Cup) ನಲ್ಲಿ ಸತತವಾಗಿ ಎರಡು ಪಂದ್ಯಗಳನ್ನು ಭರ್ಜರಿ ಪ್ರದರ್ಶನ ನೀಡುವುದರೊಂದಿಗೆ ಶುರು ಮಾಡಿದ್ದು, ಅಭಿಮಾನಿಗಳಿಗೆ ಈ ಬಾರಿ ದೀಪಾವಳಿಯ ಭರ್ಜರಿ ಉಡುಗೊರೆ (Deepavali Big Gift) ನೀಡಿದಂತಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಟ್ವೆಂಟಿ20 ವಿಶ್ವಕಪ್ ನಲ್ಲಿ ಮೊದಲ ಪಂದ್ಯದಲ್ಲಿ ತನ್ನ ಕಟ್ಟಾ ಎದುರಾಳಿಯಾದ ಪಾಕಿಸ್ತಾನ (Pakistan) ಕ್ರಿಕೆಟ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದರು. 33 ವರ್ಷದ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ (Virat Kohli) ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು, ಕೇವಲ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು.


ಕೊಹ್ಲಿ ಕಂಡು ಗಿಲ್​ಕ್ರಿಸ್ಟ್​ ಏನ್ ಮಾಡಿದ್ರೂ ಗೊತ್ತಾ?


ನಿನ್ನೆ ನೆದರ್ಲ್ಯಾಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ, ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಆಟಗಾರ ಡೇಲ್ ಸ್ಟೇನ್ ಅವರೊಂದಿಗೆ ಮಾತನಾಡುತ್ತಾ ನಿಂತ ಕೊಹ್ಲಿ ಅವರ ಬಳಿ ಇದ್ದಕಿದ್ದಂತೆಯೇ ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್ ಅವರು ಭಾವೋದ್ರಿಕ್ತವಾಗಿ ಸ್ವಾಗತಿಸಿದರು ಅಂತಾನೆ ಹೇಳಬಹುದು.


ವಿರಾಟ್ ಕೊಹ್ಲಿ ಅವರ ಕೈಕುಲುಕಿದ ಆ್ಯಡಂ ಗಿಲ್ಕ್ರಿಸ್ಟ್


ನಾವು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಬರ ಮಾಡಿಕೊಳ್ಳಲು ಅಥವಾ ಅಭಿನಂದನೆಗಳನ್ನು ತಿಳಿಸಲು ಸುಮ್ಮನೆ ಹೋಗಿ ಅವರ ಕೈಕುಲುಕುತ್ತೇವೆ. ಅದೇ ಒಬ್ಬ ವ್ಯಕ್ತಿಯು ನಮಗೆ ತುಂಬಾನೇ ಇಷ್ಟವಾದರೆ ಅವರನ್ನು ತುಂಬಾನೇ ಉತ್ಸಾಹದಿಂದ ಖುಷಿಯಿಂದ ಬರಮಾಡಿಕೊಳ್ಳುತ್ತೇವೆ. ತುಂಬಾನೇ ಜೋಶ್ ನಿಂದ ಅವರ ಕೈಕುಲುಕುತ್ತೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ವೈರಲ್ ಸಹ ಆಗಿದೆ ನೋಡಿ.


ವಿಡಿಯೋದಲ್ಲಿ ಆ್ಯಡಂ ಗಿಲ್‌ಕ್ರಿಸ್ಟ್ ಅವರು ಬಂದು ವಿರಾಟ್ ಅವರ ಕೈ ಜೋರಾಗಿ ಕುಲುಕಿ ಅವರಿಗೆ ಅವರ ಪ್ರದರ್ಶನಗಳ ಬಗ್ಗೆ ಅಭಿನಂದನೆ ಸಲ್ಲಿಸಿ ಮತ್ತು ಪರ್ತ್ ಗೆ ಸ್ವಾಗತಿಸಿದರು. ಅಲ್ಲದೆ ಇಷ್ಟಕ್ಕೆ ಸುಮ್ಮನಾಗದೆ ಆ್ಯಡಂ ಗಿಲ್‌ಕ್ರಿಸ್ಟ್ ಅವರು ವಿರಾಟ್ ಅವರ ಭುಜವನ್ನು ತಟ್ಟಿ ಅವರಿಗೆ ತಮ್ಮ ಹೆಬ್ಬೆರಳು ತೋರಿಸಿ ಥಂಬ್ಸ್-ಅಪ್ ಎಂದರು. ಇದಕ್ಕೆ ವಿರಾಟ್ ಅವರು ಗಿಲ್‌ಕ್ರಿಸ್ಟ್ ಅವರನ್ನು ಅಷ್ಟೇ ಖುಷಿಯಿಂದ ಮಾತಾಡಿಸಿದರು.


ಇದನ್ನೂ ಓದಿ: ಬಿಸಿಸಿಐ ಐತಿಹಾಸಿಕ ನಿರ್ಧಾರ, ಮಹಿಳಾ ಕ್ರಿಕೆಟಿಗರಿಗೂ ಪುರುಷರಷ್ಟೇ ಸಮಾನ ವೇತನಪಾಕಿಸ್ತಾನ ವಿರುದ್ಧದ ಅದ್ಭುತ ಪ್ರದರ್ಶನಕ್ಕಾಗಿ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 160 ರನ್ ಚೇಸ್ ನಲ್ಲಿ ಹಾರ್ದಿಕ್ ಪಾಂಡ್ಯ (40) ಜೊತೆಗೂಡಿದ ಕೊಹ್ಲಿ ಐದನೇ ವಿಕೆಟ್ ಗೆ 113 ರನ್ ಗಳ ಜತೆಯಾಟವಾಡುವ ಮೂಲಕ ಭಾರತವನ್ನು ಮತ್ತೆ ಆಟಕ್ಕೆ ಮರಳಿಸಿದರು.


ನೆದರ್ಲ್ಯಾಂಡ್ ವಿರುದ್ಧ ಭಾರತಕ್ಕೆ 56 ರನ್ ಗಳ ಜಯ!


ಗುರುವಾರ ನಡೆದ ಟಿ20 ವಿಶ್ವಕಪ್ ನ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ ವಿರುದ್ಧ ಟೀಮ್ ಇಂಡಿಯಾ 56 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಪ್ರಬಲ ಆಲ್‌ರೌಂಡ್ ಪ್ರದರ್ಶನವನ್ನು ನೀಡಿತು. ಮೊದಲು 20 ಓವರ್ ಗಳಲ್ಲಿ 179/2 ಸ್ಕೋರ್ ಮಾಡಿತು. ನಂತರ ಬ್ಯಾಟ್ ಮಾಡಿದ ನೆದರ್ಲ್ಯಾಂಡ್ ತಂಡವು 123/9 ಕ್ಕೆ ಸೀಮಿತವಾಯಿತು. ಈ ಗೆಲುವಿನೊಂದಿಗೆ ಭಾರತ ತನ್ನ ಗುಂಪಿನಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.


ಇದನ್ನೂ ಓದಿ: ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ನೆದರ್ಲ್ಯಾಂಡ್ಸ್, ಭಾರತಕ್ಕೆ ಸುಲಭ ಜಯ


44 ಎಸೆತಗಳಲ್ಲಿ 62 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಗೆ ಇದು ಮತ್ತೊಂದು ಅದ್ಭುತ ಪಂದ್ಯವಾಗಿತ್ತು. ಕೆಎಲ್ ರಾಹುಲ್ ಬೇಗನೆ ಔಟಾದ ನಂತರ ಕೊಹ್ಲಿ ಅವರು ಕಣಕ್ಕಿಳಿದರು. ರೋಹಿತ್ (53) ಅವರೊಂದಿಗೆ 73 ರನ್ ಗಳ ಜೊತೆಯಾಟವಾಡಿದ ಕೊಹ್ಲಿ, ನಂತರ ಸೂರ್ಯಕುಮಾರ್ ಯಾದವ್ (51*) ಅವರೊಂದಿಗೆ ಎರಡನೇ ವಿಕೆಟ್ ಗೆ ಮುರಿಯದ 95 ರನ್ ಗಳ ಜೊತೆಯಾಟ ನೀಡಿದರು. ಭಾರತ ತಂಡವು ಪರ್ತ್ ನಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ.

Published by:ವಾಸುದೇವ್ ಎಂ
First published: