• Home
  • »
  • News
  • »
  • sports
  • »
  • AB de Villiers: ನಾನು ಚೇಂಜ್ ರೂಂನಲ್ಲಿ ಅವರೊಂದಿಗೆ ಕುಳಿತು ಬಿಯರ್ ಕುಡಿಯುತ್ತಿದ್ದೆ, ಅಚ್ಚರಿಯ ಹೇಳಿಕೆ ನೀಡಿದ RCB ಮಾಜಿ ಪ್ಲೇಯರ್​

AB de Villiers: ನಾನು ಚೇಂಜ್ ರೂಂನಲ್ಲಿ ಅವರೊಂದಿಗೆ ಕುಳಿತು ಬಿಯರ್ ಕುಡಿಯುತ್ತಿದ್ದೆ, ಅಚ್ಚರಿಯ ಹೇಳಿಕೆ ನೀಡಿದ RCB ಮಾಜಿ ಪ್ಲೇಯರ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

AB de Villiers: ಎಬಿ ಡಿವಿಲಿಯರ್ಸ್ ವಿಶ್ವದ ಲೆಜೆಂಡರಿ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್‌ನಲ್ಲಿ ಅವರ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಅವರು ಒಂದು ಅಚ್ಚರಿಯ ಹೇಲಿಕೆಯನ್ನು ನೀಡಿದ್ದಾರೆ.

  • Share this:

ಐಪಿಎಲ್‌ನಲ್ಲಿ ಪ್ರಸಿದ್ಧ ಪ್ರಾಂಚೈಸಿಗಳಲ್ಲಿ ಒಂದಾದ ಆರ್​ಸಿಬಿ (RCB) ತಂಡದ ಮಾಜಿ ವಿದೇಶಿ ಆಟಗಾರ ಎಬಿ ಡಿವಿಲಿಯರ್ಸ್ (AB de Villiers) ಎಂದರೆ ಬೆಂಗಳೂರು ಅಭಿಮಾನಿಗಳಿಗೆ ವಿಶೇಷ ಅಭಿಮಾನ. ದಕ್ಷಿಣ ಆಫ್ರಿಕಾದ ಈ ಅನುಭವಿ ಪ್ಲೇಯರ್ ಐಪಿಎಲ್‌ನಲ್ಲಿ ಮಾತ್ರವಲ್ಲದೆ ಕ್ರಿಕೆಟ್‌ನ ಪ್ರತಿಯೊಂದು ಸ್ವರೂಪದಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ಅವರು ಈ ವರ್ಷ ಐಪಿಎಲ್‌ನಲ್ಲಿ (IPL) ಕಾಣಿಸಿಕೊಳ್ಳುವುದಿಲ್ಲ. ಅವರು 2021 ರಲ್ಲಿ ಐಪಿಎಲ್ ಮತ್ತು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತರಾದರು. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, ಅವರು ಐಪಿಎಲ್‌ನಲ್ಲಿ ಅತ್ಯುತ್ತಮವಾಗಿ ಕಳೆದ ಕ್ಷಣ ಯಾವುದು ಎಂದು ಕೇಳಲಾಯಿತು. ಈ ಪ್ರಶ್ನೆಗೆ ಅವರು ಅದ್ಭುತ ಉತ್ತರ ನೀಡಿದ್ದು, ಇದೀಗ ಅ ವಿಚಾರ ಎಲ್ಲಡೆ ಸಖತ್ ವೈರಲ್ ಆಗಿದೆ.


ನಾವು ಜೊತೆಯಾಗಿ ಕುಳಿತು ಬಿಯರ್​ ಕುಡಿಯುತ್ತಿದ್ದೆವು:


ಡಿವಿಲಿಯರ್ಸ್ ಕ್ರಿಕೆಟ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, "ನನಗೆ ಮತ್ತು ಇತರ ಬಹಳಷ್ಟು ಆಟಗಾರರಿಗೆ ಇದು ಒಂದು ದೊಡ್ಡ ಅವಕಾಶವಾಗಿತ್ತು. ಐಪಿಎಲ್ ಆರಂಭವು ನಮ್ಮ ಜೀವನವನ್ನು ಬದಲಾಯಿಸಿತು. ಜನರು ನಿಜವಾಗಿಯೂ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದಾರೆ. ನನಗೆ ದೊಡ್ಡ ವಿಷಯವೆಂದರೆ ನಾನು ಅನೇಕ ಜನರನ್ನು ಭೇಟಿಯಾಗಿದ್ದೇನೆ. ನಾನು ಗ್ಲೆನ್ ಮೆಕ್‌ಗ್ರಾತ್ ಮತ್ತು ಅವನೊಂದಿಗೆ ಕಳೆದ ಸಮಯಗಳ ಬಗ್ಗೆ ಯೋಚಿಸುತ್ತೇನೆ. ಅವರು ತುಂಬಾ ಕಟ್ಟುನಿಟ್ಟಾದ ವ್ಯಕ್ತಿಯಾಗಿದ್ದರು. ನಾನು ಅವನೊಂದಿಗೆ ಚೇಂಜ್ ರೂಂನಲ್ಲಿ ಕುಳಿತು ಬಿಯರ್ ಕುಡಿಯುತ್ತಿದ್ದೆ‘ ಎಂದು ಐಪಿಎಲ್​ ಸಮಯದ ಸುಂದರ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ.


ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮೆಕ್‌ಗ್ರಾತ್ ಇಬ್ಬರೂ ಮೊದಲ ಎರಡು ಸೀಸನ್‌ಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಆಟವಾಡಿದ್ದರು. ಗ್ಲೆನ್ ಮೆಕ್‌ಗ್ರಾತ್ ಐಪಿಎಲ್ ಆರಂಭಿಕ ಋತುವಿನಲ್ಲಿ ಅದ್ಭುತ ಆಟವಾಡಿದ್ದರು. ಉದ್ಘಾಟನಾ ಋತುವಿನಲ್ಲಿ ಅವರ ಎಕಾನಮಿ ರೇಟ್​ ಉತ್ತಮವಾಗಿತ್ತು. 2010ರ ಐಪಿಎಲ್ ನಂತರ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅದೇ ಎಬಿ ಡಿವಿಲಿಯರ್ಸ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಪ್ರಾರಂಭಿಸಿದರು. ಅವರು 2011 ರಲ್ಲಿ RCB ಗೆ ಸೇರಿದರು. ನಂತರ ಸತತ 11 ಋತುಗಳಲ್ಲಿ RCB ತಂಡದ ಭಾಗವಾಗಿದ್ದರು. ಆರ್‌ಸಿಬಿ ಪರ 157 ಪಂದ್ಯಗಳಲ್ಲಿ 4522 ರನ್ ಗಳಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಒಟ್ಟು 3 ಶತಕಗಳನ್ನು ಸಿಡಿಸಿದ್ದಾರೆ.


ರಿಷಬ್-ಎಬಿಡಿ ಭೇಟಿ:


ಕನ್ನಡದ ಕಾಂತಾರ ಸಿನಿಮಾ ಭರ್ಜರಿಯಾಗಿ ಹಿಟ್​ ಆಗಿತ್ತು. ಕಾಂತಾರಾ ಸಿನಿಮಾದ ಯಶಸ್ಸಿನ ವೇಳೆ ಬೆಂಗಳೂರಿಗೆ ಆಗಮಿಸಿದ್ದ ಮಾಜಿ ಆರ್​ಸಿಬಿ ಆಟಗಾರ ಎಬಿಡಿ ವಿಲಿಯರ್ಸ್​ ಅವರು ಕಾಂತಾರ ಸಿನಿಮಾದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಭೇಟಿ ಆಗಿದ್ದಾರೆ. ಅಲ್ಲದೇ ಈ ವೇಳೆ ರಿಷಬ್ ಮತ್ತು ಎಬಿಡಿ ಇಬ್ಬರೂ ಕಾಂತಾರ ಚಿತ್ರದ ಡೈಲಾಗ್ ಹೇಳಿದ್ದಾರೆ. ಈ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದು ಪಂದ್ಯ. ನಿಜವಾದ 360ಯನ್ನು ಇಂದು ಭೇಟಿ ಮಾಡಿದ್ದೇನೆ. ನಮ್ಮ ಬೆಂಗಳೂರಿಗೆ ಸೂಪರ್​ ಹೀರೋ ಮರಳಿ ಬಂದಿದ್ದಾರೆ’ ಎಂದು ರಿಷಬ್​ ಶೆಟ್ಟಿ ಅವರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: IPL 2023: ಐಪಿಎಲ್​ 10 ತಂಡಗಳ ಸಂಪೂರ್ಣ ಆಟಗಾರರ ಲಿಸ್ಟ್​, ಯಾವ ತಂಡ ಬಲಿಷ್ಠವಾಗಿದೆ? RCB ಟೀಂ ಹೇಗಿದೆ?Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು