"ನಾನು ನಿಮ್ಮೊಂದಿಗಿದ್ದೇನೆ": ಕ್ರೀಡಾ ಸ್ಪರ್ಧಿಗಳಿಗೆ ಶೂಟರ್ ಅಭಿನವ್ ಬಿಂದ್ರಾ ಭರವಸೆ

Abhinav Bindra: ಈ ಸುದ್ದಿಗಳು ನನ್ನನ್ನು ವೈಯಕ್ತಿಕವಾಗಿ ವಿಚಲಿತಗೊಳಿಸಿದ್ದು, ಮತ್ತಷ್ಟು ಜೀವಗಳ ಹಾನಿ ತಡೆಯಲು ನಾವು ಕ್ಷಿಪ್ರವಾಗಿ ಜವಾಬ್ದಾರಿಯುತವಾಗಿ ಕಾರ್ಯೋನ್ಮುಖವಾಗಬೇಕಿದೆ” ಎಂದು ಅಭಿನವ್ ಬಿಂದ್ರಾ ತಮ್ಮ ಪತ್ರದಲ್ಲಿ ಹೇಳಿದ್ದು, ಅದನ್ನು ತಮ್ಮ ಟ್ವೀಟ್‌ನಲ್ಲಿ ಲಗತ್ತಿಸಿದ್ದಾರೆ

ಅಭಿನವ್‌ ಬಿಂದ್ರಾ

ಅಭಿನವ್‌ ಬಿಂದ್ರಾ

  • Share this:
ಕಳೆದ ಎರಡು ತಿಂಗಳಿನಿಂದ ನಾಲ್ವರು ಶೂಟರ್‌ಗಳು (Four shooter) ಆತ್ಮಹತ್ಯೆಗೆ ( Committed suicide ) ಶರಣಾಗಿದ್ದಾರೆ. 4ನೆಯ ಆತ್ಮಹತ್ಯೆ ವರದಿಯಾದ ಬೆನ್ನಲ್ಲೇ ಭಾರತೀಯ ರಾಷ್ಟ್ರೀಯ ರೈಫಲ್ ಒಕ್ಕೂಟಕ್ಕೆ (Indian National Rifle Federation ) ಪತ್ರ ಬರೆದಿರುವ ಖ್ಯಾತ ಶೂಟರ್ ಅಭಿನವ್ ಬಿಂದ್ರಾ ( Abhinav Bindra) , ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಸ್ಪರ್ಧಿಗಳಿಗೆ ಆಪ್ತ ಸಮಾಲೋಚನೆಯ(Counseling assistance) ನೆರವು ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಕ್ರೀಡಾಪಟುಗಳ ಆತ್ಮಹತ್ಯೆ ಪ್ರಕರಣ ಅವರನ್ನು ತೀವ್ರ ವಿಚಲಿತರಾಗುವಂತೆ ಮಾಡಿದ್ದು, ಅವರ ಮಾನಸಿಕ ಸಮಸ್ಯೆಗಳನ್ನು ಆಲಿಸಿ ನೆರವು ನೀಡಲು ಮುಂದಾಗಿದ್ದಾರೆ.

ತನಿಖೆ ಮುಂದುವರಿದಿದೆ
ಇದಕ್ಕೂ ಮುನ್ನ ಡಿಸೆಂಬರ್ 15ರ ಬುಧವಾರದಂದು 26 ವರ್ಷದ ಶೂಟರ್ ಕೋನಿಕಾ ಲಾಯಕ್ ಮೃತ ದೇಹವು ಹೌರಾದಲ್ಲಿರುವ ಅತಿಥಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಪ್ರಾಥಮಿಕ ವರದಿಯ ಪ್ರಕಾರ ಕೋನಿಕಾ ಲಾಯಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. “ಆಕೆ ತನಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ಸಂತೋಷವಾಗಿರಲಿಲ್ಲ ಮತ್ತು ಅದರಿಂದಾಗಿ ಖಿನ್ನಳಾಗಿದ್ದಳು ಎಂದೆನ್ನಿಸುತ್ತಿದೆ. ಹೀಗಿದ್ದೂ ತನಿಖೆ ಮುಂದುವರಿದಿದೆ” ಎಂದು ಅವರು ತಿಳಿಸಿದ್ದಾರೆ.

 ಇದನ್ನೂ ಓದಿ: National Shooter Dies by Suicide| ಮೊಹಾಲಿಯಲ್ಲಿ ರಾಷ್ಟ್ರೀಯ ಶೂಟರ್ ನಮನ್ವೀರ್ ಸಿಂಗ್ ಆತ್ಮಹತ್ಯೆ!

ಆತ್ಮಹತ್ಯೆಗೆ ಶರಣಾದ ಕೋನಿಕಾ ಲಾಯಕ್
ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾದ ಶೂಟರ್‌ಗಳ ಪೈಕಿ ಕೋನಿಕಾ ಲಾಯಕ್ ನಾಲ್ಕನೆಯವರಾಗಿದ್ದಾರೆ. ಇದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ ಹುನಾರ್ದೀಪ್ ಸಿಂಗ್ ಸೋಹಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಜೀವನ ಅಂತ್ಯಗೊಳಿಸಿಕೊಂಡಿದ್ದರು.

ಇದಾದ ನಂತರ ವಿಶ್ವವಿಶ್ವವಿದ್ಯಾಲಯ ಕ್ರೀಡೆಯಲ್ಲಿ ಕಂಚಿನ ಪದಕ ಜಯಿಸಿದ್ದ ನಮನ್ವೀರ್ ಸಿಂಗ್ ಬ್ರಾರ್ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದರು. ಅವರು ಅಕ್ಟೋಬರ್‌ನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಚಾಂಪಿಯನ್ ಷಿಪ್‌ನಲ್ಲೂ ಭಾಗವಹಿಸಿದ್ದರು.ಶೂಟರ್‌ಗಳ ಈ ಅನಿರೀಕ್ಷಿತ ಆತ್ಮಹತ್ಯೆಗಳಿಂದ ವಿಚಲಿತರಾಗಿರುವ ಅಭಿನವ್ ಬಿಂದ್ರಾ, ಭಾರತೀಯ ರಾಷ್ಟ್ರೀಯ ರೈಫಲ್ಸ್ ಒಕ್ಕೂಟದ ಅಧ್ಯಕ್ಷ ರಣೀಂದರ್ ಸಿಂಗ್‌ಗೆ ಪತ್ರ ಬರೆದಿದ್ದಾರೆ.

ಟ್ವೀಟ್‌ ನಲ್ಲಿ ಪತ್ರ ಶೇರ್
“ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕ್ರೀಡಾಪಟುಗಳ ಆತ್ಮಹತ್ಯೆಯ ವಿದ್ಯಮಾನಗಳನ್ನು ತಮ್ಮ ಗಮನಕ್ಕೆ ತರಲು ಈ ಪತ್ರ ಬರೆಯುತ್ತಿದ್ದೇನೆ. ಈ ಸುದ್ದಿಗಳು ನನ್ನನ್ನು ವೈಯಕ್ತಿಕವಾಗಿ ವಿಚಲಿತಗೊಳಿಸಿದ್ದು, ಮತ್ತಷ್ಟು ಜೀವಗಳ ಹಾನಿ ತಡೆಯಲು ನಾವು ಕ್ಷಿಪ್ರವಾಗಿ ಜವಾಬ್ದಾರಿಯುತವಾಗಿ ಕಾರ್ಯೋನ್ಮುಖವಾಗಬೇಕಿದೆ” ಎಂದು ಅಭಿನವ್ ಬಿಂದ್ರಾ ತಮ್ಮ ಪತ್ರದಲ್ಲಿ ಹೇಳಿದ್ದು, ಅದನ್ನು ತಮ್ಮ ಟ್ವೀಟ್‌ನಲ್ಲಿ ಲಗತ್ತಿಸಿದ್ದಾರೆ.

ಕ್ರೀಡಾಪಟುಗಳಲ್ಲಿ ಜಾಗೃತಿ
“ಕ್ರೀಡಾಪಟುಗಳೂ ಕೂಡಾ ಮನುಷ್ಯರು. ಅವರೂ ಕೂಡಾ ಆತಂಕ, ಖಿನ್ನತೆಗೆ ಒಳಗಾಗುತ್ತಾರೆ. ಅಂಥವರು ತಮ್ಮ ಕ್ರೀಡೆಯಲ್ಲಿ ಸಾಧನೆ ಮಾಡಲು ಅವರಿಗೆ ಸುರಕ್ಷಿತ ಮತ್ತು ಸಂಪರ್ಕಿತ ವಾತಾವರಣ ಸೃಷ್ಟಿಸಬೇಕಿದೆ. ನಮ್ಮ ಉದ್ದೇಶ ಕ್ರೀಡಾಪಟುಗಳು ಹಾಗೂ ತರಬೇತಿದಾರರಿಗೆ ನೆರವು ನೀಡುವುದಾಗಿದೆ. ಈ ಪತ್ರದ ಮೂಲಕ ನಾನು ಕ್ರೀಡಾಪಟುಗಳು, ತರಬೇತಿದಾರರು, ಆಡಳಿತ ಮಂಡಳಿ ಸದಸ್ಯರು, ಪೋಷಕರು ಹಾಗೂ ಇತರ ಕ್ರೀಡಾ ವಾತಾವರಣಕ್ಕೆ ಅಗತ್ಯವಿರುವ ಸಮಯ ಮತ್ತು ಶಕ್ತಿಯನ್ನು ನಮ್ಮ ತಂಡ ವಿನಿಯೋಗಿಸಲು ಬಯಸುತ್ತದೆ.

ನೀವು ನನ್ನ ಪ್ರಸ್ತಾವನೆ ಅಂಗೀಕರಿಸುತ್ತೀರೆಂಬ ಆಶಾಭಾವನೆ ಹೊಂದಿದ್ದೇನೆ. ಹಾಗೂ ಎಲ್ಲ ಬಗೆಯ ಕ್ರೀಡಾ ವಾತಾವರಣದಲ್ಲಿರುವ ಕ್ರೀಡಾಪಟುಗಳಲ್ಲಿ ಜಾಗೃತಿ ಮತ್ತು ಮಾನಸಿಕ ಸ್ವಾಸ್ಥ್ಯ ಸುಧಾರಿಸಲು ಮುಖಾಮುಖಿ ಸಂವಾದಕ್ಕೆ ಅವಕಾಶ ನೀಡುತ್ತೀರೆಂದು ಭರವಸೆ ಹೊಂದಿದ್ದೇನೆ” ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಚಿನ್ನದ ಪದಕ ವಿಜೇತೆ
ಲಾಯಕ್ ಜಾರ್ಖಂಡ್ ರಾಜ್ಯದ ಚಿನ್ನದ ಪದಕ ವಿಜೇತೆ ಶೂಟರ್ ಆಗಿದ್ದರು. ಅವರಿಗೆ 2012ರ ಒಲಿಂಪಿಯನ್ ಜೋಯ್ ದೀಪ್ ಕರ್ಮಾಕರ್‌ರಿಂದ ತರಬೇತಿ ಕೊಡಿಸಲು ಅವರನ್ನು ಕಳೆದ ಜುಲೈನಲ್ಲಿ ಕೋಲ್ಕತ್ತಾಗೆ ಕಳುಹಿಸಿಕೊಡಲಾಗಿತ್ತು. ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ಜೋಯ್ ದೀಪ್ ಕರ್ಮಾಕರ್, ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಆಕೆಯ ಸಾಧನೆ ಕುರಿತ ವರದಿಯನ್ನು ಓದಿದ ನಂತರ ತಮ್ಮ ಬಳಿ ಉನ್ನತ ಶಿಕ್ಷಣ ಪಡೆಯುವಂತೆ ಆಮಂತ್ರಿಸಿದ್ದರು.

ಇದನ್ನೂ ಓದಿ: ಮತ್ತೆ ಫೋಟೋಶೂಟ್​ಗಳಲ್ಲಿ ಮಿಂಚಲಾರಂಭಿಸಿದ ಒಲಂಪಿಕ್​ ಪದಕ ವಿಜೇತೆ P V Sindhu

ಕರ್ಮಾಕರ್ ಪ್ರಕಾರ, “ಲಾಯಕ್ ಅತ್ಯಂತ ಶ್ರದ್ಧೆಯಿಂದ ತರಬೇತಿ ಪಡೆಯುತ್ತಿದ್ದರು. ಆದರೆ, ಕಳೆದ 10ಕ್ಕೂ ಹೆಚ್ಚು ದಿನಗಳಿಂದ ಆಕೆ ತರಬೇತಿಗೆ ಹಾಜರಾಗಿರಲಿಲ್ಲ. ಆಕೆಯನ್ನು ಸಂಪರ್ಕಿಸಿದಾಗ ತಾನು ಅನಾರೋಗ್ಯಕ್ಕೀಡಾಗಿದ್ದೇನೆ. ಚೇತರಿಸಿಕೊಂಡ ನಂತರ ತರಬೇತಿ ಸೇರಿಕೊಳ್ಳುತ್ತೇನೆ” ಎಂದು ಉತ್ತರಿಸಿದ್ದಳು.
Published by:vanithasanjevani vanithasanjevani
First published: