ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡ ಎಬಿಡಿ ಕುಟುಂಬ

news18
Updated:August 13, 2018, 2:43 PM IST
ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡ ಎಬಿಡಿ ಕುಟುಂಬ
news18
Updated: August 13, 2018, 2:43 PM IST
ನ್ಯೂಸ್ 18 ಕನ್ನಡ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಅವರು ತಮ್ಮ 5ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

ಈ ಕುರಿತು ತನ್ನ ಅಧಿಕೃತ ಇನ್​​​ಸ್ಟಗ್ರಾಂ ಖಾತೆಯಲ್ಲಿ ಅದ್ಭುತ ವೀಕೆಂಡ್ ಎಂದು ಬರೆದು ಎಬಿಡಿ ಫೋಟೋವನ್ನು ಹಂಚಿಕೊಂಡಿದ್ದು, ಪತ್ನಿ ಡೇನಿಯಲ್ ಅವರು ಎಬಿಡಿಗೆ ಸರ್ಪೈಸ್ ಕೂಡ ಕೊಟ್ಟಿದ್ದಾರಂತೆ. ಜಾಂಬಿಯಾ ಹಾಗೂ ಜಿಂಬಾಬ್ವೆ ಗಡಿ ಪ್ರದೇಶದಲ್ಲಿರುವ ನ್ಯಾಷನಲ್ ಪಾರ್ಕ್​​ಗೆ ಭೇಟಿ ನೀಡಿರುವ ಎಬಿಡಿ ಕುಟುಂಬ ಅಮೋಘ ಜಲಪಾತವೊಂದನ್ನು ಕಣ್ಣುತುಂಬಿಕೊಳ್ಳುವ ಮೂಲಕ ಸಂತೋಷದಿಂದ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಎಬಿಡಿ ಹಂಚಿಕೊಂಡಿರುವ ಈ ಫೋಟೋಕ್ಕೆ 'ಶುಭಾಷಯಗಳು ಮಿ. ಲಿಜೆಂಡ್' ಕಮೆಂಟ್ ಸೇರಿದಂತೆ ಅನೇಕರು ಶುಭಕೋರಿದ್ದಾರೆ.

 


Loading...


What a weekend! 5 year anniversary 🌈🍾🥂🛶⛺️ @danielledevilliers jy’s amazing! Best surprise ever


A post shared by AB de Villiers (@abdevilliers17) on


ಎಬಿಡಿ ವಿಲಿಯರ್ಸ್​ ಅವರು ಕಳೆದ ಮಾರ್ಚ್ 23 ರಂದು ಎಲ್ಲ ಮಾದರಿಯ ಅಂತರಾಷ್ಟ್ರೀಯಾ ಕ್ರಿಕೆಟ್​ಗೆ ದಿಢೀರ್ ವಿದಾಯ ಹೇಳಿದ್ದರು. ಬಳಿಕ ಮೊನ್ನೆಯಷ್ಟೆ ನಾನು ಇನ್ನೂ ಕೆಲ ವರ್ಷ ಐಪಿಎಲ್ ಟೂರ್ನಿಯಲ್ಲಿ ಆಡಲಿದ್ದೇನೆ ಎಂದು ಹೇಳಿ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದ್ದರು.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...