• Home
  • »
  • News
  • »
  • sports
  • »
  •  Serena Williams: ಗ್ರ್ಯಾಂಡ್ ಸ್ಲಾಮ್ ರಾಣಿ ಸೆರೆನಾ ವಿಲಿಯಮ್ಸ್ , ಇಲ್ಲಿದೆ ಟೆನಿಸ್ ದಂತಕಥೆಯ ಸಾಧನೆ

 Serena Williams: ಗ್ರ್ಯಾಂಡ್ ಸ್ಲಾಮ್ ರಾಣಿ ಸೆರೆನಾ ವಿಲಿಯಮ್ಸ್ , ಇಲ್ಲಿದೆ ಟೆನಿಸ್ ದಂತಕಥೆಯ ಸಾಧನೆ

ಸೆರೆನಾ ವಿಲಿಯಮ್ಸ್

ಸೆರೆನಾ ವಿಲಿಯಮ್ಸ್

ಸೆರೆನಾ ವಿಲಿಯಮ್ಸ್ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಗೆದ್ದಿದ್ದಾರೆ. ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ನಂತರ ಸೆರೆನಾ ಎರಡನೇ ಸ್ಥಾನದಲ್ಲಿದ್ದಾರೆ.

  • Share this:

ಕಳೆದ ಎರಡು ದಶಕಗಳಿಂದ ಟೆನ್ನಿಸ್ ಲೋಕವನ್ನು ಆಳಿದ ಅಮೆರಿಕದ ಖ್ಯಾತ ಟೆನ್ನಿಸ್​ ಆಟರ್ಗಾತಿ ಸೆರೆನಾ ವಿಲಿಯಮ್ಸ್ (Serena Williams) ತಮ್ಮ ವೃತ್ತಿಜೀವನಕ್ಕೆ ವಿದಾಯ (Retirement)  ಹೇಳಲು ನಿರ್ಧರಿಸಿದ್ದಾರೆ. 40 ವರ್ಷದ ಸೆರೆನಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದು, ನಿವೃತ್ತಿಗೆ ಅಂತಿಮ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ ಮುಂಬರುವ ಯುಎಸ್ ಓಪನ್  ಸೆರೆನಾ ಅವರ ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಮ್ (Grand Slam)  ಪಂದ್ಯವಾಗಲಿದೆ. ಇನ್ನು, ಸೆರೆನಾ 1999 ರಲ್ಲಿ ಮೊದಲ ಬಾರಿಗೆ ಯುಎಸ್ ಓಪನ್ (The US Open) ಪಂದ್ಯಾವಳಿಯನ್ನು ಗೆದ್ದಿದ್ದರು.  ಜೀವನದಲ್ಲಿ ನಾವು ಬೇರೆ ದಿಕ್ಕಿನಲ್ಲಿ ಚಲಿಸಲು ನಿರ್ಧರಿಸುವ ಸಮಯ ಬರುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. 


ಗ್ರ್ಯಾಂಡ್ ಸ್ಲಾಮ್ ರಾಣಿ ಈ ಸೆರೆನಾ:


ಸೆರೆನಾ ವಿಲಿಯಮ್ಸ್ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಗೆದ್ದಿದ್ದಾರೆ. ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ನಂತರ ಸೆರೆನಾ ಎರಡನೇ ಸ್ಥಾನದಲ್ಲಿದ್ದಾರೆ. ಮಾರ್ಗರೆಟ್ ಕೋರ್ಟ್ 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದರು.


ಸೆರೆನಾ ಅವರ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳು:


ವಿಂಬಲ್ಡನ್ - 7
ಆಸ್ಟ್ರೇಲಿಯನ್ ಓಪನ್ - 7
ಅಮೇರಿಕನ್ ಓಪನ್ - 6
ಫ್ರೆಂಚ್ ಓಪನ್ - 3


ಸೆರೆನಾ ವಿಲಿಯಮ್ಸ್ ಸಾಧನೆ:


ಯುಎಸ್ ಓಪನ್ 2022ರ ನಂತರ ನಿವೃತ್ತಿ ಹೊಂದಲಿರುವ ಅಮೇರಿಕನ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ತಮ್ಮ ವೃತ್ತಿಜೀವನದಲ್ಲಿ 73 ಸಿಂಗಲ್ಸ್ ಮತ್ತು 23 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಹಿಳಾ ಟೆನಿಸ್ ಅಸೋಸಿಯೇಷನ್ ​​(WTA) ಪ್ರಕಾರ, 1995ರಲ್ಲಿ ವೃತ್ತಿಪರರಾಗಿ ಹೊರಹೊಮ್ಮಿದ 40 ವರ್ಷ ವಯಸ್ಸಿನವರು ಒಟ್ಟು $94,588,910 ವೃತ್ತಿಜೀವನದ ಬಹುಮಾನವನ್ನು ಗೆದ್ದಿದ್ದಾರೆ. ಸೆರೆನಾ 23 ಬಾರಿ ಸಿಂಗಲ್ಸ್ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿದ್ದಾರೆ. ಅವರು 365 ಗ್ರ್ಯಾಂಡ್ ಸ್ಲಾಮ್ ಪಂದ್ಯಗಳನ್ನು ಗೆದ್ದಿದ್ದಾರೆ.


ಇದನ್ನೂ ಓದಿ: 23 ಗ್ರ್ಯಾಂಡ್ ಸ್ಲಾಮ್ ಗೆದ್ದ ಟೆನಿಸ್ ದಂತಕಥೆ Serena Williams ನಿವೃತ್ತಿ ಘೋಷಣೆ!


ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ವಿದಾಯ:


ಮಾರ್ಗರೇಟ್ ಕೋರ್ಟ್ ದಾಖಲೆಯಿಂದ ಸೆರೆನಾ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.ಕಳೆದ ಎರಡು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಸೆರೆನಾ ಮೊದಲ ಸುತ್ತಿನಲ್ಲೇ ನಿರ್ಗಮಿಸಬೇಕಾಯಿತು. ಹಾಗಾಗಿ ಯುಎಸ್ ಓಪನ್ ಗೆಲ್ಲುವುದು ಸೆರೆನಾಗೆ ಸುಲಭವಾಗಿಲ್ಲ. ಆದರೆ ಪ್ರತಿಯೊಬ್ಬ ಟೆನಿಸ್ ಅಭಿಮಾನಿ ಸೆರೆನಾ ಗೆದ್ದು ಅಬ್ಬರದಿಂದ ಟೆನಿಸ್ ಅಂಗಳದಿಂದ ನಿರ್ಗಮಿಸಬೇಕೆಂದು ಬಯಸುತ್ತಿದ್ದಾರೆ.



ಇನ್ನು, ಸೆರೆನಾ ಅವರು ತಮ್ಮ ವಿದಾಯದ ಕುರಿತು ಇನ್ಸ್ಟಗ್ರಾಂನಲ್ಲಿ ವಿಸ್ಕ್ರತವಾದ ವಿವರಣೆಯನ್ನು ಬರೆದಿದ್ದು, ‘ನಿವೃತ್ತಿ ಎಂಬ ಪದವನ್ನು ನಾನು ಎಂದಿಗೂ ಇಷ್ಟಪಟ್ಟಿಲ್ಲ. ಇದು ನನಗೆ ಆಧುನಿಕ ಪದದಂತೆ ಭಾಸವಾಗುವುದಿಲ್ಲ. ನಾನು ಇದನ್ನು ಪರಿವರ್ತನೆ ಎಂದು ಭಾವಿಸುತ್ತೇನೆ, ಆದರೆ ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ. ನಾನು ಟೆನಿಸ್‌ನಿಂದ ದೂರವಾಗಿ, ನನಗೆ ಮುಖ್ಯವಾದ ಇತರ ವಿಷಯಗಳ ಕಡೆಗೆ ತೆರೆದುಕೊಳ್ಳಲಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ. ಕೆಲವು ವರ್ಷಗಳ ಹಿಂದೆ ನಾನು ಸದ್ದಿಲ್ಲದೆ ಸೆರೆನಾ ವೆಂಚರ್ಸ್, ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಪ್ರಾರಂಭಿಸಿದ್ದೇನೆ. ಜೊತೆಗೆ ನಾನು ನನ್ನ ಕುಟುಂಬದ ಜೊತೆ ಇರಲು ಬಯಸುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.  ಇನ್ನು, ಸೆರೆನಾ ಕೊನೆಯ ಬಾರಿಗೆ 2017ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು.

Published by:shrikrishna bhat
First published: