Shah Rukh Khan: ಶಾರುಖ್ ಈಗ ಮಹಿಳಾ ಕ್ರಿಕೆಟ್ ತಂಡದ ಮಾಲೀಕ, ಕೆರಿಬಿಯನ್​ ಲೀಗ್​ಗೂ ಕಾಲಿಟ್ಟ SRK

ನಟ ಶಾರುಖ್ ಖಾನ್ ಈ ಬಾರಿ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದರೆ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂದು ಮಹಿಳಾ ಕ್ರಿಕೆಟ್ ತಂಡವನ್ನು ಇವರು ಖರೀದಿ ಮಾಡಿದ್ದಾರೆ.

ಶಾರುಖ್ ಖಾನ್

ಶಾರುಖ್ ಖಾನ್

  • Share this:
ಐಪಿಎಲ್ ಮುಗಿದು ತಿಂಗಳುಗಳೇ ಕಳೆಯುತ್ತಾ ಬಂದಿದೆ. ಎಲ್ಲರೂ ಸಹ ಮುಂದಿನ ವರ್ಷದ ಐಪಿಎಲ್ ಸೀಸನ್​ ಗಾಗಿ ಕಾಯುತ್ತಿದ್ದಾರೆ. ಇದರ ನಡುವೆ ಐಸಿಸಿ ಟಿ20 ವಿಶ್ವಕಪ್ ಸಹ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಹೀಗಾಗಿ ಈ ಬಾರಿ ಕ್ರೀಡಾಭಿಮಾನಿಗಳಿಗೆ ಅದರಲ್ಲಿಯೂ ಕ್ರಿಕೆಟ್​ ಪ್ರೇಮಿಗಳಿಗೆ ರಸದೌತಣವಾಗಿದೆ. ಇದರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ನ ಸಹ-ಮಾಲೀಕತ್ವವನ್ನು ಹೊಂದಿರುವ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಕ್ರಿಕೆಟ್ ಪ್ರೀತಿ ಎಲ್ಲರಿಗೂ ತಿಳಿದಿದೆ . ಅಲ್ಲದೆ, ತನ್ನ ಕ್ರೇಜ್ ಅನ್ನು ವಿಸ್ತರಿಸುತ್ತಾ, ಅವರು ಈಗ ಮಹಿಳಾ ಕ್ರಿಕೆಟ್‌ ನತ್ತಲೂ ಕಾಲಿಟ್ಟಿದ್ದಾರೆ. ಹೌದು, ನಟ ಶಾರುಖ್ ಖಾನ್ ಈ ಬಾರಿ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದರೆ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂದು ಮಹಿಳಾ ಕ್ರಿಕೆಟ್ ತಂಡವನ್ನು ಇವರು ಖರೀದಿ ಮಾಡಿದ್ದಾರೆ.

ಮಹಿಳಾ ತಂಡವನ್ನು ಖರೀದಿಸಿದ ಶಾರುಖ್:

ಹೌದು, ಶಾರೂಖ್ ಖಾನ್ ಅವರು ಈ ಬಾರಿ ಮಹಿಳಾ ಕೆರೆಬಿಯನ್ ಟೂರ್ನಿಯಲ್ಲಿ ಒಂದು ಮಹಿಳಾ ತಂಡವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಕುರಿತು ಅವರೇ ಸ್ವತಃ ಟ್ವೀಟರ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ‘ತಮ್ಮ ನೈಟ್ ರೈಡರ್ಸ್ ಫ್ರಾಂಚೈಸಿ ಇದೀಗ ಮೊದಲ ಬಾರಿಗೆ ಮಹಿಳಾ ತಂಡದ ಮಾಲೀಕತ್ವವನ್ನು ಪಡೆದುಕೊಂಡಿದೆ. ಮಹಿಳಾ ತಂಡವನ್ನು 'ಟ್ರಿನ್‌ಬಾಗೊ ನೈಟ್ ರೈಡರ್ಸ್' ಎಂದು ಹೆಸರಿಸಲಾಗಿದೆ ಮತ್ತು ಉದ್ಘಾಟನಾ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದೆ‘ ಎಂದು ಹೇಳಿದ್ದಾರೆ.

3 ತಂಡಗಳ ಮಾಲೀಕರು ಎಸ್​ಆರ್​ಕೆ:

ಇನ್ನು , ಟ್ರಿನ್‌ಬಾಗೊ ನೈಟ್ ರೈಡರ್ಸ್ ಹೊರತಾಗಿ, ಎಸ್‌ಆರ್‌ಕೆ ಜೂಹಿ ಚಾವ್ಲಾ ಅವರೊಂದಿಗೆ ಮೂರು ಕ್ರಿಕೆಟ್ ತಂಡಗಳನ್ನು ಸಹ-ಮಾಲೀಕತ್ವವನ್ನು ಹೊಂದಿದೆ. ಕೋಲ್ಕತ್ತಾ ನೈಟ್ ರೈಡರ್ಸ್, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮತ್ತು ಅಬುಧಾಬಿ ನೈಟ್ ರೈಡರ್ಸ್ ತಂಡವನ್ನು ಶಾರುಖ್ ಹೊಂದಿದ್ದಾರೆ.

ಇದನ್ನೂ ಓದಿ: IPL Media Rights: ಒಂದು ಪಂದ್ಯಕ್ಕೆ 107.5 ಕೋಟಿಗೆ ಮಾರಾಟವಾಯ್ತು ಐಪಿಎಲ್ ಪ್ರಸಾರ ಹಕ್ಕು!

SRK ಅವರ ನಿವ್ವಳ ಮೌಲ್ಯ :

ಸಹ-ಮಾಲೀಕರಾಗಿದ್ದರೂ, ಎಸ್‌ಆರ್‌ಕೆ ಐಪಿಎಲ್ ಕ್ರಿಕೆಟ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್‌ನ ಬಹುಪಾಲು ಮಾಲೀಕರಾಗಿದ್ದಾರೆ. ಅವರು 448 ಕೋಟಿ ರೂಪಾಯಿಗಳ ಕೊನೆಯ ಆದಾಯವನ್ನು ಹೊಂದಿದ್ದ ತಂಡದ 55% ಅನ್ನು ಹೊಂದಿದ್ದಾರೆ. ವೃತ್ತಿಪರ ಮುಂಭಾಗದಲ್ಲಿ, ಶಾರುಕ್ ನಾಲ್ಕು ವರ್ಷಗಳ ನಂತರ ಅವರ ಮುಂಬರುವ ಚಿತ್ರ 'ಪಠಾಣ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಪ್ರಸ್ತುತ ಹೈದರಾಬಾದ್‌ನಲ್ಲಿ ನಯನತಾರಾ ಜೊತೆಗೆ ಅವರ ಪ್ಯಾನ್-ಇಂಡಿಯಾ ಚಿತ್ರ 'ಜವಾನ್' ಚಿತ್ರೀಕರಣದಲ್ಲಿದ್ದಾರೆ.

ಇದನ್ನೂ ಓದಿ: Jawan: ‘ಜವಾನ್‘ ಅವತಾರ ತಾಳಿದ ಬಾಲಿವುಡ್ ಕಿಂಗ್​ ಖಾನ್, ಟೈಟಲ್ ಟೀಸರ್ ಬಿಡುಗಡೆ

ಜವಾನ್ ಅವತಾರದಲ್ಲಿ ಶಾರೂಖ್ ಖಾನ್:

ಸದ್ಯ ಪಠಾಣ್ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರುವ ಶಾರುಖ್ ಖಾನ್. ಇದರ ನಡುವೆ ಜವಾನ್ ಚಿತ್ರದ ಕೆಲಸದಲ್ಲಿಯೂ ಬಾಗಿಯಾಗಿದ್ದಾರೆ. ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾ ರಿಲೀಸ್ ದಿನಾಂಕವನ್ನೂ ಘೋಷಿಸಿದೆ. 2023ರ ಜೂನ್ 2ರಂದು ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರವು ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ. ಈ ಮೂಲಕ ಬಾಲಿವುಡ್​ ನ ಮೊದಲ ಸ್ಟಾರ್ ನಟರೊಬ್ಬರು ಫ್ಯಾನ್ ಇಂಡಿಯಾ ಸಿನಿಮಾ ಮಾಡಿದಂತಾಗುತ್ತದೆ.
Published by:shrikrishna bhat
First published: